More

    ಹಡಪದ ಅಪ್ಪಣ್ಣ ಸಮಾಜದಿಂದ ಶಾಸಕರಿಗೆ ಮನವಿ

    ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಹಡಪದ ಅಪ್ಪಣ್ಣ ಯುವಕ ಸಂಘದ ಪದಾಧಿಕಾರಿಗಳು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಮನವಿ ಸಲ್ಲಿಸಿದರು.
    ಇಲ್ಲಿನ ಗುರುಪಾದೇಶ್ವರನಗರದ ಮಲ್ಲಿಕಾರ್ಜುನ ದೇವಸ್ಥಾನ ಸಮುದಾಯ ಭವನದಲ್ಲಿ ಗುರುವಾರ ಸಮಾಜದ ಸಭೆ ನಡೆಸಿ, ಜನಗಣತಿ ಮಾಡಿಸುವುದು. ಸರ್ಕಾರದ ಆರ್ಥಿಕ ಸೌಲಭ್ಯಗಳನ್ನು ಸಮಾಜದ ಜನರಿಗೆ ತಲುಪಿಸುವುದು. ಸಂಘದ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು.
    ಹಡಪದ (ಕ್ಷೌರಿಕ) ಸಮಾಜದ ಪ್ರತ್ಯೇಕ ಅಭಿವೃದ್ಧಿ ಸ್ಥಾಪನೆ ಮಾಡಬೇಕು. ನಿಷೇಧ ಮಾಡಿರುವ (ಹಜಾಮ) ಪದ ಬಳಕೆ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಎನ್. ಶಂಕ್ರಪ್ಪ ಆಯೋಗದ ಶಿಾರಸ್ಸಿನಂತೆ ಹಡಪದ ಜಾತಿಯನ್ನು ಒಬಿಸಿಯಲ್ಲಿ ಪರಿಗಣಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಬಗ್ಗೆ ಚರ್ಚಿಸಿ ನಂತರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಮನವಿ ಸಲ್ಲಿಸಿ, ಮುಂಬರುವ ಅಧಿವೇಶನದಲ್ಲಿ ಈ ಎಲ್ಲ ಬೇಡಿಕೆಗಳ ಬಗ್ಗೆ ಚರ್ಚಿಸುವಂತೆ ಮನವಿ ಮಾಡಿದರು.
    ಬಸವರಾಜ ಹಡಪದ, ಓಂಕಾರ ನಾವಿ, ಬಾಬು ಹಡಪದ, ಪ್ರಕಾಶ ಹಡಪದ, ಸುಭಾಸ ಹಡಪದ, ಗೊಲ್ಲಾಳೇಶ್ವೇರ ನಾವಿ, ಮಲ್ಲಿಕಾರ್ಜುನ ಹಡಪದ, ಹನಮಂತ ಯರನಾಳ, ನೀಲಕಂಠ ಹಡಪದ, ರಾಮಚಂದ್ರ ಹಡಪದ, ಶ್ರೀಶೈಲ ಹಡಪದ, ಮಹಾಂತೇಶ ಹಡಪದ, ಶರಣಪ್ಪ ಹಡಪದ, ಚಂದ್ರು ಹಡಪದ, ನಾಗೇಶ ನಾಗೂರ, ದೇವೇಂದ್ರ ಹಡಪದ, ನೀಲಕಂಠ ಶಿರಗೂರ ಇನ್ನಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts