More

    ರಾಜಧರ್ಮ ರಾಜನೀತಿ: ಕೇರಳವೇ, ನಿನಗಾಗಿ ಅಳುವವರು ಎಷ್ಟು ಜನ?

    ರಾಜಧರ್ಮ ರಾಜನೀತಿ: ಕೇರಳವೇ, ನಿನಗಾಗಿ ಅಳುವವರು ಎಷ್ಟು ಜನ?

    ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹಗಳೆಂಬ ಆರರ ಜೊತೆಗೆ, ಹಸಿವು, ದ್ರೋಹ, ವಂಚನೆ, ಶೋಷಣೆಗಳನ್ನೂ ಸೇರಿಸಿದರೆ ಇಲ್ಲೇ ಹೆಚ್ಚು ಅಧೋಲೋಕಗಳು ಆಗಿಬಿಡುತ್ತವೆ. ಉತ್ತಮ ಸಂಗೀತ ಸೇವೆ ಮಾಡಿದವನನ್ನು, ‘ಏನು ಲಾಭವಾಯಿತು? ಎಷ್ಟು ಹಣ ಬಂತು?’ ಅಂತ ಪ್ರಶ್ನಿಸಿ ಅಪಹಾಸ್ಯ ಮಾಡಿದರೆ, ಏನೆನ್ನುವುದು?

    ಮನುಷ್ಯ ಜೀವನದಲ್ಲೂ ಏಳು ಮೇಲಿನ ಲೋಕಗಳೂ, ಏಳು ಕೆಳಗಿನ ಲೋಕಗಳೂ ಇವೆ ಎಂಬುದು ಭಾರತೀಯ ಯೋಗವಿಜ್ಞಾನ ದರ್ಶನದ ಸತ್ಯ. ಹಿಂದಿನ ಋಷಿಗಳನ್ನು ಬಿಟ್ಟರೆ ಇವನ್ನು ಅರ್ಥೈಸಿ ದಿಕ್ಕು ತೋರಿಸಬಲ್ಲವರು ಎಲ್ಲೋ ಒಬ್ಬ ಶ್ರೀ ಅರವಿಂದರು, ಎಲ್ಲೋ ವೇದಾಂತ ದೇಶಿಕರು ಮತ್ತು ಸಕಾರಾತ್ಮಕ ಚಿಂತನೆಯ ಅಪರೂಪದ ವೇದಾಂತೀ ಯೋಗಿಗಳು. ಧ್ಯೇಯಪ್ರಪಂಚದಲ್ಲಿ ‘ಊರ್ಧ್ವಗತಿ’ ಎನ್ನುತ್ತಾರೆ. ಮನುಷ್ಯನನ್ನು ಮೇಲೆತ್ತುವ ದೈವೀ ಅನುಭವಗಳು, ಅನುಭಾವಗಳು, ಯೋಗದ ಪರಮಾರ್ಥ ಸಿದ್ಧಿಯ ಸೋಪಾನಗಳು- ಇವುಗಳಲ್ಲಿ ಮುಖ್ಯವಾದವು ಸಂಗೀತ, ಸಾಹಿತ್ಯ, ಗಣಿತ ದ್ವಾರಾ, ಭಾವನೆಗೆ ಎಟುಕದ ಉನ್ನತೋನ್ನತ, ಅಗಣಿತ, ‘ಅನಂತ’ ತತ್ವಸಾಧನೆ, ಇದಕ್ಕೆ ಪೂರಕವಾದ ಶಬ್ದಪ್ರಪಂಚ, ಅಲ್ಲಿ ವೇದ, ಉಪನಿಷತ್ತು, ಇತಿಹಾಸ ಪುರಾಣಗಳ ಒಳಮರ್ಮ ಜ್ಞಾನ ಅನುಭವ- ಇಂಥವು. ಬ್ರಹ್ಮಸೂತ್ರ ವಾಕ್ಯಕಾರರಾದ ಬ್ರಹ್ಮನಂಬಿ ಟಂಕಾಚಾರ್ಯರು ಇಲ್ಲಿನ ಸಾಧನಾ ಸಪ್ತಕಗಳನ್ನು ಗುರುತಿಸಿದರು. ಆಹಾರ, ವಿವೇಕ, ವೈರಾಗ್ಯ ಮುಂತಾದವುಗಳನ್ನು. ‘ಪರಮಪದ ಸೋಪಾನ’ ಎಂಬ ಗ್ರಂಥವನ್ನು ವೇದಾಂತ ದೇಶಿಕರು ರಚಿಸಿ, ದಾರಿ ತೋರಿದರು.

    ಆದಿಶಂಕರರು ಅವತರಿಸಿದ್ದೂ ಈ ಸೋಪಾನಗಳನ್ನು ಭದ್ರ ಮಾಡಿ ಲೋಕೋದ್ಧಾರಕ್ಕೆಂದೆ. ಇಂದಿನ ಕೇರಳ, ಕರಾವಳಿಗೆ ಅಲ್ಲಿನ ಅರಬ್ಬ, ಕ್ರೖೆಸ್ತ, ಕಾಮ್ರೇಡರ ಬಲೆಗೆ ಸಿಲುಕಿ, ಮೀನುಗಳಂತೆ ಯಾರು ಯಾರಿಗೋ ಆಹಾರವಾಗುತ್ತಿರುವ ಮುಗ್ಧ, ನಿಸ್ಸಹಾಯಕ ಜನರನ್ನು ಮೇಲೆತ್ತುವವರು ಯಾರು? ಮೇಲಿನ ಸೋಪಾನ ಸಾಧಕರನ್ನು-‘ಇವುಗಳಿಂದ ಹೊಟ್ಟೆ ತುಂಬುವುದೇ?’ ಎಂದು ಪ್ರಶ್ನಿಸುವ, ಕೆಳಗಿನ ಏಳು ಲೋಕದ ಪ್ರಜ್ಞಾಹೀನರಿಗೆ ಏನೆಂದು ಉತ್ತರಿಸುತ್ತೀರಿ? ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹಗಳೆಂಬ ಆರರ ಜೊತೆಗೆ, ಹಸಿವು, ದ್ರೋಹ, ವಂಚನೆ, ಶೋಷಣೆಗಳನ್ನೂ ಸೇರಿಸಿದರೆ ಇಲ್ಲೇ ಹೆಚ್ಚು ಅಧೋಲೋಕಗಳು ಆಗಿಬಿಡುತ್ತವೆ. ಮೇಲಿನ ಸಾಧನೆಗಳನ್ನು ಕೆಳಗಿನ ಸ್ತರಗಳಿಗೆ ಅಳೆದು ತಪ್ಪಾಗಿ, ಮಾರಣಾಂತಿಕವಾಗಿ ‘ನಿರ್ಣಯಿಸುವ’ ಜಾಡು, ಚಾಳಿ, ಇಂದು ಸಾಹಿತ್ಯಲೋಕವನ್ನೂ ರಾಜಕೀಯ, ಸಾಮಾಜಿಕ ಅಳತೆಗೋಲುಗಳನ್ನೂ ಕಬಳಿಸಿದೆ. ಉತ್ತಮ ಸಂಗೀತ ಸೇವೆ ಮಾಡಿದವನನ್ನು, ‘ಏನು ಲಾಭವಾಯಿತು? ಎಷ್ಟು ಹಣ ಬಂತು?’ ಅಂತ ಪ್ರಶ್ನಿಸಿ ಅಪಹಾಸ್ಯ ಮಾಡಿದರೆ ಅದೂ ಫ್ಯಾಷನ್ ಆದರೆ, ಮೇಲಿನ ಅನುಭವ ಲೋಕಗಳು ಅಲಭ್ಯವೂ, ಅಸಹ್ಯವೂ, ಅಪಹಾಸ್ಯಕರವೂ, ಮಾಯವೂ ಆಗಿಬಿಡುತ್ತದೆ.

    ಕೇರಳದಲ್ಲಿ ಕಾಮ್ರೇಡರು, ಇಸಾಯಿಗಳು, ಇಸ್ಲಾಮಿಯರು, ಮೀನುಗಾರರನ್ನೂ, ತೋಟ ಕೂಲಿಗಾರರನ್ನೂ, ನಾನಾ ಕೆಳವೃತ್ತಿಗಳ ಮುಗ್ಧರನ್ನೂ, ರೈತರನ್ನೂ, ರಸ್ತೆಬದಿ ವ್ಯಾಪಾರಿಗಳನ್ನೂ, ಸೈಕಲ್, ಸ್ಕೂಟರ್, ಕಾರು ರಿಪೇರಿಗಾರರನ್ನೂ, ತೆಂಗು, ಶುಂಠಿ, ಬಾಳೆ, ತೋಟಗಾರ ಕೂಲಿಗಳನ್ನೂ, ಉನ್ನತೀಕರಣದಿಂದ ವಿಮುಖರನ್ನಾಗಿ ಮಾಡುತ್ತಿರುವುದಕ್ಕೆ ತುಂಬ ಹಳೆಯ ಇತಿಹಾಸ, ಅರಬ್ಬರ ಸಂಪರ್ಕದಿನಗಳಿಂದಿವೆ.

    ಇಸ್ಲಾಂಪೂರ್ವದ ಅರಬ್ಬಿ ದೇಶ ಹಿಂದೂಮಯವೇ ಆಗಿತ್ತು ಎಂಬುದಕ್ಕೆ ಪ್ರಮಾಣಗಳಿವೆ. ‘ಅರ್ವಾ’ ಎಂದರೆ ಕುದುರೆ, ಇದನ್ನು ಕೊಳ್ಳಲು, ಮಾರಲು, ಕೇರಳಕ್ಕೆ ಬರುತ್ತಿದ್ದ ಮ್ಲೇಚ್ಛರನ್ನು ಹಿಂದೆ ‘ಅರ್ವರು’ = ‘ಅರಬ್ಬರು’ ಎಂದು ಗುರುತಿಸುತ್ತಿದ್ದರು. ಆಗ ಕೇರಳದಲ್ಲಿ ತಮಿಳೇ ಇತ್ತು. ಮಲೆಯಾಳಿ ಆಮೇಲೆ. ಅದರಿಂದಲೇ ತಮಿಳನ್ನು ‘ಅರವಾ’ ಎಂದು ಈಗಲೂ ಕರೆಯುವ, ಗುರುತಿಸುವ ವಾಡಿಕೆ ಇದೆ. 400ಕ್ಕಿಂತ ಹೆಚ್ಚು ದೇವತಾ ವಿಗ್ರಹಗಳಿದ್ದವು ಮೆಕ್ಕಾದಲ್ಲಿ! ಬಳಿಕ ಅವುಗಳನ್ನು ಧ್ವಂಸಗೊಳಿಸಲಾಯಿತು. ಉದಾಹರಣೆಗೆ ‘ಮನಾಥ್’ ಎಂಬುದೊಂದು ದೇವತಾವಿಗ್ರಹ. ಇದರ ಪೂರ್ವ ರೂಪ ಯಾವುದು? ‘ಸೋ +ಮನಾಥ್’ ಎಂದು ಸೀತಾರಾಮ್ ಗೋಯಲ್ ತೋರಿಸಿದ್ದಾರೆ (Hindu Temples: What happened to them part 1 and 2, Voice of India Delhi).

    ಇದು ಕ್ರಿಸ್ತಪೂರ್ವದಿಂದಲೇ ಇದ್ದ ಸಂಬಂಧ, ಕೇರಳಕ್ಕೆ ಅರಬ್ಬರೊಡನೆ ರೋಮ್ ಈಜಿಪ್ತ್, ಗ್ರೀಸ್​ಗಳ ಸಂಬಂಧಕ್ಕೂ ಸುದೀರ್ಘ ಇತಿಹಾಸವಿದೆ. ಮೆಕ್ಕಾದಲ್ಲಿ ಹಜ್ ಯಾತ್ರೆಯ ಸಂದರ್ಭದಲ್ಲೂ ಇಂದಿನ ಅರಬ್ಬರ ಉಡುಪು, ಕೇಶಮುಂಡನ, ಅಪ ಪ್ರದಕ್ಷಿಣೆಗಳನ್ನು ಗುರುತಿಸಿ. ‘ಕಬಾ’ದಲ್ಲಿ ಏನಿದೆ? ಏಕೆ ಈ ಪ್ರದಕ್ಷಿಣೆ? ‘ಮಖ’ =ಯಜ್ಞ ಸ್ಥಳವೇ ‘ಮೆಕ್ಕಾ’ ಆಯಿತೆಂದವರೂ ಉಂಟು. ಇರಲಿ. ಸಿರಿಯಾದ ಕ್ರೖೆಸ್ತರೂ, ಯಹೂದಿಗಳೂ ಇಲ್ಲಿ ಆಶ್ರಯಕ್ಕಾಗಿ ಬಂದು ಕೊಚ್ಚಿನ್, ತಿರುವಾಂಕೂರು, ಕೊಲ್ಲಂ ಇತ್ಯಾದಿ ದೊರೆಗಳಲ್ಲಿ ಬಂದು ಸೇರಿದರು. ಪೋರ್ಚುಗೀಸರಲ್ಲಿ ವಾಸ್ಕೋ-ಡಿ -ಗಾಮ, ಆಲ್ ಬುಕರ್ಕರು ಇಲ್ಲಿ ಅತ್ಯಾಚಾರಗಳನ್ನು ಮಾಡಿ, ಹಿಂಸಾಕಾಂಡ ಆರಂಭಿಸಿದರು. ಬಂದದ್ದು ಮೆಣಸು, ಶುಂಠಿ, ಜೀರಿಗೆ, ಮಸಾಲೆ ಖರೀದಿಗೆ! ಮಾಡಿದ್ದು ದೇವಾಲಯ ನಾಶ, ವಿಗ್ರಹ ಭಂಜನ, ಮತಾಂತರ, ಸ್ತ್ರೀಯರ ಮಾನಹರಣ, ಮಾರಾಟ ಇಂಥವು ( ಕ್ರಿ.ಶ 1550 ಈಚೆಗೆ ಅನ್ನಿ).

    Malabar and the Portuguese ಎಂಬ ಗ್ರಂಥದಲ್ಲಿ ಕೆ.ಎಂ.ಪಣಿಕ್ಕರ್ ದಾಖಲೆಗಳನ್ನು ಕೊಟ್ಟಿದ್ದಾರೆ. (ಪುಟ 18) ಪೋರ್ತಗಾಲದ ದೊರೆ, ಇಲ್ಲಿನ ಆಗಿನ ಪ್ರತಿನಿಧಿಗೆ ಬರೆದಿದ್ದ, ‘ವಿಗ್ರಹಗಳನ್ನು ಪುಡಿ ಪುಡಿ ಮಾಡಿ, ಪೂಜಕರಿಗೆ ಕಠಿಣ ಶಿಕ್ಷೆ ಕೊಡಿ, ಲೋಹ ಕಟ್ಟಿಗೆ, ಕೆತ್ತನೆಯ ವಿಗ್ರಹ ತಯಾರಕರನ್ನು ಸಾಯಿಸಿ. ಕ್ರೂರಿ ಬ್ರಾಹ್ಮಣರಿಂದ ಜನರನ್ನು ದೂರವಿಡಿ. ಅವರು ನಮ್ಮ ಈಸಾಯಿ ಮತದ ಪರಮಶತ್ರುಗಳು’. ಕೊಚ್ಚಿನ್ ಮಹಾರಾಜರನ್ನು ಮತಾಂತರಿಸುವ ಯತ್ನ ನಡೆದು ವಿಫಲವಾಯಿತು. ‘ಕೋಳಿಕೋಡು’ ಈಗಿನ ‘ಕ್ಯಾಲಿಕಟ್’, ಹಿಂದಿನ ಕಲ್ಲಿಕೋಟೆಯಲ್ಲಿ ಕುಲಶೇಖರಾಳ್ವರರ ಪೂರ್ವಜರೂ, ಸಂತತಿಯೂ ‘ಕೊಲ್ಲಿ ಕಾವಲಿನವರಾಗಿ’ ಅವರನ್ನು ‘ಸಾಮುದ್ರಿಕರು’ ಎಂದು ಕರೆದು ಬಿರುದನ್ನು ಕ್ರೖೆಸ್ತರು zamorin ಎಂದು ಉಚ್ಚರಿಸಿದರು. ಈ ದೊರೆಗಳು, ಇತರರು, ಪೋರ್ಚುಗೀಸರನ್ನು ಹಿಮ್ಮೆಟಿಸಿದ್ದು ಇತಿಹಾಸ. ಕಣ್ಣನೂರು, ಈಗ ‘ಕನ್ನಾನೂರು’ ಅರಬ್ಬರ ಅತ್ಯಾಚಾರದಿಂದ ಇಸ್ಲಾಂಮಯವಾಯಿತು. ಆಮೇಲೆ ಈಗಿನ ನಂಬೂದ್ರಿಪಾದರ ಕಾಲದಲ್ಲಿ ‘ಮಲ್ಲಪುರಂ’ ಜಿಲ್ಲೆಯೂ ಆಯಿತು. ಇನ್ನೊಂದೆಡೆ ಗೋವಾದಲ್ಲಿ ಫ್ರಾನ್ಸಿಸ್ ಕ್ಸೆವಿಯರ್ ಎಂಬ ಪಾದ್ರಿ ಪೋರ್ಚ್​ಗೀಸ್ ದೊರೆಯ ಅಪ್ಪಣೆಯಂತೆ, ಇಲ್ಲಿ ಮತಾಂತರಕ್ಕೆ ಒಪ್ಪದವರನ್ನು ಕಂಬಕ್ಕೆ ಕಟ್ಟಿ ಸುಡುವ ಕ್ರೂರ-ಅಮಾನುಷ ಶಿಕ್ಷೆ ಜಾರಿಮಾಡಿದ. ಈ ಬಗ್ಗೆ ಪ್ರಿಯೋಳಕರ್ ಎಂಬುವರು ಪುಸ್ತಕವನ್ನೇ ಬರೆದಿದ್ದಾರೆ-ಖಜಛಿ ಎಟಚ The Goa Inquisition (Voice of India).

    ಈಗ ಕಾಮ್ರೇಡರ ಇತಿಹಾಸ ಘಟ್ಟಕ್ಕೆ ಬನ್ನಿ. ಮದನ್ ರವಿಚಂದ್ರನ್ ಎಂಬುವರ ಬರಹ. ‘Commune’ ಪತ್ರಿಕೆ 2020 ಜುಲೈ 21. ದ್ರವಿಡ ಪಕ್ಷಗಳು ಮೂಲದಲ್ಲಿ ಕಾಮ್ರೇಡರ ತತ್ವ ಹೊಂದಿವೆ. ಕಮ್ಯುನಿಸ್ಟರ ಪಕ್ಷದ ಆದಿ‘ಗುರು’

    ಮಾರ್ಕ್ಸ್​ನ ‘ಮ್ಯಾನಿಫೆಸ್ಟೋ’ದಲ್ಲೇ ಹೀಗಿದೆ. ‘ನಮ್ಮ ವಿಚಾರ, ಅಭಿಪ್ರಾಯ, ಗ್ರಹಿಕೆಗಳು ವಿಸ್ತರಿಸಿ, ಪ್ರಭಾವಶಾಲಿಯಾಗಿ, ವ್ಯಾಪಕವಾಗಬೇಕಾದರೆ ಹೋದಲ್ಲೆಲ್ಲ ಅಲ್ಲಿನ ಮೂಲ ಸಂಸ್ಕೃತಿ, ಸಾಹಿತ್ಯ, ಭಾವನೆ, ವಿಚಾರ, ಶ್ರದ್ಧೆಗಳನ್ನು ಬುಡಮೇಲು ಮಾಡಿ ಕಿತ್ತೆಸೆಯಬೇಕು’. ಇದೇ ಅಲ್ಲವೇ ಕ್ರೖೆಸ್ತ , ಮುಸಲ್ಮಾನರ ಮ್ಯಾನಿಫೆಸ್ಟೊ? ಅದರಿಂದಲೇ ಇವರು ಪರಸ್ಪರ ಒಗ್ಗೂಡುತ್ತಾರೆ- ಎಲ್​ಡಿಎಫ್, ಯುಡಿಎಫ್ ಹೆಸರಲ್ಲಿ ಮಹಾಮೋಸ ನಡೆಯುತ್ತದೆ. ಮುಂದಿನದ್ದು ಹಿಂಸಾಕಾಂಡ, ಭಯೋತ್ಪಾದನೆ- ಅದಕ್ಕೆ ಹಣ! ಪ್ರತಿ ವರ್ಷ 1000 ಟನ್​ನಷ್ಟು ಬಂಗಾರ ಭಾರತಕ್ಕೆ ಆಮದಾಗಿ, ಇದರ ಬಹುಪಾಲು ಕೇರಳಕ್ಕೇ ಸೇರುತ್ತದೆ! ಬಂಗಾರ ಮಾರುವ ಅಲ್ಲಿನ ಕಂಪನಿಗಳ ಹೆಸರನ್ನು ನೋಡಿ. ಇವರು ಸಗಟು ವ್ಯಾಪಾರಿಗಳು. ತಮಿಳುನಾಡು, ಕರ್ನಾಟಕದಲ್ಲಿ ‘ಚಿಲ್ಲರೆ’ ವ್ಯಾಪಾರಿಗಳು.

    ಈ ವ್ಯಾಪಾರ ಸುಗಮಕ್ಕೆ ಅವರಿಗೆ ಎಂಎಲ್​ಸಿ ಸೀಟು ಬೇಕು. ಕೋಟಿ ಹಣ ತೆತ್ತು ಈ ಸ್ಥಾನಗಳನ್ನು ಪಡೆದುಕೊಳ್ಳುತ್ತಾರೆ. ಕರಿಬೇವು ,ಕೊತ್ತಂಬರಿ ಸೊಪ್ಪಿನಂತೆ ಆಗಿದೆ- ‘ಹಳೆಯ ಬಂಗಾರ ಕೊಡಿ ಹೊಸದನ್ನು ಕೊಡುತ್ತೇವೆ. ಒಡವೆಗೆ ಮಜೂರಿ, ಕೂಲಿ ಮಾಫಿ’- ಕೇಳಿದಿರಾ? ಬಂಗಾರಕ್ಕೆ ಇಷ್ಟು ಜಾಹೀರು ಯಾಕಯ್ಯಾ? ಲಾಭವೆಲ್ಲ ಟೆರರಿಸ್ಟ್ ಕ್ಯಾಂಪಿಗೆ! ಅದು ಈಸಾಯಿಗಳಿಗೂ, ಇಸ್ಲಾಮಿಯರಿಗೂ, ಕಾಮ್ರೇಡರಿಗೂ ಉಪಕರಣ-‘ಹಿಂಸೆ ಇಲ್ಲದೆ ಮತ ಹಂಚುವುದಿಲ್ಲ’.

    ಪೂಜ್ಯ ಮಾತಾ ಅಮೃತಾನಂದಮಯಿ, ನಾರಾಯಣಗುರು, ಚಿನ್ಮಯ ಮಿಷನ್ ಇತರವು ಬಿಟ್ಟರೆ, ಸನಾತನಿ ಮಠಗಳು ಕೇರಳದಲ್ಲಿ ಏಕೆ ಕಾರ್ಯೋನ್ಮುಖವಿಲ್ಲ? ಹರವಿಲ್ಲ? ಮಹಾರಾಷ್ಟ್ರದಲ್ಲಿ ಪಾಂಡುರಂಗ ಅಠಾವಳೆ ನಮ್ಮ ಮೂಲ ಶ್ರದ್ಧೆಯನ್ನು ಸಮುದ್ರ ತೀರದ ಜನರಿಗೆ ಹರಡಲು ಶ್ರಮಿಸಿದರು. ಮನುಷ್ಯ ಶೂನ್ಯದಲ್ಲಿ ಬೆಳೆಯುವುದಿಲ್ಲ. ಬೆಳವಣಿಗೆಗೆ ಅನ್ನ, ನೀರು ಸಾಲದು. ಪ್ರಾಣಿಗಳಿಗೂ ಇವು ಲಭ್ಯ. ನೈಜ ಬೆಳವಣಿಗೆಗೆ ಅಧ್ಯಾತ್ಮ ಬೇಕು. ಅಲ್ಲೇ ಮೇಲಿನ ಏಳು ಲೋಕಗಳು. ಭೂಃ, ಭೂತಃ, ಸುವಃ, ಮಹಃ, ಜನಃ, ತಪಃ, ಸತ್ಯಂ- ಇವು ಗಾಯತ್ರಿಯ ಅನುಭವದ ಏರಿನ ಏಳು ಮೆಟ್ಟಿಲುಗಳು. ಒಂದೊಂದೂ ಒಂದು ಲೋಕಾನುಭವ. ಬರೀ ಪ್ರಾಣಾಯಾಮದಿಂದ ಇದು ಸಾಧನೆಯಲ್ಲ. ಸಾಧನೆ, ಅಧ್ಯಾತ್ಮ ಪ್ರಗತಿ, ಎಲ್ಲರ ಹಕ್ಕು. ಅದನ್ನು ಕ್ರಮದಲ್ಲಿ ಉಪದೇಶಿಸಲು ಅಧ್ಯಾತ್ಮ ಪಟುಗಳು ಬೇಕು. ಶಂಕರರ ನಾಡಿನಲ್ಲೀಗ ದುಸ್ಥಿತಿಯೇ? ದೇವಾಲಯಗಳಿವೆ-ಕಾಮ್ರೇಡರುಗಳ ಹಿಡಿತದಲ್ಲಿ. ಒಂದು ಅನಂತ ಪದ್ಮನಾಭಸ್ವಾಮಿಯ ಕಥೆಯಲ್ಲ. ಆಡಳಿತ ಸಮಿತಿಯಲ್ಲಿ ಕಾಮ್ರೇಡರು ಪ್ರವೇಶಿಸಿಯೇ ತೀರುತ್ತಾರೆ. ಸ್ವಾಮ್ಯ ಅರಸು ಮನೆತನದ್ದು. ಆದರೆ ಏನಾಯಿತು? ಈ ಮಾತು ತಿರುಪತಿ, ಕಾಂಚಿ, ರಾಮೇಶ್ವರ, ಮಥುರೆ- ಎಲ್ಲಕ್ಕೂ ಅನ್ವಯ! ಈಗ ಸಂಪ್ರದಾಯಸ್ತ ಯತಿಗಳು ಇತ್ತ ಗಮನ ಹರಿಸಬೇಕು. ಇಲ್ಲವೆಂದರೆ …?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts