More

    ಶ್ರೀನಗರದಲ್ಲಿ ಮೊದಲ ಗೇಟ್​ ಪರೀಕ್ಷೆ ಯಶಸ್ವಿ: ಇಂಟರ್​ನೆಟ್​ ಸಮಸ್ಯೆ ಎದುರಿಸದೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು

    ಶ್ರೀನಗರ: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಇದೇ ಮೊಟ್ಟ ಮೊದಲನೇ ಬಾರಿಗೆ ಗ್ಯಾಜುಯೇಟ್​ ಆ್ಯಪ್ಟಿಟ್ಯೂಡ್​ ಟೆಸ್ಟ್​ ಇನ್​ ಇಂಜಿನಿಯರಿಂಗ್​ (ಗೇಟ್​) ಪರೀಕ್ಷೆ ನಡೆದಿದೆ. ಫೆ.1, 2, 8 ಮತ್ತು 9ನೇ ತಾರೀಖಿನಂದು ಪರೀಕ್ಷೆ ಯಾವುದೇ ಸಮಸ್ಯೆಯಿಲ್ಲದೆ ಯಶಸ್ವಿಯಾಗಿ ನೆರವೇರಿದೆ.

    ಇದುವರೆಗೂ ಗೇಟ್​ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವಾಗಿ ಶ್ರೀನಗರವನ್ನು ಕೊಡಲಾಗುತ್ತಿರಲಿಲ್ಲ. ಇದೆ ಮೊದಲ ಬಾರಿಗೆ ಶ್ರೀನಗರದ ಆಯ್ಕೆಯನ್ನು ಬಿಡಲಾಗಿತ್ತು. ಒಟ್ಟು 5,102 ವಿದ್ಯಾರ್ಥಿಗಳು ಶ್ರೀನಗರವನ್ನು ತಮ್ಮ ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿಕೊಂಡಿದ್ದರು. 11 ಪರೀಕ್ಷಾ ಕೇಂದ್ರಗಳಲ್ಲಿ ನಾಲ್ಕು ದಿನಗಳ ಕಾಲ ಯಶಸ್ವಿಯಾಗಿ ಪರೀಕ್ಷೆಯನ್ನು ನಡೆಸಲಾಗಿದೆ.

    ಪರೀಕ್ಷೆಯ ದಿನಗಳಲ್ಲಿ ಒಟ್ಟು 40 ಅಧ್ಯಾಪಕರುಗಳನ್ನು ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರಾಗಿ ಶ್ರೀನಗರಕ್ಕೆ ಕಳುಹಿಸಲಾಗಿತ್ತು. ಪ್ರತಿ ಮೇಲ್ವಿಚಾರಕರೂ ಶ್ರೀನಗರದಲ್ಲಿ ಗೇಟ್​ ಪರೀಕ್ಷೆಗೆ ಮಾಡಿಕೊಡಲಾಗಿದ್ದ ವ್ಯವಸ್ಥೆಯ ಬಗ್ಗೆ ಧನಾತ್ಮಕ ಅಭಿಪ್ರಾಯ ತಿಳಿಸಿರುವುದಾಗಿ ಗೇಟ್​ ಪರೀಕ್ಷೆಯ ವ್ಯವಸ್ಥಾಪಕರಾದ ಐಐಟಿ ದೆಹಲಿ ಶಿಕ್ಷಣ ಸಂಸ್ಥೆ ತಿಳಿಸಿದೆ.

    ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದಾಗಿನಿಂದ ಅಲ್ಲಿ ಇಂಟರ್​ನೆಟ್​ ಕಡಿತಗೊಂಡಿದ್ದರೂ, ಇಂಟರ್​ನೆಟ್​ನಲ್ಲಿ ಬರೆಯುವಂತಹ ಗೇಟ್​ ಪರೀಕ್ಷೆಗೆ ನಿಮಿಷದ ವಿಳಂಬವೂ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದೇಶದಲ್ಲಿ ಒಟ್ಟು 8,59,048 ವಿದ್ಯಾರ್ಥಿಗಳು ಗೇಟ್​ ಪರೀಕ್ಷೆಗೆ ರಿಜಿಸ್ಟರ್​ ಮಾಡಿಕೊಂಡಿದ್ದು ಅದರಲ್ಲಿ 6,84,903 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ಜಮ್ಮುವಿನಲ್ಲಿ 5,425 ವಿದ್ಯಾರ್ಥಿಗಳು ರಿಜಿಸ್ಟರ್​ ಆಗಿದ್ದು 4270 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts