More

    ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಲು ಒತ್ತಾಯಿಸಿ ತಂಬ್ರಹಳ್ಳಿಯಿಂದ ಹಬೊಹಳ್ಳಿಗೆ ಪಾದಯಾತ್ರೆ

    ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಗ್ರಾಮಕ್ಕೆ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡುವಂತೆ ಒತ್ತಾಯಿಸಿ ತಂಬ್ರಹಳ್ಳಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಬುಧವಾರ ಪಾದಯಾತ್ರೆ ಮೂಲಕ ನಗರಕ್ಕೆ ಆಗಮಿಸಿ ಶಾಸಕ ಭೀಮಾನಾಯ್ಕ ಮತ್ತು ತಹಸೀಲ್ದಾರ್ ಕೆ.ಶರಣಮ್ಮರಿಗೆ ಮನವಿ ಸಲ್ಲಿಸಿದರು.

    ಮಾಜಿ ಜಿಪಂ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿ, ತಂಬ್ರಹಳ್ಳಿಯಲ್ಲಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡುವಂತೆ ಸಿದ್ದರಾಮಯ್ಯನವರು ಸಿಎಂ ಇದ್ದ ಸಂದರ್ಭ ಮನವಿ ಸಲ್ಲಿಸಲಾಗಿದೆ. ಸರ್ವೇ ನಡೆಸಿ ಕಾಲೇಜು ಮಂಜೂರಿಗೆ ಹಸಿರು ನಿಶಾನೆ ತೋರಿದ್ದರು. ಆದರೆ, ಅಧಿಕೃತವಾಗಿ ಘೋಷಿಸಲು ವಿಳಂಬ ಮಾಡುತ್ತಿದ್ದಾರೆ. ಹಬೊಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗರಿಷ್ಠ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದು, ಗುಣಮಟ್ಟದ ಶಿಕ್ಷಣ ಸಿಗುವುದು ಅಸಾಧ್ಯವಾಗಿದೆ ಎಂದರು.

    ಬಳಿಕ ತಹಸಿಲ್ ಕಚೇರಿಗೆ ತೆರಳಿ ತಹಸೀಲ್ದಾರ ಕೆ.ಶರಣಮ್ಮರಿಗೆ ಮನವಿ ಸಲ್ಲಿಸಿದರು. ಈ ವೇಳೆ ತಾಪಂ ಸದಸ್ಯ ಪಿ.ಕೊಟ್ರೇಶ್, ಗ್ರಾಪಂ ಉಪಾಧ್ಯಕ್ಷರಾದ ಮೈಲಾರ ಶಿವಕುಮಾರ್, ಸದಸ್ಯರಾದ ದೊಡ್ಡಬಸಪ್ಪ ಅನೇಕಲ್, ಬಸವಲಿಂಗನಗೌಡ, ಹುಗ್ಗಿ ದೊಡ್ಡಬಸಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಮಡಿವಾಳರ ಕೊಟ್ರೇಶ್, ಬಣಕಾರ ಕೊಟ್ರೇಶ್, ಮಾಜಿ ಸದಸ್ಯರಾದ ಗೌರಜ್ಜನವರ ಗಿರೀಶ್, ಪಿ.ಸುರೇಶ್, ಮುಖಂಡರಾದ ಖಾಜಾಸಾಬ್, ಬ್ಯಾಟಿ ಮಲ್ಲಿಕಾರ್ಜುನ, ಬ್ಯಾಟಿ ನಿಂಗಪ್ಪ, ಜಿ.ಬಿ.ಸತೀಶ್, ಬಾಳೆಕಾಯಿ ಚಿದಾನಂದಪ್ಪ, ವೈ.ಜೆ.ಶ್ರೀನಿವಾಸ್, ದೇವಿಪ್ರಸಾದ್, ಕೊರವರ ಯಮನೂರಪ್ಪ, ಕೊಟ್ರೇಶ್ ಅನೇಕಲ್, ಷಣ್ಮುಖಪ್ಪ, ಸಣ್ಣಬಸಪ್ಪ, ಮಲ್ಲಿಕಾರ್ಜುನ, ಶಿಕ್ಷಕರಾದ ಕಲ್ಗುಡಿ, ಕೊಟ್ರಗೌಡ ಇದ್ದರು.

    ಪ್ರತಿಭಟನೆ ನಡೆಸಲು ನಾನೂ ಸಿದ್ಧ: ಹಗರಿಮೊಮ್ಮನಹಳ್ಳಿಯಲ್ಲಿ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದ ಶಾಸಕ ಭೀಮಾನಾಯ್ಕ, ತಂಬ್ರಹಳ್ಳಿಯಲ್ಲಿ ಡಿಗ್ರಿ ಕಾಲೇಜು ಆರಂಭಕ್ಕೆ ಅಧಿವೇಶನದಲ್ಲೂ ಚರ್ಚಿಸಿ ಸರ್ಕಾರದ ಗಮನ ಸೆಳೆದಿದ್ದೇನೆ. ಸಿಎಂ ಸಿದ್ದರಾಮಯ್ಯನವರ ಅವಧಿಯಲ್ಲಿ ಮಂಜೂರಾತಿಗೆ ಕ್ರಮಕೈಗೊಳ್ಳಲಾಗಿತ್ತು. ಉನ್ನತ ಶಿಕ್ಷಣ ಇಲಾಖೆಯಿಂದ ಸರ್ವೇ ನಡೆಸಿ ವರದಿಯನ್ನು ಪಡೆಯಲಾಗಿದೆ. ಈಗಿನ ಸರ್ಕಾರದಲ್ಲಿ ಸಿಎಂ ಸೇರಿದಂತೆ ಸಚಿವರ ಗಮನಕ್ಕೆ ತರಲಾಗುವುದು. ನಿರ್ಲಕ್ಷಿಸಿದರೇ ಸಿಎಂ ಮತ್ತು ಸಚಿವರ ಮನೆ ಮುಂದೆ ನಿಮ್ಮ ಜತೆ ನಾನೂ ಪ್ರತಿಭಟನೆಗೆ ಸಿದ್ಧ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts