More

  ತುಮರಿಕೊಪ್ಪದ ಹಾಲಗೌಡ್ತಿ ಕೆರೆ ಒಡೆದು ನೀರು ಪೋಲು

  ಕಲಘಟಗಿ: ತಾಲೂಕಿನ ತುಮರಿಕೊಪ್ಪ ಗ್ರಾಮದ ಹಾಲಗೌಡ್ತಿ ಕೆರೆ ಒಡ್ಡು ಒಡೆದಿದ್ದು, ಅಪಾರ ಪ್ರಮಾಣದ ನೀರು ಪೋಲಾಗಿದೆ.

  ಬುಧವಾರ ಸಂಜೆ ಕೆರೆ ಒಡ್ಡು ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋಲ್ ಬಿದ್ದಿದ್ದು, ಭಾರಿ ಪ್ರಮಾಣದಲ್ಲಿ ನೀರು ಹೊಲಗಳಿಗೆ ಹರಿದು ಹೋಗಿ ಬೆಳೆ ಹಾನಿ ಸಂಭವಿಸಿದೆ.

  ಕೆರೆ ಕೆಳಭಾಗದ ಭತ್ತದ ಗದ್ದೆಗೆ ಅಪಾರ ನೀರು ಹರಿದು ಹೋಗಿ ಗದ್ದೆಗಳೆಲ್ಲಾ ಕೆರೆಯಂತಾಗಿವೆ.

  ತುಮರಿಕೊಪ್ಪದ ಹಾಲಗೌಡ್ತಿ ಕೆರೆ ಒಡೆದು ನೀರು ಪೋಲು

  ವಿಷಯ ತಿಳಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜೆಸಿಬಿ ಮೂಲಕ ಒಡೆದಿರುವ ಸ್ಥಳದಲ್ಲಿ ಒಡ್ಡಿಗೆ ಮಣ್ಣು ಹಾಕಿ ನೀರು ಪೋಲು ತಡೆಯಲು ಪ್ರಯತ್ನಿದ್ದಾರೆ. ಆದರೂ ಅರ್ಧ ಕೆರೆ ಖಾಲಿಯಾಗಿದೆ ಎನ್ನಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts