More

    ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಇನ್ನಷ್ಟು ಬಿಗಿ

    ಹರಪನಹಳ್ಳಿ: ದಾವಣಗೆರೆಯಲ್ಲಿ ಕರೊನಾ ಸೋಕಿಂತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ದಾವಣಗೆರೆ -ಹರಪನಹಳ್ಳಿ ಮಧ್ಯದ ಗಡಿಗಳಲ್ಲಿ ಹೆಚ್ಚುವರಿ ಮೂರು ಚೆಕ್‌ಪೋಸ್ಟ್‌ಗಳನ್ನು ತೆರೆದು ತಪಾಸಣೆ ಇನ್ನಷ್ಟು ಬಿಗಿಗೊಳಿಸಲಾಗಿದೆ.
    ಕಂಚಿಕೇರಿ ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿ, ಹರಿಹರ ರಸ್ತೆಯ ಆಶ್ರಯ ಬಡಾವಣೆ, ಅರಸಿಕೇರಿ ರಸ್ತೆಯ ದೇವರ ತಿಮಲಾಪುರ ಬಳಿ ಮೂರು ಹೊಸ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ, ಈಗ ಚೆಕ್‌ಪೋಸ್ಟ್ ಗಳ ಸಂಖ್ಯೆ 9ಕ್ಕೆ ಏರಿಕೆಯಾಗಿವೆ.
    ದಾವಣಗೆರೆಯ ಕ್ವಾರಂಟೈನ್ ಬಡಾವಣೆಯಿಂದ ಹರಪನಹಳ್ಳಿಯ ಮಗಳ ಮನೆಗೆ ಏ.29 ರಂದು ಬಂದಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ಆತನನ್ನು ಏ.30ರ ರಾತ್ರಿ ದಾವಣಗೆರೆಗೆ ಕಳುಹಿಸಲಾಗಿದೆ. ಆತನ ಮಗಳ ಮನೆಯವರನ್ನು ಹೋಂ ಕ್ವಾರಂಟೈನಲ್ಲಿ ಇರಿಸಲಾಗಿದೆ ಎಂದು ಡಿವೈಎಸ್ಪಿ ಮಲ್ಲೇಶ ದೊಡ್ಮನಿ ತಿಳಿಸಿದ್ದಾರೆ.
    ದಾವಣೆಗೆರೆಗೆ ಸಂಚರಿಸಲು ಅನುಕೂಲವಾಗಿದ್ದ ರಾಗಿಮಸಲವಾಡ ಮತ್ತು ಶಿಂಗ್ರಿಹಳ್ಳಿಯ ಒಳಮಾರ್ಗದ ರಸ್ತೆಗೆ ಟ್ರಂಚ್ ಹಾಕಿ ವಾಹನಗಳು ಓಡಾಡದಂತೆ ಬಂದ್ ಮಾಡಲಾಗಿದೆ. ಉಪ ವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ ಕಾರ್ಯಾಚರಣೆಗೆ ಇಳಿದು ದುಗ್ಗಾವತಿಯಲ್ಲಿ ಅನವಶ್ಯಕವಾಗಿ ಓಡಾಡುತ್ತಿದ್ದ 9 ಬೈಕ್‌ಗಳನ್ನು ಜಪ್ತು ಮಾಡಿದ್ದಾರೆ.
    ಪಟ್ಟಣದಿಂದ ದಾವಣಗೆರೆಗೆ ಹೋಗಿ ಬರುವವರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕಾರ್ಯಾಚರಣೆ ಚುರುಕಾಗಿ ನಡೆದಿದೆ ಎಂದು ಉಪ ವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts