More

    ಬಾಯಲ್ಲಿ ನೀರೂರಿಸಿದ ತರಹೇವಾರಿ ಹಲಸು, ಸಾವಯವ ಮೇಳ ಹಲಸಿನ ಹಬ್ಬದ ವೈಶಿಷ್ಟ್ಯ

    ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠದ ಸಭಾಭವನ ಈಗ ಸಂರ್ಪೂಣ ಹಲಸುಮಯವಾಗಿದೆ. ಎಲ್ಲೆಡೆ ಹಣ್ಣಿನ ಸುವಾಸನೆ ಹರಡಿದೆ. ತರಹೇವಾರಿ ಹಣ್ಣುಗಳು ಕಣ್ಮನ ಸೆಳೆಯುತ್ತಿದ್ದು, ನೋಡುಗರ ಬಾಯಲ್ಲಿ ನೀರೂರಿಸುತ್ತಿವೆ.

    ಸಹಜ ಸಮೃದ್ಧ ವತಿಯಿಂದ ಆಯೋಜಿಸಿರುವ ಎರಡು ದಿನಗಳ ಸಾವಯವ ಮೇಳ ಹಾಗೂ ಹಲಸಿನ ಹಬ್ಬವು ಹಲಸಿನ ಲೋಕದ ಅನಾವರಣ ಮಾಡಿದೆ.

    ವಿಶೇಷ ತಳಿಗಳ ಮಾರಾಟ, ಮಹಿಳಾ ಸ್ವಸಹಾಯ ಸಂಗಳು ತಯಾರಿಸಿದ ಹಲಸಿನ ವಿವಿಧ ಖಾದ್ಯಗಳ ಮೌಲ್ಯವಧಿರ್ತ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ, ಕೆಂಪು, ಸಿದ್ದು ಹಲಸಿನ ಸಸಿ ಮತ್ತು ಹಣ್ಣಿನ ಮಾರಾಟವೂ ಭರ್ಜರಿಯಾಗಿ ನಡೆದಿದೆ. ಹಲಸಿನ ಅಡುಗೆ ಸ್ಪರ್ಧೆಯೂ ನಡೆಯಿತು.

    ತುಮಕೂರಿನ ಕೆಂಪು ಹಲಸು ಹಬ್ಬದಲ್ಲಿ ಗಮನ ಸೆಳೆಯುತ್ತಿದೆ. ರಾಷ್ಟ್ರೀಯ ಮನ್ನಣೆ ಗಳಿಸಿರುವ ಗಾಢ ಕೆಂಪು ವರ್ಣದ ಸಿದ್ದು ಹಲಸು ಗಿಡಗಳನ್ನು ಬೆಳೆಸುವ ಆಸಕ್ತಿ ಇರುವವರಿಗೆ ನೀಡಲಾಗುತ್ತಿದೆ. ಕೆಂಪು, ಹಳದಿ, ಬಿಳಿ, ಹಲಸಿನ ತಳಿ ಹಣ್ಣುಗಳು ನೋಡಲು, ಸವಿಯಲು ಸಿಗುತ್ತಿವೆ.

    ಭಾನುವಾರ ಮಧ್ಯಾಹ್ನ 12.30ಕ್ಕೆ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ. ಸಾವಯವ ಮೌಲ್ಯವಧಿರ್ತ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳ ಮಾರಾಟವೂ ನಡೆದಿದೆ.

    ಹಲಸಿನ ಸಸಿ ನೀಡಿ ಹಬ್ಬಕ್ಕೆ ಚಾಲನೆ
    ಸಸಿ ಸಂರಕ್ಷಕ ಮಹಿಳೆಯರಿಗೆ ಕೆಂಪು ತಳಿಯ ಹಲಸಿನ ಸಸಿಗಳನ್ನು ನೀಡುವ ಮೂಲಕ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅವರು ಹಲಸಿನ ಹಬ್ಬಕ್ಕೆ ಚಾಲನೆ ನೀಡಿದರು.

    ಹಲಸಿನ ತಳಿ ಸಂರಕ್ಷಣೆ ಇಂದಿನ ಅಗತ್ಯ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣುಗಳ ಸೇವನೆ ಮಾಡಬೇಕು. ಹಣ್ಣುಗಳಿಂದ ಆಯುಷ್ಯವೂ ವೃದ್ಧಿಯಾಗುತ್ತದೆ. ದೇಶಿ ತಳಿಯ ಸಸಿ ಸಂರಕ್ಷಣೆ ಹಾಗೂ ಹಣ್ಣುಗಳನ್ನು ಬೆಳೆಯಲು ರೈತರು ಮುಂದೆ ಬರಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

    ಅತಿಥಿಯಾಗಿದ್ದ ಪ್ರಸೂತಿ ತಜ್ಞ ಹಾಗೂ ಸಹಜ ಕೃಷಿಕ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಹಣ್ಣಿನ ರಾಜ ಎಂದು ಕರೆಸಿಕೊಳ್ಳುವ ಮಾವನ್ನು ಹಿಂದಿಕ್ಕಿ ಇದೀಗ ಹಲಸು ಒಂದು ಹೆಜ್ಜೆ ಮುಂದೆ ಹೋಗಿದೆ. ಅಷ್ಟೊಂದು ರುಚಿ ಹಾಗೂ ಆರೋಗ್ಯಕರ ಹಣ್ಣು ಇದಾಗಿದೆ ಎಂದರು.

    ಇದನ್ನು ಒಬ್ಬರೇ ತಿನ್ನಲು ಆಗುವುದಿಲ್ಲ. ಹಾಗಾಗಿ ಇದು ಸಮುದಾಯದ, ಹಂಚಿ ತಿನ್ನುವ ಹಣ್ಣು. ಹವಾಮಾನ ವೈಪರೀತ್ಯ ಏನೇ ಇದ್ದರೂ ಹಲಸಿನ ಗಿಡ ಪ್ರತಿ ವರ್ಷ ಹಣ್ಣು ಬಿಡುತ್ತದೆ. ಹೆಚ್ಚು ನಿರ್ವಹಣೆ ಇಲ್ಲ. ವರ್ಷವಿಡಿ ತಂಪು ನೀಡುವ ಗಿಡ. ಇದರ ಲವನ್ನು ಸಂರಸಿ ಇಟ್ಟುಕೊಂಡು ಬೇಕಾದಾಗ ಬಳಕೆ ಮಾಡಬಹುದು. ಇದರ ಮಹತ್ವ ಬಹಳಷ್ಟಿದೆ ಎಂದು ಪಟ್ಟಿ ಮಾಡಿದರು.

    ಪತ್ರಕರ್ತ ಹರ್ಷವರ್ಧನ ಶೀಲವಂತ ಮಾತನಾಡಿ, ನಗರ ಪ್ರದೇಶದಲ್ಲಿ ಮನೆಯ ಅಕ್ಕಪಕ್ಕ ಜಾಗ ಕಡಿಮೆ ಇರುತ್ತದೆ ನಿಜ. ಆದರೆ, ಕಡಿಮೆ ಜಾಗದಲ್ಲಿ ಹೆಚ್ಚು ಕಾಳಜಿಯ ಅಗತ್ಯ ಇಲ್ಲದೇ ಹಲಸಿನ ಗಿಡ ಬೆಳೆಸಬಹುದು ಎಂದು ಹೇಳಿದರು.

    ಮಳಲಿ ಗ್ರಾಮದ ಸಸಿ ಸಂರಕ್ಷಕಿ ಕಮಲಮ್ಮ ಕಾನಣ್ಣನವರ ಮಾತನಾಡಿದರು.

    ಶ್ರೀದೇವಿ ಸ್ವಾಗತಿಸಿದರು. ಆನಂದತೀರ್ಥ ಪ್ಯಾಟಿ ಪ್ರಾಸ್ತಾವಿಕ ಮಾತನಾಡಿದರು. ಮೋತಿಲಾಲ್ ರಾಠೋಡ ಇತರರು ಇದ್ದರು. ಮೇಳ ಸಂಯೋಜಕ ಸಿ. ಶಾಂತಕುಮಾರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts