More

    ವಸತಿ ಶಾಲೆ ಮೇಲ್ವಿಚಾರಕರ ಬದಲಾವಣೆಗೆ ಶಾಸಕ ಜಿ.ಕರುಣಾಕರರೆಡ್ಡಿ ಸೂಚನೆ


    ಹರಪನಹಳ್ಳಿ: ಪಟ್ಟಣದ ಬಿಇಒ ಕಚೇರಿ ಬಳಿಯ ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಬಾಲಕಿಯರ ವಸತಿ ನಿಲಯಕ್ಕೆ ಶಾಸಕ ಜಿ.ಕರುಣಾಕರರೆಡ್ಡಿ ಭಾನುವಾರ ಭೇಟಿ ನೀಡಿ ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.

    ಇಲ್ಲಿ ಊಟ ಸರಿ ಇರುವುದಿಲ್ಲ, ರೇಷನ್ ಇದ್ದರೂ ಏನೂ ಕೊಡುವುದಿಲ್ಲ. ಶೌಚಗೃಹ ಸ್ವಚ್ಛತೆ ಇಲ. ಕುಡಿವ ನೀರಿನ ಸಮಸ್ಯೆ ಇದೆ ಎಂದು ವಸತಿ ನಿಲಯದ ಬಾಲಕಿಯರು ದೂರಿದರು.

    ನಿಗದಿ ಪಡಿಸಿದ ರೇಷನ್ ಕೊಡುತ್ತಿಲ್ಲವೆಂದು ಅಡುಗೆ ತಯಾರಕರು ದೂರಿದರು. ಶೌಚಗೃಹ ವೀಕ್ಷಿಸಿ, ವಾರ್ಡನ್ ಗೀತಮ್ಮರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಇನ್ನೊಬ್ಬರಿಗೆ ಜವಾಬ್ದಾರಿ ಕೊಡುವಂತೆ ಬಿಇಒ ಬಸವರಾಜಪ್ಪ ಹಾಗೂ ಶಿಕ್ಷಕಿ ಲತಾ ರಾಥೋಡ್‌ಗೆ ಶಾಸಕ ಜಿ.ಕರುಣಾಕರರೆಡ್ಡಿ ಸೂಚಿಸಿದರು. ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್, ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ, ನಿಟ್ಟೂರು ಸಣ್ಣಹಾಲಪ್ಪ, ಆರ್.ಲೋಕೇಶ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts