More

    ಬದಲಾಗಲಿದೆ ಪದವಿ ಶಿಕ್ಷಣ ಸ್ವರೂಪ: ಹೊಸಪೇಟೆಯಲ್ಲಿ ಗುಲ್ಬರ್ಗ ವಿವಿ ವಿಸಿ ಪ್ರೊ.ದಯಾನಂದ ಅಗಸರ್ ಅಭಿಮತ

    ಹೊಸಪೇಟೆ: ಅನುಭವ ಮಂಟಪ ಪರಿಕಲ್ಪನೆಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಿದ್ಧಗೊಂಡಿದೆ. ಇದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್ ಹೇಳಿದರು.

    ಇಲ್ಲಿಯ ವಿಜಯನಗರ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ವಸಂಘಗಳ ಕಾರ್ಯಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಅಕ್ಷರ ಜ್ಞಾನ ಬಿತ್ತುವ ಜತೆಗೆ ವಿದ್ಯಾರ್ಥಿಗಳ ಬದುಕಿಗೆ ಅಗತ್ಯವಿರುವ ಕೌಶಲ, ವ್ಯಕ್ತಿತ್ವ ರೂಪಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ಪಡೆವ ಹಕ್ಕು ನೀಡಲಾಗಿದೆ. ಈಗಿನ ಪದವಿ ಶಿಕ್ಷಣ ಕಾಲಾನಂತರ ಸ್ವರೂಪವನ್ನೇ ಬದಲಿಸಿಕೊಳ್ಳಲಿವೆ. ವಿಜಯನಗರ ಕಾಲೇಜು ಲಕ್ಷಾಂತರ ವಿದ್ಯಾರ್ಥಿಗಳ ಬದಕಿಗೆ ಜ್ಞಾನದ ಜ್ಯೋತಿಯಾಗಿ ಬದುಕಿಗೆ ಬೆಳಕು ಚೆಲ್ಲಿದೆ. ಕಾಲೇಜು ಹೆಮ್ಮರವಾಗಿ ಬೆಳೆಯಲು ನಿವೃತ್ತ ಪ್ರಾಚಾರ್ಯರು, ಉಪನ್ಯಾಸಕರ ಸೇವೆ ಅಪಾರ. ನನಗೂ ಶಿಕ್ಷಣ ನೀಡಿ, ಇಂದು ಗುಲ್ಬರ್ಗ ವಿವಿ ಕುಲಪತಿಯನ್ನಾಗಿಸಿದೆ ಎಂದರು.

    ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿಸಿದ್ದಯ್ಯಸ್ವಾಮಿ ಮಾತನಾಡಿ, ಪಠ್ಯೇತರ ಚಟುವಟಿಕೆಗಳು ಸಮಾಜಮುಖಿ ಚಿಂತನೆ ಸೇರಿದಂತೆ ಅನೇಕ ಅನುಭವಗಳನ್ನು ಕಲಿಸುತ್ತವೆ ಎಂದರು. ಪ್ರಾಚಾರ್ಯ ಡಾ.ವಿ.ಎಸ್.ಪ್ರಭಯ್ಯ ಪ್ರಾಸ್ತಾವಿಕ ಮಾತನಾಡಿದರು. ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಪಾದ, ಯುವ ಮುಖಂಡ ಸಂದೀಪ ಸಿಂಗ್, ನಿವೃತ್ತ ಉಪನ್ಯಾಸಕ ಚನ್ನಬಸವನಗೌಡ ಪಾಟೀಲ್ ಉಪಸ್ಥಿತರಿದ್ದರು. ಜಯಣ್ಣ ಅಕ್ಕಸಾಲಿ ತಂಡ ಪ್ರಾರ್ಥಿಸಿತು. ಪರಂಪರೆ ಕೂಟದ ಉಪಾಧ್ಯಕ್ಷ ಡಾ.ಎಚ್.ಎಂ.ಚಂದ್ರಶೇಖರಶಾಸ್ತ್ರಿ, ಕರ್ನಾಟಕ ಸಂಘದ ಉಪಾಧ್ಯಕ್ಷ ಡಾ.ಮೃತ್ಯುಂಜಯ ರುಮಾಲೆ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts