More

    ವೇತನ ಹೆಚ್ಚಳ ಬಳಿಕ ಮುಷ್ಕರ ಹಿಂಪಡೆದರೂ ಸೇವೆಗೆ ಬಾರದ ಸರ್ಕಾರಿ ಅಧಿಕಾರಿಗಳು! ಸಾರ್ವಜನಿಕರ ಪರದಾಟ

    ಬೆಂಗಳೂರು: 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ನಡೆಸುತ್ತಿದ್ದ ಪ್ರತಿಭಟನೆಗೆ ಮಣಿದ ಸರ್ಕಾರ, ಮಧ್ಯಂತರ ಪರಿಹಾರವಾಗಿ ನೌಕರರಿಗೆ ಮೂಲ ವೇತನದಲ್ಲಿ ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಇಂದು ಮಧ್ಯಾಹ್ನ ಅಧಿಕೃತ ಆದೇಶ ಹೊರಡಿಸಿದೆ.

    ಬೆಳಗ್ಗೆಯಿಂದಲೇ ಸರ್ಕಾರಿ ನೌಕರರ ಪ್ರತಿಭಟನೆ ಆರಂಭವಾಗಿತ್ತು. ರಾಜ್ಯದ ಎಲ್ಲೆಡೆ ಸರ್ಕಾರಿ ಸೇವೆಗಳು ಸ್ಥಗಿತಗೊಂಡಿದ್ದವು. ಇದರಿಂದ ಜನ ಸಾಮಾನ್ಯರು ಪರದಾಡುವಂತಾಯಿತು. ಅದರಲ್ಲೂ ರೋಗಿಗಳಿಗೆ ಹೆಚ್ಚು ಪರಿಣಾಮ ಬೀರಿತು. ಕೊನೆಗೆ ನೌಕರರ ಪ್ರತಿಭಟನೆಗೆ ಮಣಿದ ಸರ್ಕಾರ ಮಧ್ಯಂತರ ಪರಿಹಾರ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಸರ್ಕಾರಿ ನೌಕರರ ಮುಷ್ಕರವನ್ನು ಹಿಂಪಡೆಯಲಾಗಿದೆ.

    ಮುಷ್ಕರ ಹಿಂಪಡೆದರು ರಾಜ್ಯದ ಹಲವೆಡೆ ಸರ್ಕಾರಿ ನೌಕರರು ಮಾತ್ರ ಕಚೇರಿಯ ಕಡೆ ಮುಖ ಮಾಡಿಲ್ಲ. ಸರ್ಕಾರಿ ಕಚೇರಿಗಳು ಈಗಲೂ ಖಾಲಿ ಖಾಲಿಯಾಗಿವೆ. ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಒಪಿಡಿಯಲ್ಲಿ ಸಿಬ್ಬಂದಿ ಇಲ್ಲದೆ ರೋಗಿಗಳ ಪರದಾಡುತ್ತಿದ್ದಾರೆ. ಸರ್ಕಾರದ ಆದೇಶಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ.

    7ನೇ ವೇತನ ಆಯೋಗದಿಂದ ಇನ್ನೂ ವರದಿ ಪಡೆಯದ ಸರ್ಕಾರ. ಆದರೆ ಸರ್ಕಾರಿ ನೌಕರರ ಒತ್ತಡ ತೀವ್ರ ಹಿನ್ನೆಲೆಯಲ್ಲಿ 17% ಮಧ್ಯಂತರ ಪರಿಹಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಬೊಮ್ಮಾಯಿ‌ ಭರವಸೆ ನೀಡಿದ್ದಾರೆ. 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಏ.1 ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇಕಡ 17 ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರವು ನಿರ್ಧರಿಸಿದೆ.

    ಸಿಎಂ ಬೊಮ್ಮಾಯಿ ಆರ್ಥಿಕ ಇಲಾಖೆ ಅಧಿಕಾರಿಗಳ ಅಭಿಪ್ರಾಯ ಪಡೆದು ಭರವಸೆ ನೀಡಿದ್ದು, 7ನೇ ವೇತನ ಆಯೋಗದ ವರದಿ ಬರುವವರೆಗೂ 17% ವೇತನ ಹೆಚ್ಚಳ ಮಾಡಲು ನಿರ್ಧರಿಸಿದ್ದಾರೆ. ಇದು ಮಧ್ಯಂತರ ಪರಿಹಾರ ರೂಪದಲ್ಲಿ ಇರಲಿದ್ದು, ಆಯೋಗದ ವರದಿ ಬಳಿಕ ಶೇಕಡವಾರು ಪ್ರಮಾಣದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಸದ್ಯ ನೌಕರರು ಹೂಡಿದ ಮುಷ್ಕರ ಕೈಬಿಡುವ ವಿಶ್ವಾಸವನ್ನು ಸಿಎಂ ಬೊಮ್ಮಾಯಿ ವ್ಯಕ್ತಪಡಿಸಿದ್ದಾರೆ.

    ಸರ್ಕಾರಿ ನೌಕರರಿಗೆ 17% ವೇತನ ಹೆಚ್ಚಳ; ಏ.1ರಿಂದ ಮಧ್ಯಂತರ ಆದೇಶ ಅನ್ವಯ

    17% ಹೆಚ್ಚಳದ ನಂತರ ಸರ್ಕಾರಿ ನೌಕರರ ವೇತನವೆಷ್ಟು? ಇಲ್ಲಿದೆ ವೇತನ ವ್ಯತ್ಯಾಸದ ಪಟ್ಟಿ…

    ಮುಖ್ಯಶಿಕ್ಷಕಿಯ ಬದಲಾಗಿ ಕ್ಲಾಸ್​ ತೆಗೆದುಕೊಂಡು ಮಗ: ಸರ್ಕಾರಿ ಶಾಲೆಯ ಅವ್ಯವಸ್ಥೆಗೆ ಗ್ರಾಮಸ್ಥರ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts