More

    ಗ್ರಾಪಂನಲ್ಲಿ ಶೇ.5 ಅನುದಾನ ಮೀಸಲು

    ಹನುಮಸಾಗರ: ಅಂಗವಿಕಲರು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಪಿಡಿಒ ಆನಂದ ವಾಯ್ ಹೇಳಿದರು.

    ಇದನ್ನೂ ಓದಿ: ಭದ್ರಾ,ಅನುದಾನ ಬಿಡುಗಡೆಗೆ ಒತ್ತಾಯಿಸಿ ಕೇಂದ್ರ ಸಚಿವರಿಗೆ ಮನವಿ

    ಸಮೀಪದ ಹೂಲಗೇರಾ ಗ್ರಾಪಂನಲ್ಲಿ ಜಿಪಂ, ತಾಪಂ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ವಿಶೇಷ ಗ್ರಾಮ ಸಭೆಯಲ್ಲಿ ಬುಧವಾರ ಮಾತನಾಡಿದರು.

    ಸರ್ಕಾರ ವಿವಿಧ ಇಲಾಖೆಗಳಲ್ಲಿ ಅಂಗವಿಕಲರಿಗೆ ಮೀಸಲಾತಿ ಕಲ್ಪಿಸಿದೆ. ಗ್ರಾಪಂನಲ್ಲೂ ಶೇ.5 ಅನುದಾನ ಮೀಸಲಿಡಲಾಗುತ್ತದೆ. ಬಸ್ ಪಾಸ್ ನವೀಕರಣ ಫೆ.28ರ ಒಳಗಡೆ ಮಾಡಿಸಿ. ವಿವಿಧ ಸೌಲಭ್ಯ ಪಡೆಯಲು ಅನ್‌ಲೈನ್ ಅರ್ಜಿ ಸಲ್ಲಿಸಲು ತಿಳಿಸಿದರು.

    ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆಯಿರಿ

    ಗ್ರಾಪಂ ವ್ಯಾಪ್ತಿಯಲ್ಲಿ ಅಂಗವಿಕಲ ಸ್ನೇಹಿ ಸಭಾಭವನ ನಿರ್ಮಾಣಕ್ಕೆ ನಿವೇಶನ ನೀಡುವ ಬಗ್ಗೆ ಚರ್ಚಿಸಲಾಯಿತು. ಗ್ರಾಪಂ ಅಧ್ಯಕ್ಷೆ ಕವಿತಾ ರವಿ ಚವ್ಹಾಣ್, ಉಪಾಧ್ಯಕ್ಷೆ ಶಾಂತಮ್ಮ ಕುಂಟಗೌಡರ, ಸದಸ್ಯರಾದ ರೇಣುಕಾ ಗೌಡರ, ಬಸವರಾಜ ಗೋನಾಳ,

    ಕಾರ್ಯದರ್ಶಿ ಯಲ್ಲಪ್ಪ, ಕುಷ್ಟಗಿ ತಾಲೂಕು ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಚಂದಪ್ಪ ಗುಡಿಮನಿ, ಗ್ರಾಮೀಣ ಪುನರ್ ವಸತಿ ಕಾರ್ಯಕರ್ತೆ ರೇಣುಕಾ ಪಾಟೀಲ್, ಕಾಯಕ ಮಿತ್ರ ಗಂಗಮ್ಮ ವಾಲ್ಮೀಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts