ಇನ್ನರ್ ವೀಲ್ ಸಂಸ್ಥೆಯಿಂದ ವಿದ್ಯಾರ್ಥಿಗೆ ಕೊಡುಗೆ

blank

ಮಡಿಕೇರಿ: ಕೌಶಲ್ಯ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗೆ ಮಡಿಕೇರಿ ಇನ್ನರ್ ವೀಲ್ ಸಂಸ್ಥೆ ವತಿಯಿಂದ ನೆರವು ನೀಡಲಾಯಿತು.

blank


ದೇವರಕೊಲ್ಲಿ ಗ್ರಾಮದ ಕೆ.ಎಂ.ಜೀವನ್‌ರವರ ತಂದೆ ಎರಡು ವರ್ಷಗಳ ಹಿಂದೆ ಸಿಡಿಲು ಬಡಿದು ಹಾಸಿಗೆ ಹಿಡಿದಿದ್ದಾರೆ. ತಾಯಿಯೋರ್ವರೇ ದುಡಿದು ಮಗನ ಶಿಕ್ಷಣಕ್ಕೆ ನೆರವಾಗುತ್ತಿದ್ದು, ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿ ದರ್ಶನ್‌ಗೆ ಅಗತ್ಯವಿದ್ದ ಮೊಬೈಲ್ ಫೋನ್ ನೀಡಿ ತಾಂತ್ರಿಕವಾಗಿ ಸಹಾಯ ಮಾಡಲಾಯಿತು. ಅಂತೆಯೇ ಡಾ.ಎಂ.ಜಿ.ಪಾಟ್ಕರ್ ಕೂಡ ದರ್ಶನ್‌ಗೆ ಆರ್ಥಿಕ ನೆರವು ನೀಡಿದರು.


ಮಡಿಕೇರಿಯ ಹಿರಿಯ ಲೆಕ್ಕಪರಿಶೋಧಕ ಅನಂತಸುಬ್ಬರಾವ್ ಪುತ್ರಿ ವಿದ್ಯಾ ವಿಷ್ಣುಕಿರಣ್‌ರವರು ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಫೋನ್‌ನ್ನು ಇನ್ನರ್ ವೀಲ್ ಅಧ್ಯಕ್ಷೆ ಡಾ.ರೇಣುಕಾಸುಧಾಕರ್, ಕಾರ್ಯದರ್ಶಿ ಲಲಿತಾ ರಾಘವನ್, ಸದಸ್ಯರಾದ ಜಯಲಕ್ಷ್ಮೀ ಪಾಟ್ಕರ್, ಸಲೀಲಾ ಪಾಟ್ಕರ್, ಉಮಾಗೌರಿ, ಮಲ್ಲಿಗೆ ಪೈ, ಆಗ್ನೇಸ್ ಮುತ್ತಣ್ಣ, ಲತಾ ಚಂಗಪ್ಪ, ಲಕ್ಷ್ಮೀ ಈಶ್ವರ್ ಭಟ್, ದಾನಿಗಳಾದ ಅನಂತ ಸುಬ್ಬರಾವ್, ಡಾ.ಎಂ.ಜಿ.ಪಾಟ್ಕರ್ ಈ ಸಂದರ್ಭ ಹಾಜರಿದ್ದರು.

Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank