More

    ಸೀಬೆಹಣ್ಣು ತಿನ್ನೋದ್ರಿಂದ ಏನೇನು ಉಪಯೋಗ ಗೊತ್ತಾ?

    ಸೀಬೆ ಹಣ್ಣಿನ ಸೀಸನ್​ ಆರಂಭವಾಗಿದೆ. ಹಳ್ಳಿ ಕಡೆಗಳಲ್ಲಿ ಹೇರಳವಾಗಿ ಸಿಗುವ ಈ ಸೀಬೆ ಹಣ್ಣು (ಪೇರಲೆ ಹಣ್ಣು) ಬಾಯಿಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ದಿನಕ್ಕೆ ಒಂದು ಸೀಬೆ ಹಣ್ಣು ತಿನ್ನುವುದರಿಂದ ನಿಮ್ಮ ಆರೋಗ್ಯ ಸಾಕಷ್ಟು ಸುಧಾರಿಸುತ್ತದೆ ಎನ್ನುತ್ತಾರೆ ಅನೇಕ ಆರೋಗ್ಯ ತಜ್ಞರು.

    ಸೀಬೆ ಹಣ್ಣಿನಲ್ಲಿ ವಿಟಮಿನ್​ ಸಿ ಹೆಚ್ಚಾಗಿರುತ್ತದೆ. ವಿಟಮಿನ್ ಸಿ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾದಲ್ಲಿ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಹೃದಯವನ್ನು ಸಹ ಆರೋಗ್ಯಕರವಾಗಿಟ್ಟುಕೊಳ್ಳುವಲ್ಲಿ ವಿಟಮಿನ್​ ಸಿ ಸಹಕರಿಸುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಈ ವಿಟಮಿನ್​ ತೂಕ ಹೆಚ್ಚಿಸಿಕೊಳ್ಳುವಲ್ಲಿಯೂ ಸಹಕಾರಿ. ಸೀಬೆಹಣ್ಣಿನಲ್ಲಿ ಹಣ್ಣಿನಲ್ಲಿ ಫೈಬರ್​ ಅಂಶವೂ ಸಹ ಹೆಚ್ಚಾಗಿದ್ದು, ಡಯೆಟ್​ ಮಾಡುವವರು ಮಧ್ಯಾಹ್ನದ ಊಟದ ಬದಲಿಗೆ ಇದನ್ನು ತಿನ್ನುವದರಿಂದ ಜೀರ್ಣಶಕ್ತಿ ಹೆಚ್ಚಾಗಿ ದೇಹವನ್ನು ಸಧೃಡವಾಗಿ ನೋಡಿಕೊಳ್ಳಬಹುದಾಗಿದೆ.

    ಅದಷ್ಟೇ ಅಲ್ಲದೆ ಸೀಬೆ ಹಣ್ಣಿನ್ನು ತಿನ್ನುವುದರಿಂದ ಮಹಾಮಾರಿ ಕ್ಯಾನ್ಸರ್​ ಅನ್ನು ಸಹ ತಡೆಯಬಹುದು ಎನ್ನುವುದು ತಜ್ಞರ ಅಭಿಪ್ರಾಯ.
    ಸೀಬೆ ಹಣ್ಣು ಮಾತ್ರವಲ್ಲದೆ ಅದರ ಎಲೆಗಳೂ ಕೂಡ ನಿಮ್ಮ ದೇಹವನ್ನು ರೋಗದಿಂದ ದೂರವಿರುವಂತೆ ಮಾಡುತ್ತವೆ. ಸೀಬೆ ಹಣ್ಣು ಮತ್ತು ಎಲೆ ಎರಡರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎನ್ನುತ್ತಾರೆ ಪೌಷ್ಠಿಕಾಂಶ ತಜ್ಞರು. ದಿನಕ್ಕೆ ಒಂದು ಸೀಬೆ ಹಣ್ಣು ತಿನ್ನುವುದರಿಂದ ದೇಹಕ್ಕೆ ಅಗತ್ಯವಿರುವುದಕ್ಕಿಂತ ಶೇ.200 ಹೆಚ್ಚು ವಿಟಮಿನ್​ ಸಿ ದೇಹದೊಳಗೆ ಸೇರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts