More

    ಸರ್ಕಾರಿ ಯೋಜನೆ ಪ್ರಯೋಜನ ಪಡೆಯಿರಿ

    ಸವದತ್ತಿ: ಕರೊನಾ ಲಾಕ್‌ಡೌನ್ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ವರ್ಗದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳ ಮೂಲಕ ಪರಿಹಾರ ಘೋಷಿಸಿವೆ. ಅರ್ಹ ಫಲಾನುಭವಿಗಳು ಅವುಗಳ ಲಾಭ ಪಡೆದುಕೊಳ್ಳಬೇಕು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

    ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸವದತ್ತಿ ರೇಣುಕಾ ಯಲ್ಲಮ್ಮ ಟ್ರಸ್ಟ್ ಕಮಿಟಿಯಿಂದ ಕೋವಿಡ್-19 ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ವಿವಿಧ ದೇವಸ್ಥಾನಗಳ ಅರ್ಚಕರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿ ಅವರು ಮಾತನಾಡಿದರು. ಯಲ್ಲಮ್ಮ ದೇವಿಯ ಆಶೀರ್ವಾದದಿಂದ ತಾಲೂಕಿನಲ್ಲಿ ಈವರೆಗೂ ಕೋವಿಡ್-19ರ ಪ್ರಕರಣ ದಾಖಲಾಗಿಲ್ಲ. ಕೋವಿಡ್‌ನೊಂದಿಗೆ ಜೀವಿಸುವುದು ಅನಿವಾರ್ಯವಾಗಿರುವ ಕಾರಣ ಸಾರ್ವಜನಿಕರು ದೈಹಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ ಎಂದರು.

    ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ, ಲಾಕ್‌ಡೌನ್‌ನಿಂದ ದೇವಾಲಯಗಳಿಗೆ ಭಕ್ತಾದಿಗಳ, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದರಿಂದ ಅರ್ಚಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅರ್ಚಕರ ಅನುಕೂಲಕ್ಕಾಗಿ ಸರ್ಕಾರದ ಆದೇಶದಂತೆ ದೇವಸ್ಥಾನದ ವತಿಯಿಂದ ಆಹಾರ ಧಾನ್ಯ ಒದಗಿಸಲಾಗುತ್ತಿದೆ ಎಂದರು. ಶಿವಚಿದಂಬರ ಮಠದ ಹಿರಿಯ ಅರ್ಚಕ ದಂಡಪಾಣಿ ದೀಕ್ಷಿತರು, ಸವದತ್ತಿ ತಹಸೀಲ್ದಾರ್ ಪ್ರಶಾಂತ ಪಾಟೀಲ, ಬಸವರಾಜ ಜೀರಗಾಳ, ಅಲ್ಲಮಪ್ರಭು ಪ್ರಭುನವರ, ಮಲ್ಲಿಕಾರ್ಜುನ ಕಂಬಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts