More

    ರಂಗಕ್ಷೇತ್ರಕ್ಕೆ ಚೈತನ್ಯ ತುಂಬಿದ ಧುತ್ತರಗಿ; ಸಂಸದ ಸಂಗಣ್ಣ ಬಣ್ಣನೆ

    ಹನುಮಸಾಗರ: ಕನ್ನಡ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

    ಇದನ್ನೂ ಓದಿರಿ: ಕಸಾಪ ವತಿಯಿಂದ ಶೇಕುಬಾಯಿ ದೇಸಾಯಿ ದತ್ತಿ ಪ್ರಶಸ್ತಿ ಪ್ರದಾನ

    ಪಟ್ಟಣದ ಕರಿಸಿದ್ದೇಶ್ವರ ಬಸವ ಮಂಟಪದಲ್ಲಿ ನಿಸರ್ಗ ಸಂಗೀತ ವಿದ್ಯಾಲಯ, ರಂಗ ಕಲಾವಿದರ ಸಂಘದ 23ನೇ ವರ್ಷದ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಲಾಗಿದ್ದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ,

    ಕವಿಗೋಷ್ಠಿ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಪಿ.ಬಿ.ಧುತ್ತರಗಿ ಅವರು ಬದುಕಿನಲ್ಲಿ ಬಡತನ ಅನುಭವಿಸಿದರೂ ರಂಗಕ್ಷೇತ್ರಕ್ಕೆ ಚೈತನ್ಯ ತುಂಬಿ ರಂಗ ಕ್ಷೇತ್ರದ ರಾಯಭಾರಿಗಳಾಗಿ ಮೆರೆದರು.

    ನಾಟಕಗಳು ಅವನತಿ ಅಂಚಿಗೆ ತಲುಪುತ್ತಿರುವ ಇಂದಿನ ದಿನಗಳಲ್ಲಿ ಪ್ರತಿವರ್ಷ ನಾಟಕೋತ್ಸವ ನಡೆಸುವುದರ ಮೂಲಕ ಇಲ್ಲಿನ ನಿಸರ್ಗ ಸಂಗೀತ ಶಾಲೆ ಹಾಗೂ ರಂಗ ಕಲಾವಿದರ ಸಂಘ,

    ಧುತ್ತರಗಿಯವರ ಗುರಿ ಹಾಗೂ ಉದ್ದೇಶಗಳನ್ನು ಜೀವಂತವಾಗಿರಿಸಿರುವುದು ಶ್ಲಾಘನೀಯ ಎಂದರು.

    ಪತ್ರಕರ್ತ ಶರಣಪ್ಪ ಬಾಚಲಾಪುರ ಮಾತನಾಡಿ, ಹನುಮಸಾಗರದ ಮಣ್ಣಿನಲ್ಲಿ ಕಲೆಯ ಗುಣವಿದೆ. ಅಂತಹ ವಾತಾವರಣ ಹುಟ್ಟುಹಾಕಿದವರೇ ಪಿ.ಬಿ.ಧುತ್ತರಗಿಯವರು.

    ಬಡತನದ ಕಾರಣಕ್ಕಾಗಿ ಅನೇಕ ನಾಟಕಗಳ ಹಕ್ಕು ಬಿಟ್ಟು ಕೊಡುವ ಅನಿವಾರ್ಯತೆ ಅವರಿಗೆ ಬಂದಿತ್ತೆಂದರೆ ಅವರ ಆರ್ಥಿಕ ಸ್ಥಿತಿ ಹೇಗಿತ್ತೆಂದು ಅರ್ಥವಾಗುತ್ತದೆ.

    ಸರೋಜಮ್ಮ ಹಾಗೂ ದುತ್ತರಗಿಯವರು ರಂಗ ಕ್ಷೇತ್ರದ ಎರಡು ಕಣ್ಣುಗಳು ಎಂದು ಹೇಳಿದರು.

    ನಿಸರ್ಗ ಸಂಗೀತ ಶಾಲೆ ಹಾಗೂ ರಂಗ ಕಲಾವಿದರ ಸಂಘದ ಅಧ್ಯಕ್ಷ ಮಲ್ಲಯ್ಯ ಕೋಮಾರಿ ಮಾತನಾಡಿ, ಧುತ್ತರಗಿ ದಂಪತಿಗಳು ವೃತ್ತಿ ರಂಗಭೂಮಿಯಲ್ಲಿ ಮೆರೆದು,

    ಕಟ್ಟಿ ಬೆಳೆಸಿದ ಈ ಸಂಸ್ಥೆಯನ್ನು ಬೆಳೆಸಿಕೊಂಡು ಹೋಗುವುದರ ಜೊತೆಗೆ ಅವರ ಉದ್ದೇಶಗಳನ್ನು ಫಲಪ್ರದಗೊಳಿಸುವ ಮುಖ್ಯ ಗುರಿ ಹೊಂದಲಾಗಿದೆ ಎಂದರು.

    185 ಸಾಧಕರಿಗೆ ರಾಜ್ಯ ಪ್ರಶಸ್ತಿ

    ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾಗಿದ್ದ 185 ಸಾಧಕರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರಿಸಿದ್ದೇಶ್ವರ ಮಠದ ವಿಜಯಮಹಾಂತ ಶಿವಯೋಗಿಗಳು ಹಾಗೂ ಯರನಾಳ ಹಿರೇಮಠದ ಶಿವಪ್ರಸಾದ ದೇವರು ಆಶೀರ್ವಚನ ನೀಡಿದರು.

    ಧುತ್ತರಗಿ ದಂಪತಿಗಳ ಭಾವಚಿತ್ರಕ್ಕೆ ಕರಿಸಿದ್ದಪ್ಪ ಕುಷ್ಟಗಿ ಪುಷ್ಪ ನಮನ ಸಲ್ಲಿಸಿದರು.

    ಸಂಸ್ಥೆಯ ಅಧ್ಯಕ್ಷ ಮಲ್ಲಯ್ಯ ಕೋಮಾರಿ, ಕಾರ್ಯದರ್ಶಿ ಶ್ರೀದೇವಿ ಕೋಮಾರಿ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಸದಸ್ಯರಾದ ಶಿವಪ್ಪ ಕಂಪ್ಲಿ, ಮಂಜುನಾಥ ಹುಲ್ಲೂರ, ಭವಾನಿಸಾ ಪಾಟೀಲ,

    ಬಸವರಾಜ ದ್ಯಾವಣ್ಣವರ, ರಾಬಿಯಾ ಡಲಾಯಿತ್, ಮುಖಂಡರಾದ ಬಸಪ್ಪ ದೊಟಿಹಾಳ, ದುರಗಪ್ಪ ಮಡಿವಾಳರ, ಸೋಮಪ್ಪ ಹೊಸಮನಿ, ಡಾ.ಶ್ರೀಕಾಂತ ಚಿಮಲ್, ನಿಂಗಪ್ಪ ಮೋಟಗಿ, ರಾಜಪ್ಪ ಚಿನಿವಾಲರ, ಶಂಕ್ರಪ್ಪ ಸಿನ್ನೂರ,

    ಅಂಬಾಸಾ ರಂಗ್ರೇಜ್, ಪ್ರಹ್ಲಾದ ಕಟ್ಟಿ, ಕೃಷ್ಣಪ್ಪ ಬಂಡರಗಲ್, ಸಕ್ರಪ್ಪ ಬಿಂಗಿ, ಮುತ್ತು ವಡ್ಡರ, ರಾಮಚಂದ್ರ ಬಡಿಗೇರ, ಚಂದ್ರಶೇಖರ ಗುಳೇದ, ಬಸಪ್ಪ ಬಂಡಿವಡ್ಡರ್, ಗ್ಯಾನಪ್ಪ ತಳವಾರ,

    ಸಿದ್ರಾಮಯ್ಯ ಕರಿಕಂಠಿಮಠ, ಸಾಹಿತಿಗಳಾದ ಜಹಾನ್ ಆರಾ, ಕಿಶನರಾವ್ ಕುಲಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts