More

    ವಾನರ ರಕ್ಷಣೆಗೆ ತೂಗು ಸೇತುವೆ

    ಗುತ್ತಲ: ಪ್ರವಾಹದಲ್ಲಿ ಸಿಲುಕಿರುವ 20ಕ್ಕೂ ಅಧಿಕ ಮಂಗಗಳು ಆಹಾರಕ್ಕಾಗಿ ಪರದಾಡಿದ ಘಟನೆ ಸಮೀಪದ ಹಂದಿಗನೂರ ಗ್ರಾಮದಲ್ಲಿ ನಡೆದಿದೆ.

    ನಾಲ್ಕು ದಿನಗಳಿಂದ ವರದಾ ನದಿಯ ಪ್ರವಾಹಕ್ಕೆ ಸಿಲುಕಿರುವ ಮಂಗಗಳು ಆಹಾರ ದೊರೆಯದೆ ಹಾಗೂ ಮರದಿಂದ ಕೆಳಗಡೆ ಇಳಿಯಲೂ ಆಗದೇ ತೊಂದರೆಯಲ್ಲಿ ಸಿಲುಕಿ ಚೀರಾಡುತ್ತಿದ್ದವು. ಇದನ್ನು ನೋಡಿದ ಗ್ರಾಮಸ್ಥರು, ಅರಣ್ಯ ಹಾಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗೆ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಗ್ರಾಮಸ್ಥರ ಸಹಾಯದಿಂದ ಮಂಗಗಳ ರಕ್ಷಣೆಗೆ ಮುಂದಾದರು. ಹಗ್ಗ ಮತ್ತು ಕಟ್ಟಿಗೆ ಬಳಸಿ ತೂಗಾಡುವ ಸಣ್ಣ ಸೇತುವೆ ಮಾಡಿ ಮಂಗಗಳು ಇರುವ ಮರದವರೆಗೆ ಹೋಗಿ ಕಟ್ಟಿ ಬಂದಿದ್ದಾರೆ. ಅಲ್ಲದೆ, ಬುಟ್ಟಿಯೊಂದರಲ್ಲಿ ವಿವಿಧ ಹಣ್ಣುಗಳನ್ನು ಇಟ್ಟಿದ್ದಾರೆ.

    ಮಂಗಗಳ ರಕ್ಷಣಾ ಕಾರ್ಯ ವೀಕ್ಷಿಸಲು ಗ್ರಾಮದ ನೂರಾರು ಜನರು ನದಿ ದಡಕ್ಕೆ ಆಗಮಿಸಿದ್ದರು. ಪ್ರಾದೇಶಿಕ ಅರಣ್ಯ ಇಲಾಖೆಯ ಆರ್​ಎಫ್​ಒ ರಾಮಪ್ಪ ಪೂಜಾರ, ಡಿಆರ್​ಎಫ್​ಒ ಎ.ಎಸ್. ಹುಬ್ಬಳ್ಳಿ, ಅರಣ್ಯ ರಕ್ಷಕ ಎಂ.ಪಿ. ಭಜಂತ್ರಿ, ಪ್ರವೀಣ ಭಜಂತ್ರಿ, ಅಗ್ನಿಶಾಮಕ ಠಾಣೆಯ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಸೋಮಶೇಖರ ಅಗಡಿ, ಠಾಣಾಧಿಕಾರಿ ಬಂಗಾರಪ್ಪ ತುರಮುರ, ಸಿಬ್ಬಂದಿ ಎಂ.ಎಸ್. ವಾಳದ, ಆನಂದ ಲಕ್ಕುಂಡಿ, ವಿಠಲ್ ಜೋಗೇರ, ವೀರೇಶ ತೆಗ್ಗಿನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts