More

    ಚೊಚ್ಚಲ ಚುನಾವಣೆಯಲ್ಲೇ ಭರ್ಜರಿ ಗೆಲುವಿನತ್ತ ಜಡೇಜಾ ಪತ್ನಿ: ವಿಜಯದ ಸಂಕೇತ ಪ್ರದರ್ಶಿಸಿದ ರಿವಾಬಾ

    ಅಹಮದಾಬಾದ್​: ಗುಜರಾತ್​ ಸದಾ ಬಿಜೆಪಿಯೊಂದಿಗೆ ಇದೆ ಮತ್ತು ಮುಂದೆಯೂ ಇರುತ್ತದೆ ಎಂದು ಜಾಮ್​ನಗರ (ಉತ್ತರ)ದ ಬಿಜೆಪಿ ಅಭ್ಯರ್ಥಿ ಹಾಗೂ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಅವರು ಹೇಳಿದರು.

    ಗುಜರಾತ್​ ಚುನಾವಣೆಯ ಪೂರ್ಣ ಫಲಿತಾಂಶ ಸಂಜೆ ಹೊತ್ತಿಗೆ ಹೊರಬೀಳಲಿದೆ. ಆದರೆ, ಸದ್ಯದ ಟ್ರೆಂಡ್​ ಪ್ರಕಾರ 158 ಸ್ಥಾನಗಳಲ್ಲಿ ಬಿಜೆಪಿ ಮುಂದಿದ್ದು, ಮ್ಯಾಜಿಕ್​ ನಂಬರ್​ ದಾಟಿ ಭರ್ಜರಿ ಗೆಲುವಿನತ್ತು ದಾಪುಗಾಲು ಇಡುತ್ತಿದ್ದು, ಮತ್ತೊಮ್ಮೆ ಅಧಿಕಾರ ಏರುವುದು ಖಚಿತವಾಗಿದೆ.

    ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿರುವ ಖುಷಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿವಾಬಾ ಜಡೇಜಾ, ನನ್ನನ್ನು ಅಭ್ಯರ್ಥಿಯನ್ನಾಗಿ ಸಂತೋಷವಾಗಿ ಸ್ವೀಕರಿಸಿದ ಜನರಿಗೆ, ನನ್ನ ಪರವಾಗಿ ಕೆಲಸ ಮಾಡಿದವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಇದು ನನ್ನೊಬ್ಬಳ ಗೆಲುವಲ್ಲ, ಇದು ಎಲ್ಲರ ಗೆಲುವು ಎಂದು ಹೇಳಿದರು.

    ಚುನಾವಣಾ ಆಯೋಗದ ಪ್ರಕಾರ ರಿವಾಬಾ ಅವರು 31 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಗೆಲುವಿನ ಸನಿಹದಲ್ಲಿದ್ದಾರೆ. ಹೀಗಾಗಿ ಮಾಧ್ಯಮಗಳ ಮುಂದೆ ವಿಜಯದ ಸಂಕೇತ ತೋರಿ ಖುಷಿಯನ್ನು ವ್ಯಕ್ತಪಡಿಸಿದರು.

    ಕಳೆದ 27 ವರ್ಷಗಳಿಂದ ಬಿಜೆಪಿ ಗುಜರಾತ್‌ನಲ್ಲಿ ಕೆಲಸ ಮಾಡಿದ ರೀತಿ ಮತ್ತು ಗುಜರಾತ್ ಮಾದರಿಯನ್ನು ಸ್ಥಾಪಿಸಿದ ರೀತಿಯಿಂದಾಗಿ ಜನರು ಬಿಜೆಪಿಯೊಂದಿಗೆ ಅಭಿವೃದ್ಧಿ ಯಾತ್ರೆಯನ್ನು ಮುಂದುವರಿಸಲು ಬಯಸುತ್ತಾರೆ ಎಂದರು.

    ಮತ ಎಣಿಕೆಯ ಸದ್ಯದ ಟ್ರೆಂಡ್​ ಪ್ರಕಾರ ಗುಜರಾತ್​ನಲ್ಲಿ ಆಡಳಿತಾರೂಢ ಬಿಜೆಪಿ 158 ಸ್ಥಾನಗಳಲ್ಲಿ ಮುಂದಿದ್ದರೆ, ಕಾಂಗ್ರೆಸ್​ 16, ಎಎಪಿ 5 ಮತ್ತು ಇತರೆ 3 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಒಟ್ಟು 182 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಗುಜರಾತ್​ನಲ್ಲಿ ಅಧಿಕಾರ ರಚನೆಗೆ 92 ಮ್ಯಾಜಿಕ್​ ನಂಬರ್​ ಬೇಕಿದೆ. ಆದರೆ, ಬಿಜೆಪಿ ಈಗಾಗಲೇ ಮ್ಯಾಜಿಕ್​ ನಂಬರ್​ ದಾಟಿ ಮುಂದೆ ಸಾಗಿದ್ದು, ಅಧಿಕಾರ ಹಿಡಿಯುವುದು ಖಚಿತವಾಗಿದೆ. (ಏಜೆನ್ಸೀಸ್​)

    ಕಾಂಗ್ರೆಸ್​ಗೆ ಬಿಗ್​ ಶಾಕ್​​:​ ಗುಜರಾತಿನಲ್ಲಿ ಇದೇ ಮೊದಲ ಬಾರಿಗೆ ವಿಶೇಷ ಸಾಧನೆ ಮಾಡಿದ ಬಿಜೆಪಿ

    ಗುಜರಾತ್‌-ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು…

    ಪಿಯು ಪಾಸಾದವರಿಗೆ ಕೇಂದ್ರ ಸರ್ಕಾರಿ ಹುದ್ದೆ: ಎಸ್​ಎಸ್​ಸಿಯಿಂದ 4,500 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts