More

    ವಿದೇಶಿ ದೇಣಿಗೆ ನಿಯಮ ಬಿಗಿ: ಪರಿಷ್ಕೃತ ನಿಬಂಧನೆ ಪಾಲಿಸಬೇಕು ಎನ್​ಜಿಒಗಳು

    ನವದೆಹಲಿ: ವಿದೇಶಿ ದೇಣಿಗೆ ಸ್ವೀಕರಿಸುವ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎನ್​ಜಿಒಗಳ ನಿಯಮ ಬಿಗಿಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದೆ. ಎಫ್​ಸಿಆರ್​ಎ ಕಾಯ್ದೆ ತಿದ್ದುಪಡಿ ಮಾಡಿದ ಎರಡು ತಿಂಗಳ ಬಳಿಕ ಕೇಂದ್ರ ಸರ್ಕಾರ ನಿಯಮ ಪರಿಷ್ಕರಣೆ ಮಾಡಿ ಅಧಿಸೂಚನೆ ಪ್ರಕಟಿಸಿದೆ. ಇದರಲ್ಲಿ ವಿದೇಶಿ ದೇಣಿಗೆ ಸ್ವೀಕರಿಸುವುದಕ್ಕೆ ಅನುಸರಿಸಬೇಕಾದ ಮಾನದಂಡಗಳು ಸೇರಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದೆ.

    ಇದರಂತೆ, ಸರ್ಕಾರೇತರ ಸಂಸ್ಥೆಗಳು (ಎನ್​ಜಿಒ) ಕನಿಷ್ಠ ಮೂರು ವರ್ಷ ಚಾಲ್ತಿಯಲ್ಲಿದ್ದು, ಈ ಅವಧಿಯಲ್ಲಿ ಸ್ವಯಂ ಸೇವಾ ಚಟುವಟಿಕೆಗಳಿಗೆ 15 ಲಕ್ಷ ರೂಪಾಯಿ ವ್ಯಯಿಸಿರಬೇಕು. ಹಾಗಿದ್ದರಷ್ಟೇ ವಿದೇಶಿ ದೇಣಿಗೆ ಸ್ವೀಕರಿಸುವ ಅರ್ಹತೆ ಹೊಂದುತ್ತವೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಪ್ರಕಾರ ನೋಂದಣಿ ಬಯಸುವ ಎನ್​ಜಿಒಗಳ ಪದಾಧಿಕಾರಿಗಳು ನಿಶ್ಚಿತ ಬದ್ಧತೆಯ ಪತ್ರವನ್ನು ಸಲ್ಲಿಸಬೇಕಾದ್ದು ಅವಶ್ಯ. ಇದರಲ್ಲಿ ದಾನಿ ನೀಡುವ ವಿದೇಶಿ ದೇಣಿಗೆಯ ಮೊತ್ತವನ್ನು ನಮೂದಿಸಿ, ಅದನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದನ್ನು ಉಲ್ಲೇಖಿಸಬೇಕು.

    ಇದನ್ನು ಓದಿ: ಗಬ್ಬೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿ; ಮಾದಿಗ ಮೀಸಲಾತಿ ಹೋರಾಟ ಸಮಿತಿ ಒತ್ತಾಯ

    ಯಾವುದೇ ಎನ್​ಜಿಒ ಅಥವಾ ವ್ಯಕ್ತಿ ವಿದೇಶಿ ದೇಣಿಗೆ ಸ್ವೀಕರಿಸುವುದಾದರೆ, ಅದಕ್ಕೆ ಅರ್ಜಿ ಸಲ್ಲಿಸುವಾಗ ಅವರು ಎಫ್​ಸಿಆರ್​ಎ ಖಾತೆ ಹೊಂದಿರುವುದು ಕಡ್ಡಾಯ. ದೇಶದಲ್ಲಿ 2016-17 ಮತ್ತು 2018-19ರ ಅವಧಿಯಲ್ಲಿ ನೋಂದಾಯಿತ ಎನ್​ಜಿಒಗಳು 58,000 ಕೋಟಿ ರೂಪಾಯಿಗೂ ಅಧಿಕ ವಿದೇಶಿ ದೇಣಿಗೆ ಪಡೆದಿವೆ. ದೇಶದಲ್ಲಿ 22,400 ಎನ್​ಜಿಒಗಳು ಕೆಲಸ ಮಾಡುತ್ತಿವೆ. (ಏಜೆನ್ಸೀಸ್)

    ಟ್ಯಾಕ್ಸ್ ಟೆರರಿಸಮ್​ನಿಂದ ಟ್ಯಾಕ್ಸ್ ಟ್ರಾನ್ಸಪರೆನ್ಸಿಗೆ ಬದಲಾಗಿದೆ ಭಾರತ- ಪ್ರಧಾನಿ ನರೇಂದ್ರ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts