More

    ‘ಹಿಂದು’ ಹುಡುಗಿಯರ ತಂಟೆಗೆ ಬಂದ್ರೆ ಸುಮ್ಮನಿರಲ್ಲ: ಗುಜರಾತ್ ಸಿಎಂ ಖಡಕ್ ಎಚ್ಚರಿಕೆ

    ಅಹಮದಾಬಾದ್: ಹಿಂದೂ ಹುಡುಗಿಯರ ತಂಟೆಗೆ ಬರದಂತೆ ಹಾಗೆಯೇ ಗೋ ಹತ್ಯೆ ಮಾಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಅಹಮದಾಬಾದ್ ವೈಷ್ಣೋದೇವಿ ವೃತ್ತದ ಬಳಿ ಮಾಲಧಾರಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಹುಡುಗಿಯನ್ನು ಲವ್ ಜಿಹಾದ್ ಬಲೆಗೆ ಬೀಳಿಸುವ ಹಾಗೂ ಅವರೊಂದಿಗೆ ಓಡಿಹೋಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಿಎಂ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಗೋ ಹತ್ಯೆ ಮಾಡುವವರ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ನಮ್ಮ ಸರ್ಕಾರವು ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿದೆ. ಗುಜರಾತ್​ನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ತಿದ್ದುಪಡಿ ಕಾಯ್ದೆ 2021ನ್ನು ಏಪ್ರಿಲ್​ ತಿಂಗಳಲ್ಲಿ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಹಾಗೇ, ಜೂನ್​ 15ರಂದು ಅಧಿಸೂಚನೆ ಹೊರಡಿಸಲಾಗಿದೆ. ಅದರ ಅನ್ವಯ ಮದುವೆ ಅಥವಾ ಇನ್ಯಾವುದೇ ವಿಧಾನದ ಮೂಲಕ ಬಲವಂತದ ಮತಾಂತರ ಕ್ರಿಯೆ ನಡೆಸಿದರೆ, ಕಠಿಣ ಶಿಕ್ಷೆಯಿದೆ. ಆದರೆ ಈ ಕಾನೂನಿನಲ್ಲಿರುವ ಕೆಲವು ವಿವಾದಾತ್ಮಕ ಅಂಶಗಳಿಗೆ ಕಳೆದ ತಿಂಗಳು ಗುಜರಾತ್ ಹೈಕೋರ್ಟ್ ತಡೆ ನೀಡಿದೆ.

    ಹಬ್ಬದ ದಿನವೇ ದುರಂತ: ಜವರಾಯನಾಗಿ ಬಂದ ಲಾರಿಗೆ, ಇಬ್ಬರು ಬೈಕ್ ಸವಾರರು ಬಲಿ

    ಹೆದ್ದಾರಿಯಲ್ಲೇ ಇಳಿದ ವಾಯುಪಡೆ ವಿಮಾನ!; ಪಾಕ್​ ಗಡಿ ಸಮೀಪ ಯಶಸ್ವಿ ಪ್ರಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts