ಅಹಮದಾಬಾದ್: ಪ್ರೇಮಿಗಳ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗದೇ ಎರಡು ಮನಸ್ಸುಗಳ ನಡುವಿನ ಪರಸ್ಪರ ಹೊಂದಾಣಿಕೆ, ತ್ಯಾಗ, ಪ್ರೀತಿ, ರಕ್ಷಣೆ, ಪಾಲನೆ ಹಾಗೂ ಗೌರವ ನಿರಂತರವಾಗಿ ಕಾಪಾಡಿಕೊಂಡರೆ ಪ್ರೇಮಿಗಳ ದಿನಕ್ಕೆ ಒಂದು ಅರ್ಥ ಬರುತ್ತದೆ. ಸುಖದಲ್ಲಿ ಮಾತ್ರ ಭಾಗಿಯಾಗದೇ ಕಷ್ಟದ ದಿನಗಳಲ್ಲಿ ಕೈ ಹಿಡಿದು ನಡೆಸುವವನೇ/ನಡೆಸುವವಳೇ ನಿಜವಾದ ಪ್ರೇಮಿ. ಅಂತಹ ಪ್ರೇಮಿಗಳ ದಿನಕ್ಕೆ ಗುಜರಾತ್ ಮೂಲದ ವ್ಯಕ್ತಿ ಹೊಸ ಭಾಷ್ಯ ಬರೆದಿದ್ದಾರೆ.
ಹೌದು. ವ್ಯಾಲೆಂಟೈನ್ಸ್ ದಿನದಂದೇ ಗುಜರಾತ್ ಮೂಲದ ವ್ಯಕ್ತಿ, ಅನಾರೋಗ್ಯ ಪೀಡಿತ ಪತ್ನಿಗೆ ಕಿಡ್ನಿಯನ್ನು ದಾನ ಮಾಡಿದ್ದಾನೆ. ಫೆ. 14ರಂದೇ ಅವರ 23ನೇ ಮದುವೆ ವಾರ್ಷಿಕೋತ್ಸವವನ್ನು ದಂಪತಿ ಆಚರಿಸಿಕೊಳ್ಳುತ್ತಿದ್ದಾರೆ.
ರೀತಾ ಪಟೇಲ್ ಕಿಡ್ನಿ ಸಮಸ್ಯೆ ಇದೆ. ಕಳೆದ ಮೂರು ವರ್ಷಗಳಿಂದ ಚಿಕಿತ್ಸೆ ಕೊಡಿಸಿದರು ಯಾವುದೇ ಪ್ರಯೋಜನವಾಗಿಲ್ಲ. ನಿಧಾನವಾಗಿ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಗಮನಿಸಿದ ಪತಿ ವಿನೋದ್ ಪಟೇಲ್ ಪತ್ನಿಗೆ ಕಿಡ್ನಿ ದಾನ ಮುಂದೆ ಬಂದಿದ್ದಾರೆ. ಇಬ್ಬರನ್ನೂ ಪರಿಶೀಲಿಸಿದ ಬಳಿಕ ಮೂತ್ರಪಿಂಡ ಕಸಿಗೆ ಸೂಕ್ತವೆಂದು ತಿಳಿದುಬಂದಿದೆ.
ಇಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ವಿನೋದ್ ತಮ್ಮ ಪತ್ನಿಗೆ ಕಿಡ್ನಿ ದಾನ ಮಾಡಲಿದ್ದಾರೆ. ಸ್ವಯಂ ನಿರೋಧಕ ಕಾಯಿಲೆಯಲ್ಲಿ, ಸಾಮಾನ್ಯವಾಗಿ ದೇಹವನ್ನು ಸೋಂಕಿನಿಂದ ರಕ್ಷಿಸುವ ಪ್ರತಿರಕ್ಷಣಾ ವ್ಯವಸ್ಥೆಯು ದೇಹದ ಆರೋಗ್ಯಕರ ಭಾಗಗಳನ್ನು ತಪ್ಪಾಗಿ ಆಕ್ರಮಿಸುತ್ತದೆ ಎಂದು ವೈದ್ಯರ ತಿಳಿಸಿದ್ದಾರೆ. ಅಲ್ಲದೆ, ವ್ಯಾಲೆಂಟೈನ್ಸ್ ದಿನದಂದು ಮೊದಲ ಬಾರಿಗೆ ಸರ್ಜರಿ ಮಾಡುತ್ತಿದ್ದು, ನಾವು ಉತ್ಸುಕರಾಗಿದ್ದೇವೆಂದು ವೈದ್ಯರೊಬ್ಬರ ಹೇಳಿದ್ದಾರೆ.
ಪತ್ನಿ ನೋವು ಪಡುತ್ತಿರುವುದನ್ನು ನೋಡಲಾಗದೇ ಕಿಡ್ನಿ ದಾನ ಮಾಡುತ್ತಿರುವುದಾಗಿ ವಿನೋದ್ ಹೇಳಿದ್ದಾರೆ. ನನ್ನ ಪತ್ನಿ ಕಳೆದ ಮೂರು ವರ್ಷಗಳಿಂದ ರೋಗದಿಂದ ಬಳಲುತ್ತಿದ್ದಾಳೆ. ಡಯಾಲಿಸಿಸ್ ಸಹ ಮಾಡಿಸಲಾಗಿದೆ. ಆದರೆ, ಆಕೆಯ ನೋವನ್ನು ನೋಡಲಾಗದೇ, ಕಿಡ್ನಿ ದಾನ ಮಾಡುವ ನಿರ್ಧಾರ ಮಾಡಿದೆ. ಅವಳಿಗೆ 44 ವರ್ಷ ವಯಸ್ಸು. ಎಲ್ಲರು ಸಹ ತಮ್ಮ ಪಾಲುದಾರರನ್ನು ಗೌರವಿಸಬೇಕು ಮತ್ತು ಒಬ್ಬರಿಗೊಬ್ಬರು ಸಹಾಯ ಮಾಡಬೇಕೆಂಬ ಸಂದೇಶವನ್ನು ಸಾರುತ್ತಿದ್ದೇನೆಂದು ವಿನೋದ್ ಹೇಳಿದ್ದಾರೆ.
ಪತಿಗೆ ಕೃತಜ್ಞತೆ ಸಲ್ಲಿಸಿರುವ ರೀಟಾ, ಕಷ್ಟದ ಸಮಯದಲ್ಲಿ ತನ್ನ ಬೆನ್ನಿಗೆ ನಿಂತಂತಹ ಅದ್ಭುತ ಪಾಲುದಾರನನ್ನು ಹೊಂದಿರುವ ನಾನು ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್)
ಶಾಕಿಂಗ್! ಚಾವಣಿ ತೆಗೆದು ಒಳನುಗ್ಗಿ ಹಸುಗೂಸನ್ನು ಎಳೆದೊಯ್ದ ಮಂಗ- ಅಸುನೀಗಿದ ಕಂದಮ್ಮ
ಹೆಲಿಕಾಪ್ಟರ್ ಖರೀದಿಸಿ ಓಡಿಸಬೇಕಿದೆ… ಪ್ಲೀಸ್ ಪರವಾನಗಿ ನೀಡಿ: ಮಹಿಳೆಯೊಬ್ಬರಿಂದ ರಾಷ್ಟ್ರಪತಿಗೆ ಮನವಿ
ಲಾರಿ, ಬಸ್ ನಡುವೆ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: 14 ಮಂದಿ ದುರ್ಮರಣ- ಕೆಲವರ ಸ್ಥಿತಿ ಚಿಂತಾಜನಕ