More

    ದಾಖಲೆಗಳಿಲ್ಲದೆ ಚಿನ್ನಾಭರಣ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳ ಮೇಲೆ ಜಿಎಸ್​ಟಿ ಅಧಿಕಾರಿಗಳ ದಾಳಿ: 60 ಕೆ.ಜಿ ಚಿನ್ನ ಜಪ್ತಿ

    ಬೆಂಗಳೂರು: ಸೂಕ್ತ ದಾಖಲೆಗಳಿಲ್ಲದೆ ಚಿನ್ನದ ವ್ಯಾಪಾರ ಮಾಡುತ್ತಿದ್ದ ಚಿನ್ನಾಭರಣ ಅಂಗಡಿಗಳ ಮೇಲೆ ಜಿಎಸ್​ಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 23 ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದ್ದು 12 ಕೋಟಿ ರೂಪಾಯಿ ಮೌಲ್ಯದ 60.ಕೆ.ಜಿ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ.

    ನಗರದ ಚಿಕ್ಕಪೇಟೆಯಲ್ಲಿರುವ 23 ಚಿನ್ನಾಭರಣ ಅಂಗಡಿಗಳ ಮೇಲೆ ಇಂದು ಜಿಎಸ್​ಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೊರ ರಾಜ್ಯಗಳಿಂದ ಬಂದಿರುವ ವರ್ತಕರು ಇಲ್ಲಿ ಅಂಗಡಿ ತೆರೆದು ಯಾವುದೇ ದಾಖಲೆಗಳಿಲ್ಲದೆ ವ್ಯಾಪಾರ ನಡೆಸುತ್ತಿರುವುದು ದಾಳಿಯ ವೇಳೆ ಬೆಳಕಿಗೆ ಬಂದಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು 12 ಕೋಟಿ ರೂ.ಮೌಲ್ಯದ 60 ಕೆ.ಜಿ. ಚಿನ್ನಾಭರಣವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಈ ವ್ಯಾಪಾರಿಗಳು ಸುಂಕದಿಂದ ತಪ್ಪಿಸಿಕೊಳ್ಳುವ ಸಲುವಾಗಿ ದಾಖಲೆಗಳನ್ನು ಮಾಡಿಸಿಕೊಂಡಿರಲಿಲ್ಲ ಎನ್ನುವ ಮಾಹಿತಿ ಲಭಿಸಿದೆ.
    ದಾಳಿ ನಡೆಯುವ ಮಾಹಿತಿ ಸಿಕ್ಕ ತಕ್ಷಣ ಚಿನ್ನಾಭರಣವನ್ನು ಕಳ್ಳ ಸಾಗಾಟ ಮಾಡುವುದಕ್ಕೆ ವರ್ತಕರು ಪ್ರಯತ್ನಿಸಿದ್ದು ಅಂತಹ ವರ್ತಕರಿಗೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

    ಇದೇ ಸಮಯದಲ್ಲಿ ರಾಜಾ ಮಾರ್ಕೆಟ್​ನಲ್ಲಿ ಯಾವುದೇ ದಾಖಲೆಗಳಿಲ್ಲದೆ 3.5ಕೆ.ಜಿ ಚಿನ್ನವನ್ನು ಸಾಗಾಟ ಮಾಡುತ್ತಿದ್ದುದ್ದು ತಿಳಿದುಬಂದಿದೆ. ಕಳ್ಳ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹಿಡಿದಿರುವ ಜಿಎಸ್​ಟಿ ಅಧಿಕಾರಿಗಳು ಅವರಿಬ್ಬರಿಗೂ ದಂಡ ವಿಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts