More

    ಸಿಎಂ ಯೋಗಿ ಹೆಸರಿಗೆ ಕಪ್ಪು ಬಳಿದ ಮಂದಿ; 150 ಜನರ ವಿರುದ್ಧ ಎಫ್​ಐಆರ್​

    ಲಖನೌ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಇತ್ತೀಚೆಗೆ ಉದ್ಘಾಟಿಸಿದ ಪ್ರತಿಮೆಯೊಂದರ ಫಲಕದ ಮೇಲಿದ್ದ ಅವರ ಹೆಸರಿಗೆ ಕಪ್ಪು ಬಣ್ಣ ಬಳೆದಿರುವ ಪ್ರಸಂಗ ನಡೆದಿದೆ. ಈ ಹಿನ್ನೆಲೆಯಲ್ಲಿ ಗ್ರೇಟರ್​ ನಾಯ್ಡ ಜಿಲ್ಲೆಯ ದಾದ್ರಿ ಪ್ರದೇಶದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸುಮಾರು 150 ಜನರ ವಿರುದ್ಧ ಎಫ್​.ಐ.ಆರ್​. ದಾಖಲಿಸಿದ್ದಾರೆ ಎನ್ನಲಾಗಿದೆ.

    ದಾದ್ರಿಯ ಖಾಸಗಿ ಕಾಲೇಜೊಂದರಲ್ಲಿ 9ನೇ ಶತಮಾನದ ರಾಜ ಮಿಹಿರ್ ಭೋಜ್​ನ 15 ಅಡಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಸಿಎಂ ಯೋಗಿ ಆದಿತ್ಯನಾಥ್​ ಸೆ.22 ರಂದು ಅದರ ಉದ್ಘಾಟನೆ ಮಾಡಿದ್ದರು. ಆದರೆ, ಪ್ರತಿಮೆಯ ಕೆಳಗಿನ ಫಲಕದಲ್ಲಿ ರಾಜನ ಹೆಸರ ಮುಂಚೆ ‘ಗುರ್ಜಾರ್’​ ಎಂಬ ಶಬ್ದವನ್ನು ತೆಗೆಯಲಾಗಿತ್ತು. ಈ ಬಗ್ಗೆ ಗುರ್ಜಾರ್​ ಸಮುದಾಯದ ಜನರು ಆವೇಶಕ್ಕೊಳಗಾಗಿ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಮಹಾಪಂಚಾಯತ್​ ನಡೆಸಿದ್ದರು ಎನ್ನಲಾಗಿದೆ.

    ಸಿಎಂ ಯೋಗಿ ಹೆಸರಿಗೆ ಕಪ್ಪು ಬಳಿದ ಮಂದಿ; 150 ಜನರ ವಿರುದ್ಧ ಎಫ್​ಐಆರ್​

    ಮಂಗಳವಾರದಂದು ಹಲವು ಜನ ಗುಂಪಾಗಿ ಬಂದು ಫಲಕದ ಮೇಲಿದ್ದ ಸಿಎಂ ಹೆಸರಿನ ಮೇಲೆ ಕಪ್ಪು ಪೇಂಟ್​ ಬಳಿದು ಹೋದರು ಎಂಬ ಮಾಹಿತಿ ಬಂತು. ಈ ಹಿನ್ನೆಲೆಯಲ್ಲಿ ಎಫ್​.ಐ.ಆರ್​ ದಾಖಲಿಸಿದ್ದು, ಬಹುತೇಕ ಜನರು ಗುರುತು ಪತ್ತೆ ಹಚ್ಚಲಾಗಿದೆ. ತನಿಖೆ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳದಲ್ಲಿ ಪೊಲೀಸ್​ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿದೆ ಎಂದು ದಾದ್ರಿ ಠಾಣಾಧಿಕಾರಿ ಪ್ರದೀಪ್​ ತ್ರಿಪಾಠಿ ತಿಳಿಸಿದ್ದಾರೆ.

    ಈ ಘಟನೆಯ ವಿಡಿಯೋ ಕೂಡ ಜಾಲತಾಣದಲ್ಲಿ ವೈರಲ್​ ಆಗಿದೆ ಎನ್ನಲಾಗಿದ್ದು, ಯೋಗಿ ಹೆಸರಿನೊಂದಿಗೆ ದಾದ್ರಿ ಶಾಸಕ ತೇಜ್​ಪಾಲ್​ ನಗರ್​, ರಾಜ್ಯಸಭಾ ಸದಸ್ಯ ಸುರೇಂದ್ರ ನಗರ್​ ಮತ್ತು ಸಚಿವ ಅಶೋಕ ಕಟಾರಿಯ ಅವರ ಹೆಸರುಗಳ ಮೇಲೂ ಕಪ್ಪು ಬಣ್ಣ ಬಳಿಯಲಾಗಿದೆ ಎನ್ನಲಾಗಿದೆ. ಈ ನಡುವೆ ಫಲಕದಲ್ಲಿ ರಾಜಾ ಮಿಹಿರ್​ ಭೋಜ್​ ಹೆಸರಿನ ಮುಂದೆ ಗುರ್ಜಾರ್​ ಎಂಬ ಶಬ್ದವನ್ನು ಸೇರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)

    “ಎಲ್ಲ ಪಕ್ಷದಲ್ಲೂ ತಾಲಿಬಾನಿಗಳಿದ್ದಾರೆ; ಕೋಮುವಾದದ ರಾಜಕೀಯ ನಡೀತಿದೆ”

    ಹೀಗೊಂದು ವಿಚಿತ್ರ ಪ್ರಸಂಗ: ತನ್ನದೇ ಶೋಧ ಕಾರ್ಯದಲ್ಲಿ ಪಾಲ್ಗೊಂಡ ಪುರುಷ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts