More

    ಗ್ರಾಪಂ ನೌಕರರಿಂದ ಪ್ರತಿಭಟನೆ

    ರಾಮದುರ್ಗ: 14ನೇ ಹಣಕಾಸಿನ ಅನುದಾನಲ್ಲಿ ಸಿಬ್ಬಂದಿ ವೇತನಕ್ಕೆ ಶೇ.10 ರಷ್ಟು ಮೊತ್ತ ಮೀಸಲಿಡಲು ವಿಳಂಬ ನೀತಿ ಅನುಸತ್ತಿರುವ ಕ್ರಮ ವಿರೋಧಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ತಾಲೂಕು ಸಮಿತಿ ನೇತೃತ್ವದಲ್ಲಿ ಗ್ರಾಪಂ ನೌಕರರು ತಾಪಂ ಕಾರ್ಯಾಲಯದ ಎದುರು ಬುಧವಾರ ಪ್ರತಿಭಟನೆ ನಡೆಸಿ, ಇಒಗೆ ಮನವಿ ಸಲ್ಲಿಸಿದರು.

    ಗ್ರಾಪಂ ನೌಕರರಿಗೆ ವೇತನಕ್ಕೆ ಕೊರತೆಯಾಗುವ ಮೊತ್ತವನ್ನು 14 ನೇ ಹಣಕಾಸು ಯೋಜನೆಯಡಿ ಶೇ. 10 ರಷ್ಟು ಸಿಬ್ಬಂದಿ ಖಾತೆಗೆ ಜಮಾ ಮಾಡಿ ವೇತನ ನೀಡಬೇಕೆಂದು ಸರ್ಕಾರ ಆದೇಶ ನೀಡಿದೆ. ಸರ್ಕಾರದ ಆದೇಶದ ಭಾಗವಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಾಲ್ಕು ಸಲ ಆದೇಶ ಮಾಡಿದ್ದರೂ ಶೇ.10 ಮೊತ್ತ ಸಿಬ್ಬಂದಿ ವೇತನಕ್ಕೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ತಾಲೂಕಿನಲ್ಲಿ ಒಂದನೇ ಕಂತಿನ ಕ್ರಿಯಾ ಯೋಜನೆ ಮಾಡಲಾಗಿದ್ದರೂ ಮೊತ್ತ ಕಾಯ್ದಿರಿಸಿಲ್ಲ. ಎರಡನೇ ಕಂತಿನ ಅನುದಾನ ಬಂದಿದ್ದರೂ ಈವರೆಗೆ ಕ್ರಿಯಾ ಯೋಜನೆ ಮಾಡಿಲ್ಲ. ಮಾರ್ಚ್ ತಿಂಗಳೊಳಗಾಗಿ ಕ್ರಿಯಾಯೋಜನೆ ಆಗದೆ ಇದ್ದರೆ ಅನುದಾನದ ಮೊತ್ತ ವಾಪಸ್ ಹೋಗುತ್ತದೆ. ಆದ್ದರಿಂದ ಒಂದನೇ ಕಂತಿನ ಶೇ.10, ಎರಡನೇ ಕಂತಿನ ಅನುದಾನದಡಿ ಕ್ರಿಯಾ ಯೋಜನೆ ಮಾಡಿ ಶೇ. 10 ರಷ್ಟು ಮೊತ್ತವನ್ನು ಸಿಬ್ಬಂದಿ ವೇತನಕ್ಕೆ ಕಾಯ್ದಿರಿಸಬೇಕು. ಇಲ್ಲದಿದ್ದರೆ ತಾಪಂ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಮನವಿ ಮೂಲಕ ಎಚ್ಚರಿಸಿದರು.

    ಮನವಿ ಸ್ವೀಕರಿಸಿದ ತಾಲೂಕು ಪಂಚಾಯಿತಿ ಇಒ ಮುರಳಿಧರ ದೇಶಪಾಂಡೆ ಮಾತನಾಡಿ, ಶೇ.10 ಮೊತ್ತ ಮೀಸಲಿಡಲು ಈಗಾಗಲೇ ಜಿಪಂ ಸಿಇಒ ವಿಡಿಯೋ ಸಂವಾದದಲ್ಲಿ ಸೂಚಿಸಿದ್ದಾರೆ. ಆದ್ದರಿಂದ 14 ನೇ ಹಣಕಾಸಿನಲ್ಲಿ ಸಿಬ್ಬಂದಿ ವೇತನಕ್ಕೆ ಹಣ ಮೀಸಲಿಡಲು ಸೂಚಿಸಿದ್ದು, ಮಾ.31 ರ ಒಳಗಾಗಿ ವೇತನ ಬಟವಡೆಗೆ ಕ್ರಮ ಕೈಗೊಳ್ಳಲಾಗುವುದು. ಅನುಮೋದನೆ ಆಗದಿರುವ ಪ್ರಕರಣಗಳ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಲಿಖಿತ ಭರವಸೆ ನೀಡಿದ ನಂತರ, ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.ಸಿಐಟಿಯು ಜಿಲ್ಲಾ ಗೌರವಾಧ್ಯಕ್ಷ ವಿ.ಪಿ. ಕುಲಕರ್ಣಿ, ತಾಲೂಕಾಧ್ಯಕ್ಷ ನಾಗಪ್ಪ ಸಂಗೊಳ್ಳಿ, ಗ್ರಾಪಂ ನೌಕರರ ಸಂಘದ ತಾಲೂಕಾಧ್ಯಕ್ಷ ದುಂಡಯ್ಯ ದಳವಾಯಿ, ಕಾರ್ಯದರ್ಶಿ ವೀರಭದ್ರ ಕಂಪ್ಲಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts