More

    ಹಿರೇಗೊಣ್ಣಾಗರದಲ್ಲಿ ಅದ್ದೂರಿ ರಥೋತ್ಸವ

    ಹನುಮಸಾಗರ: ಸಮೀಪದ ಹಿರೇಗೊಣ್ಣಾಗರದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ನಿಮಿತ್ತ ಮಂಗಳವಾರ ಅದ್ದೂರಿ ರಥೋತ್ಸವ ಜರುಗಿತು.

    ಗ್ರಾಮದ ವಾಲ್ಮೀಕಿ ದೇವಸ್ಥಾನದಲ್ಲಿ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ 101 ಕುಂಭ, ಕಳಸ ಮತ್ತು ಸಕಲ ವಾದ್ಯಮೇಳದೊಂದಿಗೆ ಆರಂಭಗೊಂಡ ಮಹರ್ಷಿ ವಾಲ್ಮೀಕಿ, ಸಿಂಧೂರ ಲಕ್ಷ್ಮಣ ಮತ್ತು ಕನಕದಾಸರ ಭಾವಚಿತ್ರ ಮೆರವಣಿಗೆ, ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಾಗಿ ದ್ಯಾಮಾಂಬಿಕ ದೇವಸ್ಥಾನ, ಶರಣಬಸವೇಶ್ವರ ದೇಗುಲ, ಹುಣಸೆ ಮರದ ಕಟ್ಟೆ, ಬಸ್ ನಿಲ್ದಾಣ, ಬನ್ನಿ ಕಟ್ಟೆ ಮಾರ್ಗವಾಗಿ ಮರಳಿ ವಾಲ್ಮೀಕಿ ದೇವಸ್ಥಾನ ತಲುಪಿತು. ನಂತರ ಸಾಮೂಹಿಕ ವಿವಾಹಗಳು ಜರುಗಿದವು.

    ಸಂಜೆ ಗ್ರಾಮ ಸಮೀಪದ ಗೊರೆಬಿಹಾಳದಿಂದ ತೇರಿನ ಹಗ್ಗ ಮತ್ತು ತುಮರಿಕೊಪ್ಪ ಗ್ರಾಮದಿಂದ ಕಳಸದ ಮೆರವಣಿಗೆ ಬಂದ ನಂತರ ನೂತನ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಹಿರೇಗೊಣ್ಣಾಗರ, ತುಮರಿಕೊಪ್ಪ, ಗೊರೆಬಿಹಾಳ, ಗಡಚಿಂತಿ, ವಾರಿಕಲ್, ಚಿಕ್ಕಗೊಣ್ಣಾಗರ ಮತ್ತಿತರ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಭಕ್ತರು ತೇರಿಗೆ ಉತ್ತತ್ತಿ ಸಮರ್ಪಿಸಿ ಭಕ್ತಿ ಮೆರೆದರು.

    ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ, ಜಿಪಂ ಮಾಜಿ ಅಧ್ಯಕ್ಷೆ ಮಾಲತಿ ನಾಯಕ, ಗ್ರಾಪಂ ಅಧ್ಯಕ್ಷ ಕಳಕಪ್ಪ ಕಾಡದ, ಮುಖಂಡರಾದ ಶಾಮರಾವ್ ಕುಲಕರ್ಣಿ, ಭೀಮಪ್ಪ ಇಟಗಿ, ಕಳಕಪ್ಪ ಜೋಗಿನ, ಶರಣಪ್ಪ ಜೋಗಿನ, ಶೇಖರಯ್ಯ ಸಾರಾಂಗಮಠ, ಅಲ್ಲಾಸಾಬ್ ನಧಾಫ್, ಫಕೀರಪ್ಪ ಜೀಗಳೂರು, ಯಮನೂರಪ್ಪ ಹನುಮನಾಳ, ಬಸವರಾಜ ಜೋಗಿನ, ರುದ್ರಪ್ಪ ಚಂದ್ರಗೇರಿ, ಚಂದಪ್ಪ ಮೇಣಸಗಿ, ಹನುಮಪ್ಪ ಮೇಣಸಗಿ, ರಾಮಣ್ಣ ಕುಂಬಾರ, ಶರಣಪ್ಪ ಕಮತಗಿ, ಶೇಖಪ್ಪ ಗೊರೆಬಿಹಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts