More

    ಸಾಮೂಹಿಕ ವಿವಾಹ ಬಡವರಿಗೆ ವರದಾನ : ಮಾಜಿ ಶಾಸಕ ದೊಡ್ಡನಗೌಡ ಪಾಟೀಲ

    ಹನುಮಸಾಗರ: ಸಾಮೂಹಿಕ ವಿವಾಹಗಳು ಬಡವರ ಆರ್ಥಿಕ ಭಾರ ತಗ್ಗಿಸುತ್ತವೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
    ಪಟ್ಟಣದ ಬೀರಲಿಂಗೇಶ್ವರ ಜಾತ್ರೋತ್ಸವ ನಿಮಿತ್ತ ಹಾಲುಮತ ಸಮುದಾಯ ಶನಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮೂಹಿಕ ಮದುವೆಯಿಂದ ಬಡವರಿಗೆ ವರದಾನವಾಗಿವೆ. ಸತಿಪತಿಗಳಿಬ್ಬರು ಜೀವನದಲ್ಲಿ ಒಬ್ಬರನ್ನೊಬ್ಬರು ಅರಿತು ಹೊಂದಾಣಿಕೆಯಿಂದ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
    ಹಾಲುಮತ ಸಮುದಾಯದ ತಾಲೂಕಾಧ್ಯಕ್ಷ ಮಲ್ಲಣ್ಣ ಪಲ್ಲೆದ ಮಾತನಾಡಿ, ನಿಸ್ವಾರ್ಥದಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಬಡಜನರಿಗೆ ಸಹಾಯವಾಗಲಿದೆ. ಸತಿಪತಿಗಳ ಜೀವನ ಮತ್ತೊಬ್ಬರಿಗೆ ಮಾದರಿಯಾಗಿರಲಿ ಎಂದರು. ಮುಖಂಡರಾದ ಬಸವರಾಜ ಹಕ್ಕಿ, ಮೊಹಿನಿದ್ದೀನ್ ಖಾಜಿ ಮಾತನಾಡಿದರು. ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪಿಡಿಒ ದೇವೇಂದ್ರ ಕಮತರ, ಪ್ರಮುಖರಾದ ಭರಮಪ್ಪ ಬಿಂಗಿ, ಸಂಕ್ರಪ್ಪ ಬಿಂಗಿ, ಅಂಬಾಸಾ ರಂಗ್ರೇಜ್, ಬಸವರಾಜ ದೇವಣ್ಣನವರ, ಚಂದ್ರು ಬೆಳಗಲ್ ರುದ್ರಗೌಡ್ರ ಗೌಡಪ್ಪನವರ, ನಾಗರಾಜ ಕಂದಗಲ್, ಸೂಚಪ್ಪ ದೇವರಮನಿ, ಮಾರುತಿಸಾ ರಂಗ್ರೇಜ್, ಚಂದಪ್ಪ ಹಕಿ, ಮಹಾಂತೇಶ ಕುಷ್ಟಗಿ, ಪರಸಪ್ಪ ಚಳಗೇರಿ, ಮಂಜುನಾಥ, ಮರೇಗೌಡ ಬೋದುರ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts