More

    ದೇಶದ 69,000 ಪೆಟ್ರೋಲ್​ ಪಂಪ್​ಗಳಲ್ಲಿ ಬರಲಿದೆ EV ಚಾರ್ಜಿಂಗ್ ಕಿಯೋಸ್ಕ್​ಗಳು

    ನವದೆಹಲಿ: ಇಲೆಕ್ಟ್ರಿಕ್ ವಾಹನಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿರುವಂತೆ ದೇಶದ 69,000 ದಷ್ಟು ಪೆಟ್ರೋಲ್ ಪಂಪ್​ಗಳಲ್ಲಿ EV ಚಾರ್ಜಿಂಗ್ ಕಿಯೋಸ್ಕ್​ಗಳನ್ನು ತೆರೆಯುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲು ಕೇಂದ್ರ ಸರ್ಕಾರ ಒಲವು ತೋರಿಸಿದೆ.

    ಎಲ್ಲ ಪೆಟ್ರೋಲ್ ಪಂಪ್​ಗಳಲ್ಲಿ ಇದನ್ನು ಕಡ್ಡಾಯವಾಗಿ ಸ್ಥಾಪಿಸಲು ನಿರ್ದೇಶನ ನೀಡುವುದಕ್ಕೂ ಸರ್ಕಾರ ಚಿಂತನೆ ನಡೆಸಿದೆ. ವಿಶೇಷವಾಗಿ ಕಂಪನಿ ಓನ್ಡ್ ಅಥವಾ ಕಂಪನಿ ಆಪರೇಟೆಡ್ ಮಾದರಿಯ ಕಿಯೋಸ್ಕ್​ಗಳನ್ನು ಸ್ಥಾಪಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ನಿರ್ದೇಶನ ನೀಡುವ ನಿರೀಕ್ಷೆ ಇದೆ.

    ಇದನ್ನೂ ಓದಿ: ನೇತ್ರದಾನ, ದೇಹ ದಾನದ ಮೂಲಕ ತಾಯಿಯ ಇಚ್ಛೆ ಪೂರೈಸಿದ ಕೇಂದ್ರ ಆರೋಗ್ಯ ಸಚಿವ

    EV ಚಾರ್ಜಿಂಗ್ ಮೂಲಸೌಕರ್ಯ ಪರಿಶೀಲನೆ ಸಭೆಯಲ್ಲಿ ಇಂಧನ ಸಚಿವ ಆರ್​.ಕೆ.ಸಿಂಗ್ ಅವರು ಈ ಬಗ್ಗೆ ತೈಲ ಕಂಪನಿಗಳಿಗೆ ಸುಳಿವು ನೀಡಿದ್ದಾರೆ. ತೈಲ ಸಚಿವಾಲಯ ಪ್ರಕಟಿಸಿರುವ ಹೊಸ ಮಾರ್ಗಸೂಚಿ ಪ್ರಕಾರ, ಎಲ್ಲ ಪೆಟ್ರೋಲ್ ಬಂಕ್​ಗಳಲ್ಲಿ ಒಂದು ಪರ್ಯಾಯ ಇಂಧನ ಭರ್ತಿಗೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ. ಇದರಂತೆ, ಬಹುತೇಕ ಪೆಟ್ರೋಲ್​ ಬಂಕ್​ಗಳು EV ಚಾರ್ಜಿಂಗ್ ಸೌಲಭ್ಯ ಒದಗಿಸಲು ಮುಂದಾಗಿವೆ.

    ಇದನ್ನೂ ಓದಿ: ಚರಂಡಿ ಮುಚ್ಚಳಕ್ಕೆ ಗಂಟುಬಿದ್ದ ಕಳ್ಳರು!

    ಆರಂಭಿಕ ಹಂತದಲ್ಲಿ ದೆಹಲಿ ನ್ಯಾಷನಲ್ ಕ್ಯಾಪಿಟಲ್ ರೀಜಿಯನ್​, ಕೋಲ್ಕತ, ಚೆನ್ನೈ, ಹೈದರಾಬಾದ್​, ಬೆಂಗಳೂರು, ವಡೋದರಾ, ಭೋಪಾಲಗಳಲ್ಲಿ EV ಚಾರ್ಜಿಂಗ್ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಮನೆಯೊಂದರಲ್ಲಿ ಸ್ಫೋಟಿಸಿತು ಕಚ್ಚಾ ಬಾಂಬ್​ – ಸ್ಥಳದಲ್ಲೇ ಮೃತಪಟ್ರು ಇಬ್ರು, ಇನ್ನಿಬ್ಬರಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts