More

    ಹಡಪದ ಅಪ್ಪಣ್ಣ ಸಮಾಜ ಸುಧಾರಣೆಗಾಗಿ ಸುಧಾರಣೆಗೆ ಶ್ರಮಿಸಿದ ಮಹಾನ್ ಪುರುಷ

    ನಿಡಗುಂದಿ : ಹಡಪದ ಅಪ್ಪಣ್ಣ 12ನೇ ಶತಮಾನದಲ್ಲಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಮಹಾನ್ ಪುರುಷ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

    ಪಟ್ಟಣದ ವಾಲ್ಮೀಕಿ ಭವನದಲ್ಲಿ ನಿಡಗುಂದಿ ಬಸವಪ್ರಿಯ ಹಡಪದ ಅಪ್ಪಣ್ಣ ಸೇವಾ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ, ಸಮುದಾಯ ಭವನದ ಭೂಮಿಪೂಜೆ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಹಡಪದ ಅಪ್ಪಣ್ಣ ಜಾತಿ, ಧರ್ಮ, ವರ್ಣ, ವರ್ಗರಹಿತ ಸಮಾಜ ನಿರ್ಮಾಣಕ್ಕೆ ಮುಂದಾದ ಮಹಾನ್ ವ್ಯಕ್ತಿ. ಅಸ್ಪಶ್ಯತೆ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕೆಲ ಕ್ರಾಂತಿಕಾರಕ ಬದಲಾವಣೆ ತರಲು ಶ್ರಮಿಸಿದವರು. ತಮ್ಮ ವಚನಗಳ ಮೂಲಕವೂ ಉತ್ತಮ ಸಮಾಜ ನಿರ್ಮಿಸಿದ ಸ್ಮರಣೀಯರು ಎಂದರು.

    ಬಸವಣ್ಣನವರ ಪ್ರೇರಣೆಯಿಂದಲೇ ಜಗತ್ತಿನಲ್ಲಿ ಪ್ರಜಾಪ್ರಭುತ್ವ ಉಳಿದಿದೆ. ಅವರು ಕೇವಲ ಒಂದೇ ಜಾತಿಗೆ ಸಮಾಜ ಕಟ್ಟಿಲ್ಲ. ಹಲವು ಶರಣರನ್ನು ಮಾನವರನ್ನು ದೇವರನ್ನಾಗಿಸಿದ್ದು ಅಣ್ಣ ಬಸವಣ್ಣವರು. ವೀರಶೈವ ಧರ್ಮದಲ್ಲಿ ಉಪಜಾತಿಗಳನ್ನು ವಿಂಗಡಿಸಿದ್ದರಿಂದಾಗಿ ಬಸವಣ್ಣನವರ ಕಾಲದಲ್ಲಿ ಬೆಳೆದಷ್ಟು ಸದ್ಯ ವೀರಶೈವ ಧರ್ಮ ಬೆಳೆಯುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿ ಕಾಯಕನಿಗೂ ಸಮಾಜದಲ್ಲಿ ಗೌರವ ತಂದಿದ್ದುಕೊಟ್ಟಿದ್ದು ಬಸವಣ್ಣ ಮಾತ್ರ ಎಂದರು.

    ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ಮಾತನಾಡಿ, ಅಪ್ಪಣ್ಣ ಅವರು ಗೃಹಸ್ಥಾಶ್ರಮದಲ್ಲಿದ್ದುಕೊಂಡು ಮುಕ್ತಿ ಹೊಂದಿದ ದೈವಿಪುರುಷ. ಇಂತಹ ಶರಣರ ಸಿದ್ಧಾಂತಗಳು ಎಲ್ಲರಿಗೂ ಆದರ್ಶಪ್ರಾಯವಾಗಿವೆ. ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದ ಸಮಾಜಕ್ಕೆ ರಾಜ್ಯ ಸರ್ಕಾರ ಸೂಕ್ತ ಸ್ಥಾನಮಾನ ನೀಡಬೇಕು. ಸದ್ಯದ 3ಬಿ ನಲ್ಲಿರುವ ಸಮಾಜವನ್ನು ಎಸ್‌ಸಿ ಸ್ಥಾನಮಾನ ಮಾನ ನೀಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

    ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀಗಳು, ಇಟಗಿ ಗುರುಶಾಂತವೀರ ಶ್ರೀಗಳು, ಜಿವಿವಿಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿದ್ದಣ್ಣ ನಾಗಠಾಣ, ಶಿಕ್ಷಕ ಬಸವರಾಜ ಹಂಚಲಿ, ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಶಿವಾನಂದ ಹಡಪದ, ಗೋಪಾಲ ಸಾರವಾಡ, ಸಂಗಮೇಶ ಬಳಿಗಾರ, ಚಂದ್ರಶೇಖರ ನಿಡಗುಂದಿ, ಸುರೇಶ ಸಣ್ಣಮನಿ, ಮುದಕಪ್ಪ ಹಡಪದ, ಮಾಳಪ್ಪ ನಾವಿ, ನಿಂಗಪ್ಪ ಹಡಪದ, ವಿಠ್ಠಲ ಹಡಪದ, ಶಿವಪುತ್ರ ಹಡಪದ ಇತರರಿದ್ದರು.

    ಇದಕ್ಕೂ ಮುನ್ನ ಪಟ್ಟಣದ ಮುದ್ದೇಶ್ವರ ದೇವಸ್ಥಾನದಿಂದ ವಾಲ್ಮೀಕಿ ಸಮುದಾಯ ಭವನದವರೆಗೆ ಹಡಪದ ಅಪ್ಪಣ್ಣನವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts