More

    ಗೃಹಲಕ್ಷ್ಮೀ ಅರ್ಜಿ ನೋಂದಣಿಗೆ ಸರ್ಕಾರ ವಿಧಿಸಿಲ್ಲ ಗಡುವು

    ಶಿವಮೊಗ್ಗ: ಗೃಹಲಕ್ಷ್ಮೀ ಅರ್ಜಿ ನೋಂದಣಿ ವೇಳೆ ಕೆಲವು ನ್ಯೂನ್ಯತೆಗಳು ಕಂಡುಬಂದಿದ್ದು, ತಕ್ಷಣವೇ ಸರಿಪಡಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ನೋಂದಣಿಗೆ ಯಾವುದೇ ಗಡುವು ಇಲ್ಲ. ಹಾಗಾಗಿ ಅರ್ಜಿದಾರರು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ನಗರಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್ ಸ್ಪಷ್ಟಪಡಿಸಿದರು.

    ಶಿವಮೊಗ್ಗದಲ್ಲಿ ವಿನೋಬನಗರ ಸೂಡಾ ಕಚೇರಿ ಕಾಂಪೌಂಡ್, ಖಾಸಗಿ ಬಸ್ ನಿಲ್ದಾಣ ಮತ್ತು ಗುತ್ತಪ್ಪ ಕಾಲನಿಯ ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ಅರ್ಜಿಗಳ ನೋಂದಣಿ ಮಾಡಲಾಗುತ್ತಿದೆ. ಸರ್ವರ್ ಸಮಸ್ಯೆ, ಹಣ ಪಡೆಯುತ್ತಿರುವುದು ಸೇರಿ ಹಲವು ಸಮಸ್ಯೆಗಳು ಗಮನಕ್ಕೆ ಬಂದಿವೆ. ಡಿಸಿ ಡಾ. ಆರ್.ಸೆಲ್ವಮಣಿ ಅವರ ಗಮನಕ್ಕೆ ತಂದು ಕೇಂದ್ರಗಳ ಬಳಿ ಶಾಮಿಯಾನ, ಖುರ್ಚಿ ವ್ಯವಸ್ಥೆ ಮಾಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ನೋಂದಣಿ ಅವಧಿ ಮುಕ್ತಾಯವಾಗಲಿದೆ ಎಂಬ ಭಯದಿಂದ ಹಲವರು ಆತುರದಿಂದ ನೋಂದಣಿಗೆ ಮುಂದಾಗುತ್ತಿದ್ದಾರೆ.ಬೆಳಗಿನಜಾವ 4 ಗಂಟೆಯಿಂದಲೇ ಸರದಿಯಲ್ಲಿ ಬಂದು ನಿಲ್ಲುತ್ತಿದ್ದಾರೆ. ನೋಂದಣಿಗೆ ಸರ್ಕಾರ ಯಾವುದೇ ಡೆಡ್‌ಲೈನ್ ಕೊಟ್ಟಿಲ್ಲ. ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
    ಶಿವಮೊಗ್ಗದಲ್ಲಿ ಇನ್ನೂ ಏಳೆಂಟು ಕಡೆ ನೋಂದಣಿಗೆ ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ನಗರದ ಕೆಲವೆಡೆ ಅನಧಿಕೃತವಾಗಿ ಕೆಲವು ಕೇಂದ್ರಗಳಲ್ಲಿ ಬೇರೆಯವರ ಲಾಗಿನ್ ಪಡೆದು ಪ್ರತಿ ಅರ್ಜಿ ನೋಂದಣಿಗೆ 50 ರೂ. ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಿಡಿಪಿಒಗೆ ದೂರು ನೀಡಿ ವಿನೋಬನಗರದ ಸೇವಾ ಸಿಂಧು ಕೇಂದ್ರವನ್ನು ಬಂದ್ ಮಾಡಿಸಲಾಗಿದೆ ಎಂದರು.
    ಶಿವಮೊಗ್ಗ ನಗರದಲ್ಲಿ 22 ಸಾವಿರ ಮತ್ತು ಗ್ರಾಮಾಂತರದಲ್ಲಿ 20 ಸಾವಿರ ಮಂದಿ ಈಗಾಗಲೇ ನೋಂದಣಿ ಮಾಡಿಸಿದ್ದಾರೆ. ಇನ್ನೂ ಒಂದು ಲಕ್ಷಕ್ಕೂ ಅಧಿಕ ಜನರು ನೋಂದಣಿ ಮಾಡಿಸಬೇಕಿದೆ. ಅರ್ಜಿ ನೋಂದಣಿ ವೇಗ ಹೆಚ್ಚಿಸಲು ಪ್ರತಿ ಬೂತ್‌ಗೆ ಇಬ್ಬರು ಸೇವಕರನ್ನು ಸರ್ಕಾರ ಶೀಘ್ರವೇ ನಿಯೋಜಿಸಲಿದೆ ಎಂದು ಹೇಳಿದರು.
    ಮುಖಂಡರಾದ ವಿಶ್ವನಾಥ್ ಕಾಶಿ, ರೇಖಾ ರಂಗನಾಥ್, ಶಾಮೀರ್ ಖಾನ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts