More

    ದಕ್ಷಿಣ ರೈಲ್ವೇ ಫೇಸ್​ಬುಕ್ ಪೇಜ್ ಹ್ಯಾಕ್! ಕಾರ್ಟೂನ್ ಫೋಟೋ ಅಪ್ಲೋಡ್ ಮಾಡಿದ ಸೈಬರ್ ಕಳ್ಳರು

    ತಮಿಳುನಾಡು: ದಕ್ಷಿಣ ರೈಲ್ವೇ(Southern Railway)ಯ ಫೇಸ್​ಬುಕ್ ಪೇಜ್​ನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿದ್ದಾರೆ.ಕವರ್ ಫೋಟೋ ಬದಲಿಸಿ, ಕಾರ್ಟೂನ್​ ಫೋಟೋ ಅಪ್ಲೋಡ್ ಮಾಡಿದ್ದಾರೆ. ಜತೆಗೆ ವಿಯೆಟ್ನಾಂ ದೇಶದ ಭಾಷೆಯನ್ನು ಬಳಸಿದ್ದಾರೆ.

    ಇದನ್ನೂ ಓದಿ: ಬಿಸಿ ಕಾವಲಿಗೆಯ ಮೇಲೆ ಕುಳಿತೇ ಭಕ್ತರಿಗೆ ಆಶೀರ್ವಾದ ಮಾಡ್ತಾರೆ ಈ ಬಾಬಾ!

    ಸದ್ಯ ಹ್ಯಾಕ್ ಆಗಿರುವ ಫೇಸ್​ಬುಕ್ ಪುಟವನ್ನು ಮರಳಿ ಪಡೆಯಲು ಸೈಬರ್ ತಜ್ಞರ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ದಕ್ಷಿಣ ರೈಲ್ವೆಯ ಫೇಸ್​ಬುಕ್ ಪೇಜ್ 2 ಲಕ್ಷ ಫಾಲೋವರ್ಸ್​ಗಳನ್ನು ಹೊಂದಿದೆ. ರೈಲ್ವೇ ಬಗ್ಗೆ ಫೇಸ್​ಬುಕ್ ಪೇಜ್ ಮುಖಾಂತರ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತದೆ. ಇದೀಗ ಸೈಬರ್ ಕಳ್ಳರ ಕೃತ್ಯದಿಂದ ಬಳಕೆದಾರರು ಗೊಂದಲಗೊಳ್ಳುವಂತಾಗಿದೆ. 

    ದಕ್ಷಿಣ ರೈಲ್ವೇಯ ವೆಬ್‌ಸೈಟ್ ಮತ್ತು ಟ್ವಿಟರ್ ಖಾತೆ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ದಕ್ಷಿಣ ರೈಲ್ವೆ ಆಡಳಿತ ಮಂಡಳಿ ಮಾಹಿತಿ ಹಂಚಿಕೊಂಡಿದೆ. (ಏಜೆನ್ಸೀಸ್) ಇದನ್ನೂ ಓದಿ: ಇಂದು ಚುನಾವಣಾ ದಿನಾಂಕ ಘೋಷಣೆ; ಇಂದಿನಿಂದಲೇ ನೀತಿ ಸಂಹಿತೆ ಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts