More

    ಡಿ.1 ರಿಂದ ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯ:

    ಬೆಂಗಳೂರು: ಸಾರ್ವಜನಿಕ ಸೇವಾ ವಾಹಗಳಿಗೆ ವೆಹಿಕಲ್ ಲೋಕೇಷನ್ ಟ್ರ್ಯಾಕಿಂಗ್ ಡಿವೈಸ್(ವಿಎಲ್‌ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅನ್ನು ಒಂದು ವರ್ಷದ ಅವಧಿಯೊಳಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಡಿ.1 ರಿಂದ ಇದು ಅನ್ವಯವಾಗಲಿದೆ.

    ರಾಜ್ಯದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಡಿ.೧ ರಿಂದ ಎಲ್ಲ ರೀತಿಯ ಸಾರ್ವಜನಿಕ ಸೇವಾವಾಹನಗಳಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಲಾಗಿದ್ದು, ೨೦೨೪ ರ ನ.೩೦ ರೊಳಗೆ ಅಂದರೆ ಒಂದು ವರ್ಷದೊಳಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.

    ಈ ಬಗ್ಗೆ ವಿಜಯವಾಣಿ ನ.14 ರಂದು ‘‘ಡಿಸೆಂಬರ್‌ಗೆ ಜಿಪಿಎಸ್ ಕಡ್ಡಾಯ’ ಎಂಬ ಶಿರ್ಷಿಕೆಯಡಿಯಲ್ಲಿ ವಿಶೇಷ ವರದಿಯನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.
    ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಯೆಲ್ಲೋ ಬೋರ್ಡ್‌ನ ಟ್ಯಾಕ್ಸಿಗಳು, ಕ್ಯಾಬ್‌ಗಳು, ಖಾಸಗಿ ಬಸ್‌ಗಳು, ನ್ಯಾಷನಲ್ ಪರ್ಮಿಟ್ ಹೊಂದಿರುವ ಗೂಡ್ಸ್ ವಾಹನಗಳಲ್ಲಿ ಪ್ಯಾನಿಕ್ ಬಟನ್ ಒಳಗೊಂಡ ವಿಎಲ್‌ಟಿ ಡಿವೈಸ್ ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ.

    ವಾಹನಗಳಿಗೆ ವಿಎಲ್‌ಟಿ ಮತ್ತು ಪ್ಯಾನಿಕ್ ಬಟನ್ ಡಿವೈಸ್‌ಗಳನ್ನು ಅಳವಡಿಸುವ ಸಂಬಂಧ ಗುತ್ತಿಗೆ ನೀಡಲು ಸಾರಿಗೆ ಇಲಾಖೆ ೨೦೨೩ ೆ.೯ ರಂದು ಇ-ಟೆಂಡರ್ ಮೂಲಕ ಕಂಪನಿಗಳಿಂದ ಅರ್ಜಿ ಆಹ್ವಾನಿಸಿತ್ತು. ಇದರಲ್ಲಿ ಅರ್ಹತೆ ಹೊಂದಿರುವ ೧೩ ಕಂಪನಿಗಳು ಆಯ್ಕೆಯಾಗಿದ್ದವು. ನಂತರ ಅ.೧೬ ರಂದು ಸಾರಿಗೆ ಆಯುಕ್ತರು ಮತ್ತು ರಸ್ತೆ ಸುರಕ್ಷತಾ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವರವಾಗಿ ಚರ್ಚಿಸಿ ವಿಎಲ್‌ಟಿ ಮತ್ತು ಪ್ಯಾನಿಕ್ ಬಟನ್ ಸಾಧನಗಳಿಗೆ ಸ್ಪರ್ಧಾತ್ಮಕ ದರವಾಗಿ ೭೫೯೯ ರೂ. (ಜಿಎಸ್‌ಟಿ ಹೊರತು ಪಡಿಸಿ) ನಿಗದಿಪಡಿಸಲಾಗಿತ್ತು. ಆಯ್ಕೆಯಾಗಿರುವ ಕಂಪನಿಗಳು ವಾಹನಗಳಿಗೆ ಎಐಎಸ್ ೧೪೦ ಪ್ರಮಾಣೀಕೃತ ವೆಹಿಕಲ್ ಲೋಕೇಷನ್ ಟ್ರ್ಯಾಕಿಂಗ್ ಡಿವೈಸ್ ಅಳವಡಿಸಲಿದೆ. ಅರ್ಹತೆ ಹೊಂದಿರುವ ಕಂಪನಿಗಳಿಂದ ಮಾತ್ರ ಸಾಧನಗಳನ್ನು ಅಳವಡಿಸಿಕೊಳ್ಳಬೇಕಿದೆ.

    ಸಾಧನ ಅಳವಡಿಸದಿದ್ದರೆ ಎ್.ಸಿ ರಿನಿವಲ್ ಆಗಲ್ಲ:
    ಈ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕಾಗಿರುವುದರಿಂದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಈ ಯೋಜನೆಗೆ ಒಳಪಡುವ ವಾಹನಗಳಿಗೆ ಅರ್ಹತಾಪತ್ರ(ಎ್.ಸಿ) ನವೀಕರಣಕ್ಕೆ ಹಾಜರುಪಡಿಸಿದ ಸಮಯದಲ್ಲಿ ವಿಎಲ್‌ಟಿ ಮತ್ತು ಪ್ಯಾನಿಕ್ ಬಟನ್ ಅಳವಡಿಸಿರುವ ಬಗ್ಗೆ ಖಚಿತಪಡಿಸಿಕೊಂಡು ಅರ್ಹತಾಪತ್ರ ನವೀಕರಿಸಬೇಕಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
    ರಾಜ್ಯದಲ್ಲಿನ ಸಾರ್ವಜನಿಕ ಸೇವಾ ವಾಹನಗಳಿಗೆ ಹಾಗೂ ರಾಷ್ಟ್ರೀಯ ರಹದಾರಿ ಹೊಂದಿದ ಸರಕು ಸಾಕಾಣಿಕೆ ವಾಹನಗಳಿಗೆ ಇದು ಅನ್ವಯವಾಗಲಿದೆ.

    ಬೆಲೆ ಎಷ್ಟು?
    ವಿಎಲ್‌ಟಿ ವಿತ್ ಪ್ಯಾನಿಕ್ ಬಟನ್ ಬೆಲೆ ೭೫೯೯ ರೂ.(ಜಿಎಸ್‌ಟಿ ಹೊರತು ಪಡಿಸಿ)
    ಯಾವೆಲ್ಲಾ ವಾಹನಗಳಿಗೆ ಇದು ಅನ್ವಯ?
    ಯೆಲ್ಲೋ ಬೋರ್ಡ್‌ನ ಟ್ಯಾಕ್ಸಿಗಳು, ಕ್ಯಾಬ್‌ಗಳು, ಖಾಸಗಿ ಬಸ್‌ಗಳು, ನ್ಯಾಷನಲ್ ಪರ್ಮಿಟ್ ಹೊಂದಿರುವ ಗೂಡ್ಸ್ ವಾಹನಗಳಿಗೆ ಇದು ಅನ್ವಯ.

    ಕಾರ್ಯನಿರ್ವಹಣೆ ಹೇಗೆ?
    ಜಿಎಲ್‌ಟಿ ಮಾನಿಟರಿಂಗ್ ನಕ್ಷೆಯಲ್ಲಿ ವಾಹನಗಳ ನೈಜ-ಸಮಯದ ಟ್ರ್ಯಾಕಿಂಗ್ ಮಾಡಲಾಗುತ್ತದೆ.
    ವಾಹನ ಎಲ್ಲಿದೆ? ಯಾವ ಮಾರ್ಗದಲ್ಲಿ ಪ್ರಯಾಣಿಸುತ್ತಿದೆ. ಮಾರ್ಗ ಬದಲಾವಣೆ ಸೇರಿ ಎಲ್ಲ ಮಾಹಿತಿ ಲಭ್ಯವಾಗಲಿದೆ.
    ಅತಿವೇಗ, ನಿರ್ಬಂಧಿತ ಪ್ರದೇಶ, ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ಎಚ್ಚರಿಕೆ ಕೊಡಲಿದೆ.
    ವಾಹನದಲ್ಲಿ ಪ್ರಯಾಣಿಸುವ ತುರ್ತು ಪರಿಸ್ಥಿತಿ ಎದುರಾದಲ್ಲಿ ಪ್ಯಾನಿಕ್ ಬಟನ್ ಒತ್ತಿದರೆ ಕಮಾಂಡ್ ಸೆಂಟರ್‌ಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ.
    ಕಮಾಂಡ್ ಸೆಂಟರ್ ತಕ್ಷಣ ಸ್ಪಂದಸಲಿದ್ದು, ಸ್ಥಳೀಯ ಪೊಲೀಸರಿಗೆ ತಿಳಿಸಿ, ನೆರವಿಗೆ ಧಾವಿಸುವಂತೆ ಸೂಚಿಸಬಹುದು.

    ಕೋಟ್…
    ಸರ್ಕಾರ ನಿಗದಿ ಪಡಿಸಿರುವ ದರಕ್ಕಿಂತ ಅರ್ಧ ಬೆಲೆಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ದೊರೆಯುತ್ತದೆ. ಹಳೇ ವಾಹನಗಳಲ್ಲಿಯೂ ಈ ಸಾಧನಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ. ಇದು ಹಣ ಮಾಡುವ ಉದ್ದೇಶ ಬಿಟ್ಟರೆ ಬೇರೆ ಉದ್ದೇಶವಿಲ್ಲ.
    ನಟರಾಜ್ ಶರ್ಮ, ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಅಧ್ಯಕ್ಷ

    ವಿಎಲ್‌ಟಿ ಮತ್ತು ಪ್ಯಾನಿಕ್ ಬಟನ್ ಈಗಾಗಲೇ ಅಳವಡಿಕೆ ಮಾಡಿರುವ ವಾಹನಗಳಿಗೂ ಪುನಃ ಅಳವಡಿಕೆ ಮಾಡುವಂತೆ ಸೂಚಿಸಿರುವುದು ಸರಿಯಾದ್ದುದಲ್ಲ. ಒಂದೊಮ್ಮೆ ಸಾಧನಗಳನ್ನು ಅಳವಡಿಕೆ ಮಾಡಲೇಬೇಕಾದರೆ ಸರ್ಕಾರ ಆರ್ಥಿಕವಾಗಿ ಸಹಾಯ ಮಾಡಬೇಕು.
    ಕೆ ರಾಧಾಕೃಷ್ಣ ಹೊಳ್ಳ, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts