More

    ಮುಖ್ಯ ಠಾಣೆ ಬದಲಾವಣೆ ಬೇಡ; ವಿಜಯನಗರ ಎಸ್ಪಿ ಡಾ.ಅರುಣ್‌ಗೆ ತಂಬ್ರಹಳ್ಳಿ ಗ್ರಾಮಸ್ಥರ ನಿಯೋಗ ಮನವಿ

    ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿಯ ಮುಖ್ಯ ಪೊಲೀಸ್ ಠಾಣೆಯನ್ನು ಸ್ಥಳಾಂತರ, ಬದಲಾವಣೆ ಮಾಡದೇ ಯಥಾಸ್ಥಿತಿ ಕಾಯ್ದಿರಿಸುವಂತೆ ತಂಬ್ರಹಳ್ಳಿ ಗ್ರಾಮಸ್ಥರ ನಿಯೋಗವು ವಿಜಯನಗರ ಎಸ್ಪಿ ಡಾ.ಕೆ.ಅರುಣ್ ಅವರನ್ನು ಭೇಟಿಯಾಗಿ ಶುಕ್ರವಾರ ಮನವಿ ಸಲ್ಲಿಸಿತು.

    ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿ, ಬ್ರಿಟಿಷರ ಕಾಲದಲ್ಲಿ ಆರಭವಾಗಿರುವ ತಂಬ್ರಹಳ್ಳಿ ಠಾಣೆಗೆ ತನ್ನದೇ ಆದ ಇತಿಹಾಸವಿದೆ. ತುಂಗಭದ್ರಾ ಅಣೆಕಟ್ಟು ನಿರ್ಮಿಸುವ ಪೂರ್ವದಲ್ಲೇ ತಂಬ್ರಹಳ್ಳಿಯಲ್ಲಿ ಠಾಣೆ ನಿರ್ಮಿಸಲಾಗಿದೆ. ಇದಕ್ಕಾಗಿ ಗ್ರಾಮದ ಮಧ್ಯಭಾಗದಲ್ಲಿ ಜಿಲ್ಲೆಗೆ ಮಾದರಿಯಾಗುವಂತಹ ನಿವೇಶನ ನೀಡಲಾಗಿದೆ. ನೂತನ ಪೊಲೀಸ್ ಠಾಣೆ ಕಟ್ಟಡ, ಪೊಲೀಸ್ ಮೈದಾನ, ವಸತಿ ಗೃಹಗಳು ಸಹ ಗ್ರಾಮದಲ್ಲಿವೆ. ಭೌಗೋಳಿಕವಾಗಿ 20ಕ್ಕೂ ಹೆಚ್ಚು ಹಳ್ಳಿಗಳಿಗೆ ಸೂಕ್ತವಾದ ಠಾಣೆಯಾಗಿದೆ. ಕೇಂದ್ರ ಸರ್ಕಾದ ಉದ್ದೇಶಿತ ಪುಣೆ ಮುಂಬೈ ರಾಷ್ಟ್ರೀಯ ಹೆದ್ದಾರಿ ಹಾಗೂ ಚಿತ್ರದುರ್ಗ ಆಲಮಟ್ಟಿ ರೈಲ್ವೆ ಕೂಡ ಗ್ರಾಮದ ಮೂಲಕವೇ ಹಾದು ಹೋಗಲಿದೆ. ಹೀಗಾಗಿ ಈಗಿರುವ ಮುಖ್ಯ ಠಾಣೆಯನ್ನು ಉಪಠಾಣೆಯನ್ನಾಗಿ ಬದಲಿಸದೇ ಯಥಾಸ್ಥಿತಿಯಲ್ಲಿ ಕಾಯ್ದಿರಿಸುವಂತೆ ಗ್ರಾಮಸ್ಥರ ಪರ ಮನವಿ ಮಾಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಡಾ.ಕೆ.ಅರುಣ್, ಯಾವುದೇ ವದಂತಿಗೆ ಕಿವಿಗೊಡಬೇಡಿ. ಸದ್ಯಕ್ಕೆ ಯಾವ ಪ್ರಕ್ರಿಯೆ ನಡೆದಿಲ್ಲ. ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದರು.

    ತಾಪಂ ಮಾಜಿ ಸದಸ್ಯ ಪಿ.ಕೊಟ್ರೇಶ್, ಗ್ರಾಪಂ ಸದಸ್ಯ ಸಂಡೂರು ಮೆಹಬೂಬ್‌ಸಾಬ್, ಕಡ್ಡಿ ಚನ್ನಬಸಪ್ಪ, ಪ್ರಮುಖರಾದ ಪಟ್ಟಣಶೆಟ್ಟಿ ಸುರೇಶ್, ನಿವೃತ್ತ ಇಒ ಟಿ.ವೆಂಕೋಬಪ್ಪ, ಟಿ.ಉದಯ ಭಾಸ್ಕರ್‌ರಾವ್, ಸಪ್ಪರದ ಬಾಬಣ್ಣ, ಎಚ್.ಬಿ.ಗಂಗಾಧರ ಗೌಡ, ನಿವೃತ್ತ ಪಿಡಿಒ ಡಿ.ಎಂ. ತೋಟಯ್ಯ, ಪರಸಪ್ಪ, ಕೆ.ಮಾಬುಸಾಬ್, ಸಪ್ಪರದ ಪಂಪಾಪತಿ, ಜಾಕಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಬಿ.ದೇವಿಪ್ರಸಾದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts