More

    ಆಡಳಿತ ಭಾಷೆಯಾಗಿ ಕನ್ನಡ ಬೆಳಗಿಸಿದ ಕದಂಬರು

    ಬೆಂಗಳೂರು: ಕರುನಾಡನ್ನು ಆಳಿದ ಮೊದಲ ಅಚ್ಚ ಕನ್ನಡದ ರಾಜವಂಶ ಕದಂಬರದ್ದು. ಅವರು ಕನ್ನಡವನ್ನು ಆಡಳಿತ ಹಾಗೂ ಬರಹದ ಭಾಷೆಯಾಗಿ ಬೆಳಗಿಸಿದವರು ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ ಹೇಳಿದ್ದಾರೆ.

    ಕರ್ನಾಟಕ ನಾಮಕರಣ ಸುವರ್ಣ ವರ್ಷಾಚರಣೆ ಅಂಗವಾಗಿ ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಉಪನ್ಯಾಸ ನೀಡಿದರು. ಕನ್ನಡ ನಾಡಿನಲ್ಲಿ ಮೊದಲ ಶಾಸನ ನಿರ್ಮಿಸಿದ ಸಾಮ್ರಾಟ್ ಆಶೋಕ. ಆ ಶಾಸನ ಪ್ರಾಕೃತದಲ್ಲಿತ್ತು. ಮೌರ್ಯರ ನಂತರ ಶಾತವಾಹನರೂ ಪ್ರಾಕೃತವನ್ನೇ ಬಳಸಿದರು. ಆ ನಂತರ ಮುಯೂರವರ್ಮ ಪಲ್ಲವರನ್ನು ಸೋಲಿಸಿ, ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಅವರ ಕಾಲದಲ್ಲಿ ಪ್ರಾಕೃತದ ಬದಲು ಸಂಸ್ಕೃತವನ್ನು ಆಡಳಿತದಲ್ಲಿ ಬಳಸಿ, ನಂತರ ಕನ್ನಡವನ್ನು ಬರಹದ ಭಾಷೆಯನ್ನಾಗಿ ೋಷಿಸಲಾಯಿತು. ನಂತರ ಆಡಳಿತ ಭಾಷೆಯಾಗಿ ಪ್ರಚಲಿತಕ್ಕೆ ತಂದರು ಎಂದು ವಿವರಿಸಿದರು.

    ಕನ್ನಡದ ಮೊದಲ ಹಲ್ಮಿಡಿ ಶಾಸನವನ್ನು ಪ್ರಕಟಿಸಿದವರು ಕದಂಬರು. ನಿಧಾನವಾಗಿ ರಾಜಭಾಷೆಯ ಸ್ಥಾನದಿಂದ ಪ್ರಾಕೃತ ಭಾಷೆ ನಶಿಸಿಹೋಯಿತು. ಬೌದ್ಧ ಕೇಂದ್ರವಾಗಿದ್ದ ಬನವಾಸಿಯಲ್ಲಿ ಬೌದ್ಧ ಧರ್ಮ ನೆಲೆ ಕಳೆದುಕೊಂಡಿತು ಎಂದರು.

    ಸಮುದಾಯದ ಅಸ್ಮಿತೆ ಭಾಷೆಯಲ್ಲಿದೆ. ಭಾಷೆ ನಾಶವಾದರೆ ಆ ಸಮುದಾಯವೂ ಅವನತಿ ಹೊಂದುತ್ತದೆ ಎಂಬುದನ್ನು ಇತಿಹಾಸ ಸಾರುತ್ತದೆ. ಇದನ್ನು ಕನ್ನಡಿಗರು ಗಮನಿಸಿ ಕನ್ನಡದ ಉಳಿವಿಗೆ ಶ್ರಮಿಸಬೇಕು. ಆಗ ಕನ್ನಡವೂ ಉಳಿಯುತ್ತದೆ, ಕನ್ನಡಿಗನೂ ಉಳಿಯುತ್ತಾನೆ ಎಂದು ಹೇಳಿದರು.

    ಸಂಘದ ಅಧ್ಯಕ್ಷ ಡಿ. ರಾಜೇಶ್, ಕಾರ್ಯದರ್ಶಿ ಕೆ.ಡಿ. ದೇವರಾಜ್, ಕಾರ್ಖಾನೆಯ ಲಲಿತ ಕಲಾ ಸಂಘದ ಕಾರ್ಯದರ್ಶಿ ರಾಜು ಹಾಸನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts