More

    ಶ್ರೀ ವೀರಭದ್ರ ದೇವರ ಗುಗ್ಗಳೋತ್ಸವ 27ರಂದು

    ಉಪ್ಪಿನಬೆಟಗೇರಿ: ಸಮೀಪದ ಅಮ್ಮಿನಬಾವಿ ಗ್ರಾಮದ ಪಂಚಗೃಹ ಹಿರೇಮಠದ ಆವರಣದಲ್ಲಿಯ ಕ್ಷೇತ್ರನಾಥ ಶ್ರೀ ವೀರಭದ್ರ ದೇವರ ವಾರ್ಷಿಕ ಗುಗ್ಗಳೋತ್ಸವ ನ. 27ರಂದು ಜರುಗಲಿದೆ.

    ಕಾರ್ತಿಕ ಮಾಸದ ಗೌರಿ ಹುಣ್ಣಿಮೆಯಂದು ಬೆಳಗ್ಗೆ ಶ್ರೀ ವೀರಭದ್ರ ದೇವರಿಗೆ ಪಂಚಾಮೃತ ಸಹಿತ ಏಕಾದಶ ಮಹಾರುದ್ರಾಭಿಷೇಕ, ಅಷ್ಟೋತ್ತರ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ ಹಾಗೂ ಮಹಾಮಂಗಳಾರತಿ ಜರುಗಲಿವೆ.

    ದೇವಾಲಯದಿಂದ ಬೆಳಗ್ಗೆ 7 ಗಂಟೆಗೆ ಹೊರಡುವ ಗುಗ್ಗಳೋತ್ಸವವನ್ನು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯರು ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯರು ಉದ್ಘಾಟಿಸುವರು. ಪಲ್ಲಕ್ಕಿ ಮತ್ತು ನಂದಿಕೋಲು ಸಮೇತ ಕರಡಿಮಜಲು, ಭಜನೆ, ಸಂಬಾಳ ಸಹಿತ ವಿವಿಧ ಜನಪದ ವಾದ್ಯ ಮೇಳಗಳೊಂದಿಗೆ ಗುಗ್ಗಳೋತ್ಸವವು ಅಮ್ಮಿನಬಾವಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಶ್ರೀ ವೀರಭದ್ರಸ್ವಾಮಿ ದೇವಾಲಯಕ್ಕೆ ಆಗಮಿಸಲಿದೆ. ಮರೇವಾಡ, ಕರಡಿಗುಡ್ಡ, ಸುಳ್ಳ, ಮುಗದ, ಅಮ್ಮಿನಬಾವಿ, ಹಿರೇವಡ್ಡಟ್ಟಿ ಮುಂತಾದ ಗ್ರಾಮಗಳ ಹಿರಿಯ ಪುರವಂತರು ಸೇವೆ ಸಲ್ಲಿಸುವರು. ವಿವಾಹದ ಸಂದರ್ಭದಲ್ಲಿ ಗುಗ್ಗಳ ಕಾರ್ಯ ನೆರವೇರಿಸುವರು. ಈ ವೇಳೆ ಗುಗ್ಗಳದ ಹರಕೆ ತೀರಿಸಲು ಎಲ್ಲರಿಗೂ ಅವಕಾಶವಿದೆ.

    ದೀಪೋತ್ಸವ: ಗೌರಿ ಹುಣ್ಣಿಮೆಯ ಕಾರ್ತಿಕ ದೀಪೋತ್ಸವವನ್ನು ನ. 27ರಂದು ಸಂಜೆ 7 ಗಂಟೆಗೆ ನೆರವೇರಲಿದೆ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts