More

    ತಾವರಗಿ ಗ್ರಾಮಸ್ಥರಿಂದ ಗ್ರಾಪಂ ಚುನಾವಣೆ ಬಹಿಷ್ಕಾರ

    ಹಿರೇಕೆರೂರ: ನಿವೇಶನದ ಹಕ್ಕುಪತ್ರಕ್ಕಾಗಿ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ ವಹಿಸುತ್ತಿದ್ದು, ಇದರಿಂದ ಬೇಸತ್ತ ತಾಲೂಕಿನ ತಾವರಗಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಚುನಾವಣೆ ಮತದಾನಕ್ಕೆ ಬಹಿಷ್ಕಾರ ಹಾಕುವ ತೀರ್ಮಾನ ಕೈಗೊಂಡ ಘಟನೆ ನಡೆದಿದೆ.

    ಗ್ರಾಮಸ್ಥರೆಲ್ಲ ಶನಿವಾರ ಒಂದೆಡೆ ಸೇರಿ ಮತದಾನ ಬಹಿಷ್ಕಾರದ ಫಲಕಗಳನ್ನು ಹಿಡಿದು ಹಕ್ಕುಪತ್ರ ವಿತರಿಸದ ಅಧಿಕಾರಿಗಳ ವಿರುದ್ಧ ಘೊಷಣೆ ಕೂಗಿದರು.

    ತಾವರಗಿ ಗ್ರಾಮದ ಹೊಂಡದ ಹಿಂದಿನ ಜನತಾ ಪ್ಲಾಟ್ ಹಾಗೂ ಕಡೆ ಕೇರಿಯ ಜನವಸತಿ ಪ್ರದೇಶಗಳಲ್ಲಿ ಸುಮಾರು 40ರಿಂದ 45 ವರ್ಷಗಳಿಂದ 65 ಕುಟುಂಬಗಳು ಗ್ರಾಪಂನಿಂದ ಹಂಚಿಕೆಯಾದ ನಿವೇಶನಗಳಲ್ಲಿ ವಾಸಿಸುತ್ತಿವೆ. ಆದರೆ, ನಿವೇಶನದ ಹಕ್ಕುಪತ್ರಗಳನ್ನು ಪಂಚಾಯಿತಿ ಅಥವಾ ತಹಸೀಲ್ದಾರ್ ಕಚೇರಿಯಿಂದ ಈವರೆಗೂ ವಿತರಿಸಿಲ್ಲ. ಪಂಚಾಯಿತಿ ರಿಜಿಸ್ಟರ್​ನಲ್ಲಿ ಆಸ್ತಿ ದಾಖಲಾಗಿದ್ದರೂ, ಇ- ಸ್ವತ್ತು ಮಾಡಲು ಬರುವುದಿಲ್ಲ ಎಂದು ಪಿಡಿಒ ಸಬೂಬು ಹೇಳುತ್ತಿದ್ದಾರೆ. ಈ ಪ್ರದೇಶದಲ್ಲಿ ಬಹುತೇಕ ಕುಟುಂಬಗಳು ಹಿಂದುಳಿದ ಜನಾಂಗಕ್ಕೆ ಸೇರಿವೆ. ಹಕ್ಕು ಪತ್ರ ಪಡೆಯಲು ಸುಮಾರು ವರ್ಷಗಳಿಂದ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಐದಾರು ತಿಂಗಳ ಹಿಂದೆ ತಹಸೀಲ್ದಾರರಿಗೆ ಗ್ರಾಮಸ್ಥರೆಲ್ಲ ಒತ್ತಡ ಹಾಕಿದಾಗ ಅವರು, ತಾವರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಕರೆಸಿ, ಅವರಿಗೆ ಸೂಚನೆ ನೀಡಿದ್ದಾರೆ. ನಂತರ ಕೃಷಿ ಸಚಿವ ಬಿ.ಸಿ. ಪಾಟೀಲ ಅವರ ಗಮನಕ್ಕೂ ತರಲಾಗಿದೆ. ಅವರು ಇತ್ತೀಚೆಗೆ ತಾಪಂ ಇಒ ಹಾಗೂ ತಾವರಗಿ ಪಿಡಿಒ ಕರೆಯಿಸಿ ನಿಯಮಾನುಸಾರ ಕ್ರಮ ಕೈಗೊಂಡು, ಅಲ್ಲಿನ ಕುಟುಂಬಳಿಗೆ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿದ್ದಾರೆ. ಆದರೂ, ತಾಪಂ ಇಒ ಹಾಗೂ ತಾವರಗಿ ಪಿಡಿಒ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ವಹಿಸಿದ್ದಾರೆ. ಹೀಗಾಗಿ ನಾವೆಲ್ಲರೂ ಈ ಬಾರಿ ಚುನಾವಣೆ ಬಹಿಷ್ಕರಿಸಿದ್ದೇವೆ. ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿ ಹಕ್ಕು ಪತ್ರ ನೀಡುವವರೆಗೂ ನಾವ್ಯಾರೂ ಮತದಾನ ಮಾಡುವುದಿಲ್ಲ ಎಂದು ತೀರ್ಮಾನ ಮಾಡಿದ್ದಾರೆ.

    ಪಿಡಿಒ ಮತ್ತು ಅಧಿಕಾರಿಗಳ ನಿರ್ಲಕ್ಷ ದೋರಣೆಗೆ ಬೇಸತ್ತು ನಾವು ಚುನಾವಣೆ ಬಹಿಷ್ಕಾರದ ನಿರ್ಧಾರ ತಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ನಮಗೆ ನ್ಯಾಯ ಸಿಗೋವರೆಗೂ ನಾವು ಮತದಾನ ಬಹಿಷ್ಕಾರ ಮಾಡುತ್ತೇವೆ.
    | ಬಸವಂತಪ್ಪ ಮಾಳಮ್ಮನವರ, ತಾವರಗಿ ಗ್ರಾಮಸ್ಥ

    ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ಸಚಿವರಿಗೆ, ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಕುರಿತು ಸರ್ಕಾರ ಅಥವಾ ಜಿಲ್ಲಾಧಿಕಾರಿ ತೀರ್ಮಾನ ತೆಗೆದುಕೊಳ್ಳಬೇಕು. ಮುಖ್ಯವಾಗಿ ಸ್ಥಳ ಮಂಜೂರಾಗಿರುವ ಕುರಿತು ಯಾವುದೇ ಠರಾವು ಆಗಿಲ್ಲ. ಕಾರಣ ಸೋಮವಾರ ತಹಸೀಲ್ದಾರ್, ತಾಪಂ ಇಒ ಜತೆ ರ್ಚಚಿಸಲಿದ್ದು, ನಂತರ ಅಂತಿಮ ಕ್ರಮ ಕೈಗೊಳ್ಳಲಿದ್ದಾರೆ.
    | ಸತೀಶಕುಮಾರ, ತಾವರಗಿ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts