More

    ಗುರುತರ ಸಾಧನೆಗೆ ಅವಿರತ ಶ್ರಮ ಅಗತ್ಯ

    ನಂದೇಶ್ವರ: ಈ ವಿಶ್ವದ ಜನರಿಗಾಗಿ ದೇವರ ಅಥವಾ ಪರಮಾತ್ಮನ ಸಂವಿಧಾನವಿದೆ. ಆ ಸಂವಿಧಾನದ ಅಡಿ ಪ್ರತಿಯೊಬ್ಬರೂ ಬದುಕಬೇಕು. ಪರಮಾತ್ಮನ ಸಂವಿಧಾನ ಮೀರಲು ಯಾರಿಗೂ ಸಾಧ್ಯವಿಲ್ಲ. ನಾವು ಮಾಡುವ ಪ್ರತಿ ಕಾರ್ಯಗಳು ನೀತಿ, ನಿಯಮಗಳಿಂದ ಕೂಡಿರಬೇಕು. ಕಾಯಕ, ದಾಸೋಹ, ದಾನ, ಧರ್ಮಗಳು ಸೇರಿ ಸತ್ಕಾರ್ಯಗಳಿಂದಲೇ ಪರಮಾತ್ಮನ ಕೃಪೆಗೆ ಪಾತ್ರವಾಗಲು ಸಾಧ್ಯವಿದೆ ಎಂದು ಪದ್ಮಶ್ರೀ, ಮಹಾಲಿಂಗಪುರದ ಇಬ್ರಾಹಿಂ ಸುತಾರ ಹೇಳಿದ್ದಾರೆ.

    ಸಮೀಪದ ದರೂರ ಗ್ರಾಮದಲ್ಲಿ ಭಾನುವಾರ ಅವಲಿಂಗಮ್ಮ ದೇವಿ ಜಾತ್ರೆ ಹಾಗೂ ಶಿವಾನುಭವ ಗೋಷ್ಠಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರು ಹಾಗೂ ದಾರ್ಶನಿಕರ ಜೀವನ ಚರಿತ್ರೆಯನ್ನು ಓದಬೇಕು. ಅದರಿಂದ ಜೀವನದ ತಿರುಳು ತಿಳಿಯುತ್ತದೆ ಎಂದರು.

    ಯಾರೂ ಸರಳವಾಗಿ ಸಾಧನೆ ಮಾಡಿದವರಲ್ಲ. ಕಷ್ಟಗಳು ಯಾರನ್ನೂ ಬಿಟ್ಟಿಲ್ಲ. ಎಂತಹ ಕಷ್ಟ ಬಂದರೂ ಅವರು ಉಪವಾಸ, ವನವಾಸ ಅನುಭವಿಸಿದ್ದಾರೆ. ಆದರೆ, ನೀತಿ, ಧರ್ಮ ಬಿಟ್ಟಿಲ್ಲ. ಆದ್ದರಿಂದಲೇ ಅವರು ಮಹಾತ್ಮರ ಸಾಲಿನಲ್ಲಿ ಕಂಗೊಳಿಸುತ್ತಿದ್ದಾರೆ. ಹಾಗಾಗಿ ನಿರಂತರ ಪರಿಶ್ರಮ ಅಗತ್ಯ ಎಂದರು.

    ಮಾತೋಶ್ರೀ ಲಲಿತಾ ತಾಯಿ, ಶಂಕರಹಟ್ಟಿಯ ಶಂಕರಾನಂದ ಶರಣರು, ಪುಣೆ ಉದ್ಯಮಿ ಚಂದ್ರಶೇಖರ ಗಾಣಿಗೇರ, ಕನ್ನಡ ಸಂಘಟನೆಗಳ ಕಾರ್ಯದರ್ಶಿ ಮುರುಗೇಶ ಗಿರಿಸಾಗರ ಮಾತನಾಡಿದರು. ನ್ಯಾಯವಾದಿ ಬಸವರಾಜ ಅಂಬಿ, ಅಮೂಲ ನಾಯಿಕ, ಸುಭಾಷ ದಳವಾಯಿ, ತಮ್ಮಣ್ಣ ಸಾವಗಾವ, ಪರಪ್ಪ ಚೌಗಲಾ, ಬಸವರಾಜ ದರೂರ, ದುಂಡಪ್ಪ ಅವಟಿ, ಬಸವರಾಜ ಖೇಮಲಾಪುರ, ಪ್ರಕಾಶ ತೇಲಿ, ಚಿದಾನಂದ ತಾವಂಶಿ, ಶಿವಾನಂದ ನಂದಗಾವ, ರಾಘವೇಂದ್ರ ಮಂಗಸೂಳಿ, ರಾಜು ಅಥಣಿ, ಗಣೇಶ ಪಾಟೀಲ, ಶ್ರೀಶೈಲ ಗಾಣಿಗೇರ, ನರಸಪ್ಪ ಮಗದುಮ್ಮ ಇತರರು ಇದ್ದರು. ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts