More

    ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ: ವಿನಯಕುಮಾರ್ ಸೊರಕೆ

    ಪಡುಬಿದ್ರಿ: ಹೆಜಮಾಡಿ ಟೋಲ್‌ನಲ್ಲಿ ಹಿಂದೆ ನೀಡಿರುವಂತೆ ಹೆಜಮಾಡಿ, ಪಡುಬಿದ್ರಿ, ಮೂಲ್ಕಿ ನಾಗರಿಕರ ವಾಹನಗಳಿಗೆ ವಿನಾಯಿತಿ ನೀಡಲೇಬೇಕು. ಈಗ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದ್ದು, ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಎಚ್ಚರಿಸಿದರು.
    ಹೆಜಮಾಡಿ ಟೋಲ್‌ನಲ್ಲಿ ಸ್ಥಳೀಯರಿಗೆ ನೀಡುತ್ತಿದ್ದ ವಿನಾಯಿತಿ ರದ್ದುಗೊಳಿಸಿರುವ ಕ್ರಮ ಖಂಡಿಸಿ ಹೆಜಮಾಡಿ ನಾಗರಿಕರ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪಡುಬಿದ್ರಿ ಮತ್ತು ಮೂಲ್ಕಿಯ ವಿವಿಧ ಸಂಘಟನೆಗಳು ಹೆಜಮಾಡಿಯ ನವಯುಗ ಟೋಲ್ ಬಳಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
    ಹೆಜಮಾಡಿ ನಾಗರಿಕರ ಕ್ರಿಯಾ ಸಮಿತಿ ಅಧ್ಯಕ್ಷ ಶೇಖರ್ ಹೆಜ್ಮಾಡಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು, ಕೆಪಿಸಿಸಿ ಕೋ ಆರ್ಡಿನೇಟರ್ ನವೀನ್‌ಚಂದ್ರ ಜೆ.ಶೆಟ್ಟಿ, ಹೆಜಮಾಡಿ ಗ್ರಾಪಂ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ, ಉಪಾಧ್ಯಕ್ಷೆ ಪವಿತ್ರ ಗಿರೀಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ, ಸುಧಾಕರ ಶೆಟ್ಟಿ, ಇಕ್ಬಾಲ್ ಅಹ್ಮದ್ ಕಾರ್ನಾಡು, ಕೋಟೆ ಶೇಖಬ್ಬ ಮಾತನಾಡಿದರು.
    ಹೆಜಮಾಡಿ ನಾಗರಿಕರ ಕ್ರಿಯಾ ಸಮಿತಿ, ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ ಮತ್ತು ಪಡುಬಿದ್ರಿ ಗ್ರಾಪಂ ವತಿಯಿಂದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರೆಸಿಡೆಂಟ್ ಇಂಜಿನಿಯರ್ ಮಲ್ಲಿಕಾರ್ಜುನ ಮತ್ತು ನವಯುಗ ಟೋಲ್ ಕಂಪನಿ ವ್ಯವಸ್ಥಾಪಕ ಶಿವಪ್ರಸಾದ್ ರೈ ಅವರಿಗೆ ಸಲ್ಲಿಸಲಾಯಿತು.
    ಮೂಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ವಿವಿಧ ಸಂಘಟನೆಗಳ ಪ್ರಮುಖರಾದ ರಮೀಝ್ ಹುಸೈನ್, ಪುತ್ತುಬಾವ, ಯೋಗೀಶ್ ಕೋಟ್ಯಾನ್, ವಿಶಾಲಾಕ್ಷಿ ಪುತ್ರನ್, ರವಿ ಶೆಟ್ಟಿ ಪಡುಬಿದ್ರಿ, ಧನಂಜಯ ಮಟ್ಟು, ಮಧು ಆಚಾರ್ಯ, ನವೀನ್ ಎನ್.ಶೆಟ್ಟಿ, ಲೋಕೇಶ್ ಅಮೀನ್, ಲಿಡಿಯಾ ಪುರ್ಟಾಡೋ, ರಾಲ್ಫಿ ಡಿಕೋಸ್ತಾ, ಸುಧೀರ್ ಕರ್ಕೇರ, ಗಣೇಶ್ ಕೋಟ್ಯಾನ್, ಜೀವನ್ ಕೆ.ಶೆಟ್ಟಿ, ಶಶಿ ಅಮೀನ್, ದೇವಣ್ಣ ನಾಯಕ್, ಜಾನ್ ಕ್ವಾಡ್ರಸ್, ಅಬ್ದುಲ್ ಅಜೀಜ್, ಕಿಶೋರ್ ಸಾಲ್ಯಾನ್ ಮೂಲ್ಕಿ, ಸುಖೇಶ್ ಪಡುಬಿದ್ರಿ, ಕೇಶವ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
    ಬಸ್ ಸಂಚಾರ ಸ್ಥಗಿತ: ಹೆಜಮಾಡಿ, ಕೋಡಿ ಒಳರಸ್ತೆಯಲ್ಲಿ 60ಕ್ಕೂ ಅಧಿಕ ಸರ್ವೀಸ್ ಬಸ್‌ಗಳು ಸಂಚರಿಸುತ್ತಿದ್ದು, ಟೋಲ್ ವಿನಾಯಿತಿ ರದ್ದುಗೊಳಿಸಿರುವುದನ್ನು ಖಂಡಿಸಿ ಸರ್ವೀಸ್ ಬಸ್ ಚಾಲಕರು ಫೆ.18ರಿಂದ ಸಂಚಾರ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ವಿನಾಯಿತಿ ಮುಂದುವರಿಸುವಂತೆ ಚಾಲಕರು ಹೆಜಮಾಡಿ ನವಯುಗ ಟೋಲ್ ಕಂಪನಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದಾರೆ.

    ದಿಶಾ ಸಭೆಯಲ್ಲಿ ನಿರ್ಣಯ: ಫೆ.22ರಂದು ರಾಷ್ಟ್ರೀಯ ಹೆದ್ದಾರಿ ಟೋಲ್ ಬಗ್ಗೆ ದಿಶಾ ಸಭೆ ನಡೆಸಲಿದ್ದು, ಆ ನಂತರ ನಿರ್ಣಯ ಕೈಗೊಳ್ಳಲಾಗುವುದು. ಸ್ಥಳೀಯರಿಗೆ ಟೋಲ್ ತೊಂದರೆಯಾಗದಂತೆ ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts