More

    ಯೂಕ್ರೇನ್‌ನಲ್ಲಿ ಸಿಲುಕಿರುವ ಹರಪನಹಳ್ಳಿಯ ನಾಲ್ವರು

    ಎಂಬಿಬಿಎಸ್ ಅಧ್ಯಯನಕ್ಕೆ ತೆರಳಿರುವ ವಿದ್ಯಾರ್ಥಿಗಳು | ಪಾಲಕರೊಂದಿಗೆ ದೂರವಾಣಿ ಸಂಪರ್ಕ

    ಹರಪನಹಳ್ಳಿ: ಯುದ್ಧ ಪೀಡಿತ ಯೂಕ್ರೇನ್ ದೇಶದಲ್ಲಿ ಹರಪನಹಳ್ಳಿ ತಾಲೂಕಿನ ನಾಲ್ವರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಇವರ ಪಾಲಕರು ಆತಂಕಗೊಂಡಿದ್ದಾರೆ.

    ಎಂಬಿಬಿಎಸ್ ಅಧ್ಯಯನಕ್ಕೆ ತೆರಳಿರುವ ಪಟ್ಟಣದ ವಿಕಾಸ ಪಾಟೀಲ್, ಸಂಜಯ ಹಾಗೂ ಲಾವಣ್ಯ ಹಾಗೂ ತಾಲೂಕಿನ ಕೆಸರಹಳ್ಳಿ ಗ್ರಾಮದ ಜಿ.ಎನ್.ಗಗನ್ ದೀಪ ಯೂಕ್ರೇನ್‌ನಲ್ಲಿ ಸಿಲುಕಿಕೊಂಡವರು. ಖರ್ಕ್ಯೂ ನಗರದಲ್ಲಿ ಗಗದೀಪ ಎಂಬಿಬಿಎಸ್ ಪ್ರಥಮ, ಜಾರ್ಪೋಜಾವ್ ರಾಜ್ಯದ ಕಾಲೇಜೊಂದರಲ್ಲಿ ಗೌಡ್ರು ವಿಕಾಸಪಾಟೀಲ್ ಮತ್ತು ಸಂಜಯ ಮೂರನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದರೆ, ಪೋಲ್ಯಾಂಡೊದಲ್ಲಿ ಲಾವಣ್ಯ ಎಂಬಿಬಿಎಸ್ ಎರಡನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಆ ದೇಶದ ಮೇಲೆ ರಷ್ಯಾ ದಾಳಿ ನಡೆಸುತ್ತಿರುವ ಕಾರಣ ಅತ್ತ ವಿದ್ಯಾರ್ಥಿಗಳು ಭಯಗೊಂಡಿದ್ದರೆ, ಇತ್ತ ಪಾಲಕರು ಆತಂಕಕ್ಕೆ ಈಡಾಗಿದ್ದಾರೆ.

    ಸಂಜಯ ಹಾಗೂ ಗೌಡ್ರು ವಿಕಾಸ ವಿಜಯವಾಣಿಯೊಂದಿಗೆ ವಾಟ್ಸ್‌ಆ್ಯಪ್ ಕಾಲ್‌ನಲ್ಲಿ ಮಾತನಾಡಿದ್ದಾರೆ. ‘ನಾವು ಈಗ ಸುರಕ್ಷಿತವಾಗಿದ್ದೇವೆ. ನಾವಿರುವ ರಾಜ್ಯದ ಮೇಲೆ ಇನ್ನೂ ದಾಳಿ ನಡೆದಿಲ್ಲ. ಯಾವಾಗ ಬೇಕಾದರೂ ದಾಳಿ ನಡೆಯಬಹುದು. ಒಟ್ಟಿನಲ್ಲಿ ಆತಂಕ ಸ್ಥಿತಿ ಇದೆ. ಲಗೇಜ್‌ಗಳೊಂದಿಗೆ ಸಿದ್ಧ್ದವಾಗಿರಿ. ಪೋಲಂಡ್ ಗಡಿಭಾಗಕ್ಕೆ ವಿಮಾನ ಕಳಿಸಿ ಕರೆಸಿಕೊಳ್ಳುತ್ತೇವೆ ಎಂದು ಭಾರತ ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾವು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

    ಏತನ್ಮಧ್ಯೆ ಯೂಕ್ರೇನ್‌ನಲ್ಲಿರುವ ಸಂಜಯ, ವಿಕಾಸ ಮತ್ತಿತರ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಹರಪನಹಳ್ಳಿ ಡಿವೈಎಸ್‌ಪಿ ಹಾಲಮೂರ್ತಿರಾವ್, ಎದೆಗುಂದಬೇಡಿ ಎಂದು ದೈರ್ಯ ತುಂಬಿದ್ದಾರೆ.

    ಇತ್ತ ಗೌಡ್ರು ವಿಕಾಸ ಪಾಟೀಲ್ ಅವರ ತಾಯಿ ಶಿಕ್ಷಕಿ ಬಂದಮ್ಮ ಮಾತನಾಡಿ, ‘ನಿನ್ನೆ ಸಂಜೆ ನಮ್ಮ ಮಗನೊಂದಿಗೆ ಮಾತನಾಡಿದ್ದೇನೆ. ಯೂಕ್ರೇನ್‌ನಲ್ಲಿ ಭಯದ ವಾತವಾರಣವಿದೆ. ಅಲ್ಲಿನ ಸರ್ಕಾರ ಜನರಿಗೆ ತೊಂದರೆಯಾಗದಂತೆ ಬಂಕರ್‌ವೊಂದರಲ್ಲಿರಲು ವ್ಯವಸ್ಥೆ ಮಾಡಿದೆ. ಆದರೆ, ಅಲ್ಲಿ ಊಟವಿಲ್ಲ. ಕನಿಷ್ಠ ನೀರೂ ಕೊಟ್ಟಿಲ್ಲ ಎಂದು ಅಳಲು ತೊಡಿಕೊಂಡಿದ್ದಾರೆ.

    ನಮ್ಮ ಮಗ ದೂರವಾಣಿ ಕರೆ ಮಾಡಿದ್ದ. ಸದ್ಯ ಸಮಸ್ಯೆ ಇಲ್ಲ. ಚನ್ನಾಗಿದ್ದೇವೆ ಎಂದು ತಿಳಿಸಿದ್ದಾನೆ. ನಾಗರಿಕರಿಗೆ ತೊಂದರೆ ಮಾಡುವುದಿಲ್ಲ ಎಂದು ರಷ್ಯಾ ಹೇಳಿದೆ. ಆದರೂ ನಮ್ಮಲ್ಲಿ ಆತಂಕ ಮನೆ ಮಾಡಿದೆ. ಆದಷ್ಟು ಬೇಗ ಕೇಂದ್ರ ಸರ್ಕಾರ ದೇಶದ ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಬೇಕು ಎಂದು ಜಿ.ಎನ್.ಗಗನ್‌ದೀಪ ತಾಯಿ ಸುನಂದಾ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts