More

    ಸಾಮೂಹಿಕ ವಿವಾಹಗಳು ಬಡವರಿಗೆ ವರದಾನ

    ಹನುಮಸಾಗರ: ಸತಿ-ಪತಿಗಳು ಒಬ್ಬರನೊಬ್ಬರು ಅರಿತುಕೊಂಡು ಸುಖವಾಗಿ ಸಂಸಾರ ಸಾಗಿಸಲಿ ಎಂದು ಚಳಗೇರಿ ಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸಮೀಪದ ಗಡಚಿಂತಿಯಲ್ಲಿ ಮಾರುತೇಶ್ವರ ಹಾಗೂ ಈಶ್ವರ ದೇವಸ್ಥಾನದ ಕಾರ್ತಿಕೋತ್ಸವದ ನಿಮಿತ್ತ ಭಾನುವಾರ ಹಮ್ಮಿಕೊಂಡ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

    ಸತಿ-ಪತಿಗಳು ಒಬ್ಬರನೊಬ್ಬರು ಅರಿತುಕೊಳ್ಳಲಿ

    ವಿವಾಹ ಬಂಧನವೆಂದರೆ ಎರಡು ಮನಸ್ಸುಗಳು ಒಂದಾಗಿ ಪರಸ್ಪರ ಹಾಲು ಜೇನಿನಂತೆ ಜೀವನ ನಡೆಸುವುದಾಗಿದೆ. ಪ್ರಗತಿಯತ್ತ ಸಾಗಲು ಹಿರಿಯರ ಮಾರ್ಗದರ್ಶನ ಅವಶ್ಯಕವಾಗಿದೆ. ದಂಪತಿಗಳು ಮನೆಯ ಹಿರಿಯರನ್ನು ಗೌರವದಿಂದ ಕಂಡು, ಅವರ ಮಾರ್ಗದರ್ಶನದಲ್ಲಿ ಜೀವನ ಸಾಗಿಸಬೇಕು ಎಂದರು. ಮಕ್ಕಳ ಮದುವೆ ಮಾಡಲು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಬಡ ಹಾಗೂ ಮಧ್ಯಮ ವರ್ಗದವರಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ. ಗ್ರಾಮಸ್ಥರು ಮುಂದಿನ ವರ್ಷ ಈ ಕಾರ್ತಿಕೋತ್ಸವದಲ್ಲಿ ಪುರಾಣ ಆರಂಭಿಸಬೇಕು ಎಂದರು. ದೇವಸ್ಥಾನಕ್ಕೆ ದೇಣಿಗೆ ನೀಡಿದ ಧರ್ಮಪ್ಪ ಗೋರೆಬಿಹಾಳ ಅವರನ್ನು ಶ್ರೀಗಳು ಸನ್ಮಾನಿಸಿದರು. ಪ್ರಮುಖರಾದ ಬಸಯ್ಯಜ್ಜ ಹಿರೇಮಠ, ಈರಯ್ಯಜ್ಜ ಹಿರೇಮಠ, ಶಿವಲಿಂಗಯ್ಯ ಹಿರೇಮಠ, ರಂಗರಾವ ಪಾಟೀಲ, ಅನಂತರಾವ ಪಾಟೀಲ, ಎ. ಕೆ. ಪಾಟೀಲ, ಶ್ರೀಕಾಂತ ಕುಲಕರ್ಣಿ, ರಘುರಾಮ ಕುಲಕರ್ಣಿ, ಪ್ರಕಾಶ ಪಾಟೀಲ, ರವಿಚಂದ್ರ ಪಾಟೀಲ, ಹನಮಪ್ಪ ಮಕಾಲಿ, ಮುತ್ತಪ್ಪ ಹೂಲಗೇರಿ, ಹನಮಪ್ಪ ರೋಣದ, ಶರಣಪ್ಪ ಗುಡ್ಡದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts