More

    ಇಂದು ಜಿಎಸ್​ಟಿ ಮಂಡಳಿ ಸಭೆ

    ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿಯ ಸಭೆ ಶುಕ್ರವಾರ ನಡೆಯಲಿದ್ದು, ಆದಾಯದ ಮೇಲೆ ಕೋವಿಡ್-19 ಬೀರಿರುವ ಪರಿಣಾಮಗಳ ಬಗ್ಗೆ ರ್ಚಚಿಸಲಿದೆ. ರಾಜ್ಯಗಳಿಗೆ ನೀಡಬೇಕಾದ ಪರಿಹಾರಕ್ಕೆ ಸಂಬಂಧಿಸಿ ಸೂತ್ರಗಳನ್ನು ಈ ಸಭೆ ನಿರ್ಧರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯ ಸಮಿತಿ ವಿಡಿಯೋ ಕಾನ್ಪರೆನ್ಸ್ ಮೂಲಕ ತನ್ನ 40ನೇ ಸಭೆಯನ್ನು ನಡೆಸಲಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಸಮಿತಿಯ ಸದಸ್ಯರಾಗಿರುತ್ತಾರೆ. 2017ರ ಆಗಸ್ಟ್ ಅವಧಿಗೆ ಜಿಎಸ್​ಟಿ ವಿವರ (ರಿಟರ್ನ್ಸ್) ಸಲ್ಲಿಸದವರಿಗೆ ವಿಧಿಸುವ ದಂಡವನ್ನು ಮನ್ನಾ ಮಾಡುವ ಬಗ್ಗೆಯೂ ಸಭೆ ರ್ಚಚಿಸಲಿದೆ.

    ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಆದರೆ, ಜಿಎಸ್​ಟಿ ಅನುಷ್ಠಾನದಿಂದಾಗಿ ರಾಜ್ಯಗಳು ಅನುಭವಿಸುವ ನಷ್ಟವನ್ನು ಭರ್ತಿ ಮಾಡಿಕೊಡಲು ನಿಧಿ ಸಂಗ್ರಹಿಸುವ ಮಾಗೋ ಪಾಯಗಳನ್ನು ಸಭೆಯಲ್ಲಿ ರ್ಚಚಿಸುವ ಸಂಭವ ಹೆಚ್ಚಿದೆ. ಮಹಾಮಾರಿ ಕರೊನಾದಿಂದಾಗಿ ರಾಜ್ಯಗಳು ಹಾಗೂ ಕೇಂದ್ರಕ್ಕೆ ಉಂಟಾದ ನಷ್ಟವನ್ನು ಹೇಗೆ ಸರಿದೂಗಿಸುವುದು ಎಂಬ ಅಂಶವೂ ಸಭೆಯಲ್ಲಿ ಚರ್ಚೆಗೆ ಬರಲಿದೆ.

    ಒಂಬತ್ತನೇ ತರಗತಿವರೆಗೂ ಆನ್‌ಲೈನ್ ಕ್ಲಾಸ್ ರದ್ದತಿಗೆ ಸರ್ಕಾರ ನಿರ್ಧಾರ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts