More

    ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಿ

    ಹನುಮಸಾಗರ: ಜೀವನದಲ್ಲಿ ಎಲ್ಲರಿಗೂ ವ್ಯವಹಾರಿಕ ಜ್ಞಾನ ಅತ್ಯವಶ್ಯಕ. ಹೀಗಾಗಿ ಮಕ್ಕಳು ಗಣಿತ ಕಲಿಕೆಗೆ ಒತ್ತು ನೀಡಲಿ ಎಂದು ಸಿಆರ್‌ಪಿ ಅಯ್ಯಪ್ಪ ಸುರುಳ ಹೇಳಿದರು.

    ಎಲ್ಲರಿಗೂ ವ್ಯವಹಾರಿಕ ಜ್ಞಾನ ಅತ್ಯವಶ್ಯಕ

    ಹುಲಸಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ಫೌಂಡೇಷನ್, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ಗುರುವಾರ ಹಮ್ಮಿಕೊಂಡಿದ್ದ ಅಡವಿಭಾವಿ ಗ್ರಾಪಂ ಮಟ್ಟದ ಮಕ್ಕಳ ಗಣಿತ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
    ಶಿಕ್ಷಕರು ಮಕ್ಕಳಿಗೆ ಚಟುವಟಿಕೆ ಆಧಾರಿತ ವಿಧಾನ ಬಳಸಿ ಗಣಿತ ಕಲಿಸಬೇಕು. ಮಕ್ಕಳ ಮನಸ್ಸನ್ನು ಅರಿತು, ಕಲಿಕಾ ಆಸಕ್ತಿ ಹೆಚ್ಚಿಸಬೇಕು. ವ್ಯವಹಾರಿಕ ಜ್ಞಾನ ಬೆಳೆಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

    ಗ್ರಾಪಂ ವ್ಯಾಪ್ತಿಯ 9 ಶಾಲೆಗಳಿಂದ 4, 5, 6ನೇ ತರಗತಿಯ 187 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಹೆಚ್ಚು ಅಂಕದೊಂದಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಕ್ರಮವಾಗಿ 1000, 600, 400 ರೂ. ಜತೆಗೆ ಅಭಿನಂದನಾ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
    ಪಿಡಿಒ ಶಿವಪುತ್ರಪ್ಪ ಬರಿದೇಲಿ, ಎಸ್ಡಿಎಂಸಿ ಅಧ್ಯಕ್ಷ ವಿಠ್ಠಲ್ ಕಟ್ಟಿಮನಿ, ಗ್ರಾಪಂ ಅಧ್ಯಕ್ಷ ಶರಣಪ್ಪ ಮದ್ಲೂರ, ಸದಸ್ಯರಾದ ಸಿದ್ದನಗೌಡ ಪಾಟೀಲ, ಕರಿಯಪ್ಪ ಹಾದಿಮನಿ, ಶ್ರೀಶೈಲ ಮಡಿವಾಳರ, ಹನುಮಂತಗೌಡ ಪಾಟೀಲ್, ಮುಖ್ಯ ಶಿಕ್ಷಕರಾದ ಖಾಜಾಹುಸೇನ್ ಒಂಟೆಳಿ, ರಾಜೇಶ್, ಬಸು ಸಂಕ್ಲಾಪುರ, ಶರಣಪ್ಪ ಬಳೆಗಾರ, ಶರಣಬಸಪ್ಪ ಹವಾಲ್ದಾರ್, ಮಲ್ಲಿಕಾರ್ಜುನಯ್ಯ ಗುರು ಸ್ಥಳಮಠ, ಶಿಕ್ಷಕರಾದ ಮಹೇಶ ಗೌಡ ಪಾಟೀಲ, ಮಲ್ಲಪ್ಪ ಗೊಂದಿ ಫಕ್ಕೀರಪ್ಪ ಬಿಂಜವಾಡಗಿ, ಬಸವರಾಜ್ ಕೊಡಗಲಿ, ವೀರಪ್ಪ ತೋಟದ, ಕಳಕಪ್ಪ ಕುಂದರಕಿ, ಹನುಮಂತಪ್ಪ ಬಂಕರ್, ಸುಧಾ ಭಟ್ಟರ್, ಶ್ರೀಧರ್ ಪತ್ತಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts