More

    ಗ್ರಾಪಂ ಮಟ್ಟದಲ್ಲಿ ಗೃಹಲಕ್ಷ್ಮೀ ಶಿಬಿರ

    ಬೆಟ್ಟದಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಊಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮೀ ಶಿಬಿರ ಆಯೋಜಿಸಲಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಕೆ.ಶ್ರೀದೇವಿ ಹೇಳಿದರು.

    ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ ಗೃಹಲಕ್ಷ್ಮೀ ಶಿಬಿರದಲ್ಲಿ ಮಾತನಾಡಿ, ಫಲಾನುಭವಿಗಳ ಬ್ಯಾಂಕ್ ಆಧಾರ್, ನೋಂದಣಿ, ಇಕೆವೈಸಿ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಇನ್ನೂ ಕೂಡ ಹಣ ಪಡೆದಿರುವುದಿಲ್ಲ. ಅಂತಹವರು ಶಿಬಿರದಲ್ಲಿ ಭಾಗವಹಿಸಿ ಸಮಸ್ಯೆ ತಿಳಿದುಕೊಂಡು ಸರಿಪಡಿಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ. ಮೂರು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಕೂಡಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದರು.

    ಈ ಸಂದರ್ಭದಲ್ಲಿ ಬಿಲ್ ಕಲೆಕ್ಟರ್ ರಮಣಯ್ಯ, ಕ್ಲರ್ಕ್ ಮಂಜುನಾಥ್, ಕಂಪ್ಯೂಟರ್ ಆಪರೇಟರ್ ಮಹೇಂದ್ರ, ಅಂಗನಾಡಿ ಕಾರ್ಯಕರ್ತೆಯರಾದ ಆಶಾ, ರತ್ನ, ಸುಧಾ, ಹೇಮಾವತಿ, ಅಂಚೆ ಇಲಾಖೆಯ ಹರ್ಷಿತಾ, ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಬಿ.ಕೆ ರಮೇಶ್, ಸಿಬ್ಬಂದಿ ಪವಿತ್ರ, ಸುವರ್ಣ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts