More

    ಕೇಂದ್ರ ಬಜೆಟ್​ 2020: ಕಳೆದ ಬಜೆಟ್​ನಲ್ಲಿ ಮುದ್ರಣ ಕಾಗದಕ್ಕೆ ವಿಧಿಸಿದ್ದ ಆಮದು ಸುಂಕ ಕಡಿತ; ಶೇ.10ರಿಂದ ಶೇ.5ಕ್ಕೆ ಇಳಿಕೆ

    ನವದೆಹಲಿ: ಆಮದು ಮಾಡಿಕೊಳ್ಳುವ ಮುದ್ರಣ ಕಾಗದದ ಮೇಲಿನ ಸುಂಕವನ್ನು ಶೇ.5ರಷ್ಟು ಕಡಿತಗೊಳಿಸಲು ತೀರ್ಮಾನಿಸಿದ್ದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ವೇಳೆ ಹೇಳಿದ್ದಾರೆ.

    2019ರ ಕೇಂದ್ರ ಬಜೆಟ್​ನಲ್ಲಿ ಕೇಂದ್ರ ಸರ್ಕಾರ ಸುದ್ದಿ ಮುದ್ರಣ ಕಾಗದ ಮತ್ತು ಹಗುರವಾದ ಲೇಪಿತ ಕಾಗದಗಳಿಗೆ ಶೇ.10 ಆಮದು ಸುಂಕ ವಿಧಿಸಿತ್ತು. ಈಗ ಅದರಲ್ಲಿ 5 ಪರ್ಸಂಟ್ ಕಡಿತಗೊಳಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

    ಮುದ್ರಣ ಕಾಗದಗಳ ಮೇಲಿನ ಶೇ.10ರಷ್ಟು ಸುಂಕದಿಂದ ಮುದ್ರಣ ಮಾಧ್ಯಮಕ್ಕೆ ಹೊರೆಯಾಗುತ್ತಿದೆ ಎಂದು ನನಗೆ ಹಲವು ಮನವಿಗಳು, ಉಲ್ಲೇಖಗಳು ಬಂದಿವೆ. ಹಾಗಾಗಿ ಮುದ್ರಣ ಕಾಗದ ಮತ್ತು ಹಗುರವಾದ ಲೇಪಿತ ಕಾಗದಗಳಿಗೆ ವಿಧಿಸಲಾಗಿರುವ 10 ಪರ್ಸಂಟ್ ಆಮದು​ ಸುಂಕವನ್ನು ಶೇ.5ಕ್ಕೆ ಕಡಿಮೆಗೊಳಿಸಲಾಗುವುದು ಎಂದಿದ್ದಾರೆ.

    ಭಾರತದಲ್ಲಿ ಮುದ್ರಣ ಕಾಗದದ ಪ್ರಮಾಣಿತ ಬಳಕೆ 2.5 ಮಿಲಿಯನ್​ ಟನ್​ಗಳಾಗಿವೆ. ಆದರೆ ದೇಶೀಯ ಮಿಲ್​ಗಳು ಕೇವಲ ಒಂದು ಮಿಲಿಯನ್​ ಮುದ್ರಣ ಕಾಗದಗಳನ್ನಷ್ಟೇ ಉತ್ಪಾದಿಸುವ ಸಾಮರ್ಥ್ಯಹೊಂದಿದ್ದು, ಆಮದು ಅನಿವಾರ್ಯವಾಗಿದೆ.(ಪಿಟಿಐ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts