More

    ರಸ್ತೆ, ಗೋದಾಮು ಕಾಮಗಾರಿಗೆ ಮಂಜೂರಾತಿ ನೀಡಿ

    ಬ್ಯಾಡಗಿ: ಗ್ರಾಮೀಣ ಪ್ರದೇಶದಲ್ಲಿ ಕೃಷಿ ಅಭಿವೃದ್ಧಿಗೆ ಪೂರಕವಾದ ರಸ್ತೆ, ಗೋದಾಮು, ಕಣ ಕಾಮಗಾರಿಗಳಿಗೆ ರಾಜ್ಯ ನಿರ್ದೇಶಕರ ಕಚೇರಿಯಿಂದ ಮಂಜೂರಾತಿ ಸಿಗುತ್ತಿಲ್ಲ. ಕೂಡಲೆ ಸರ್ಕಾರ ಸಮಸ್ಯೆ ಬಗೆಹರಿಸಿ, ಮಾರುಕಟ್ಟೆ ವ್ಯಾಪ್ತಿಯ ಅಭಿವೃದ್ಧಿಗೆ ಅನುಕೂಲ ಕಲ್ಪಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ ಆಗ್ರಹಿಸಿದರು.

    ಪಟ್ಟಣದ ಎಪಿಎಂಸಿಯಲ್ಲಿ ಏರ್ಪಡಿಸಿದ್ದ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ 11 ಸದಸ್ಯರ ಕ್ಷೇತ್ರಗಳಲ್ಲಿ ಈ ಹಿಂದೆ ಮಾರುಕಟ್ಟೆಯಿಂದ ಸಂಗ್ರಹವಾದ ಶುಲ್ಕದಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಕಣ, ನಮ್ಮ ಹೊಲ ನಮ್ಮ ರಸ್ತೆ, ಗೋದಾಮು ನಿರ್ವಣ, ಸಂತೆ ಕಟ್ಟೆ ಸೇರಿದಂತೆ ಹಲವು ಕಾಮಗಾರಿ ಮಾಡಲಾಗುತ್ತಿತ್ತು. ಆದರೆ, ಎರಡು ವರ್ಷಗಳಿಂದ ರಾಜ್ಯ ನಿರ್ದೇಶಕರು ಇಂತಹ ಕಾಮಗಾರಿ ನಿರ್ವಿುಸಲು ಅವಕಾಶ ನೀಡದೆ, ಮಂಜೂರಾತಿ ತಡೆ ಹಿಡಿದ್ದಾರೆ. ಇದರಿಂದ ರೈತ ಸಮುದಾಯಕ್ಕೆ ತೊಂದರೆಯಾಗುತ್ತಿದೆ ಎಂದರು.

    ಜಾನುವಾರು ಮಾರುಕಟ್ಟೆ ಆರಂಭ: ತಾಲೂಕಿನ ಚಿಕ್ಕಣಜಿ ಗ್ರಾಮದ ಬಳಿ 2.5 ಕೋಟಿ ರೂ. ವೆಚ್ಚದಲ್ಲಿ ಜಾನುವಾರು ಮಾರುಕಟ್ಟೆ ನಿರ್ವಿುಸಲಾಗಿದೆ. ಆದಾಯ ಹಾಗೂ ರೈತರ ಹಿತ ಕಾಯಲು ತೂಕದ ಯಂತ್ರ (ವೇಬ್ರಿಜ್) ಆರಂಭಿಸಲಾಗಿದೆ. ಹೊಸ ಮಾರುಕಟ್ಟೆ ಶೀಘ್ರವೇ ಉದ್ಘಾಟನೆಯಾಗಲಿದೆ. ಮಾರುಕಟ್ಟೆಗೆ ಹೊಂದಿಕೊಂಡ 5 ಎಕರೆ ಜಾಗಕ್ಕೆ ಮಂಜೂರಾತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

    ಕೋಲ್ಡ್ ಸ್ಟೋರೇಜ್ ಮಂಜೂರಾತಿಗೆ ಒತ್ತಾಯ: ತಾಲೂಕಿನ ಚಿಕ್ಕಬಾಸೂರು ಎಪಿಎಂಸಿ ಉಪಮಾರುಕಟ್ಟೆಯಲ್ಲಿ ಶೀತಲೀಕರಣ ಘಟಕ ನಿರ್ವಿುಸಬೇಕು. ತೋಟಗಾರಿಕೆ ಇಲಾಖೆ ಕಾಮಗಾರಿಗೆ ತಕ್ಷಣ ಮಂಜೂರಾತಿ ನೀಡಿ, ತಾಲೂಕಿನ ರೈತ ಬಾಂಧವರಿಗೆ ಅನುಕೂಲ ಕಲ್ಪಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

    ಪ್ರತಿಕ್ರಿಯಿಸಿದ ಎಪಿಎಂಸಿ ಕಾರ್ಯದರ್ಶಿ ಎಸ್.ಬಿ. ನ್ಯಾಮಗೌಡ, ಚಿಕ್ಕಬಾಸೂರು ಉಪಮಾರುಕಟ್ಟೆಗೆ ಹೊಂದಿಕೊಂಡಂತೆ ವಾಣಿಜ್ಯ ಮಳಿಗೆ ನಿರ್ವಿುಸಿದೆ. ವರ್ತಕರಿಗೆ ಜಾಗ ನೀಡುವ ಹಾಗೂ ಸಂತೆ ಮಾರುಕಟ್ಟೆ ನಡೆಸುವ ಚಿಂತನೆ ನಡೆದಿದೆ. ಅಲ್ಲದೆ, 5 ಕೋಟಿ ರೂ. ವೆಚ್ಚದ ಕೋಲ್ಡ್ ಸ್ಟೋರೇಜ್ ನಿರ್ವಿುಸಲು ತೋಟಗಾರಿಕೆ ಇಲಾಖೆಗೆ ಎಪಿಎಂಸಿ ಜಾಗ ನೀಡಿದ್ದೇವೆ ಎಂದರು.

    ಇದೇ ಸಂದರ್ಭದಲ್ಲಿ ವಿವಿಧ ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಯಿತು.

    ಎಪಿಎಂಸಿ ಉಪಾಧ್ಯಕ್ಷ ಉಳಿವೆಪ್ಪ ಕುರವತ್ತಿ, ನಿರ್ದೇಶಕರಾದ ಸುಶೀಲಾ ರೊಡ್ಡನವರ, ವಿಜಯಕುಮಾರ ಮಾಳಗಿ, ಶಂಭನಗೌಡ್ರ ಪಾಟೀಲ, ಕರಬಸಪ್ಪ ನಾಯ್ಕರ, ಚನ್ನಬಸನಗೌಡ್ರ ಪಾಟೀಲ, ತಿರಕನಗೌಡ್ರ ಪಾಟೀಲ, ಹನುಮಂತಪ್ಪ ನಾಯ್ಕರ, ಶಿವಪ್ಪ ಕುಮ್ಮೂರು, ಪ್ರಭಣ್ಣ ದೊಡ್ಡಮನಿ, ವಿಕಾಸ ಎಸ್. ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts