More

    ಖಾತ್ರಿಯಲ್ಲಿ ಯಂತ್ರ ಬಳಕೆ, ಹಣ ದುರ್ಬಳಕೆ ಮಾಡಿದ್ದಾಗಿ ಕೂಲಿಕಾರರ ಆರೋಪ

    ಮುದಗಲ್: ಖಾತ್ರಿಯಡಿ ಕೆಲಸ ನೀಡಬೇಕಾದ ಅಧಿಕಾರಿಗಳೇ ಯಂತ್ರದ ಮೂಲಕ ಸಜ್ಜಲಗುಡ್ಡದಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೆಲಸ ಮಾಡಿಸಿದ್ದಾರೆ. 2.50 ಲಕ್ಷ ರೂ. ವೆಚ್ಚದಲ್ಲಿ ಮಳೆ ನೀರು ಕೊಯ್ಲು ಕಾಮಗಾರಿ ಕೈಗೊಳ್ಳುವ ಮೂಲಕ 46,200 ರೂ.ಯನ್ನು ಬೇನಾಮಿ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬುದು ಕೂಲಿ ಕಾರ್ಮಿಕರ ಆರೋಪ. ಈ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಮೀಣ ಕೂಲಿ ಕಾರ್ಮಿಕ ಸಂಘ (ಗ್ರಾಕೂಸ್)ದ ಕಾರ್ಮಿಕರಾದ ಹನುಮಂತ, ಶರಣಬಸವ, ಕನಕಪ್ಪ, ನೂರಂದಪ್ಪ ಗುರಿಕಾರ, ಆದಪ್ಪ ಇಲಕಲ್ ಆರೋಪ. ‘ಕೂಲಿ ಕಾರ್ಮಿಕರಿಗೆ ಕೆಲಸ ಕೊಡದ ಗ್ರಾಪಂ ಅಧಿಕಾರಿಗಳು ಜೆಸಿಬಿ ಯಂತ್ರ ಬಳಸಿ ಲಕ್ಷಾಂತರ ಹಣ ಲಪಟಾಯಿಸಲು ಮುಂದಾಗಿದ್ದಾರೆ. ದಾಖಲೆ ಸಮೇತ ತಾಪಂ ಮುಂದೆ ಧರಣಿ ನಡೆಸಲಾಗುವುದು’ ಎನ್ನುತ್ತಾರೆ ಕಾರ್ಮಿಕ ಬಸವರಾಜ ಮುದಗಲ್.

    ಬಯ್ಯಪುರು ಗ್ರಾಪಂ ವ್ಯಾಪ್ತಿ ಸಜ್ಜಲಗುಡ್ಡದಲ್ಲಿ ಜೆಸಿಬಿ ಯಂತ್ರದ ಮೂಲಕ ಕೆಲಸ ಮಾಡಿಸಿರುವುದು ತಪ್ಪು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
    | ಸೋಮನಗೌಡ, ಖಾತ್ರಿ ತಾಲೂಕ ಸಹಾಯಕ ನಿರ್ದೇಶಕ, ಲಿಂಗಸುಗೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts