More

    ರೇವಣಸಿದ್ಧೇಶ್ವರ ಯೋಜನೆ ಅನುಷ್ಠಾನ – ಸರ್ಕಾರದ ಸಾಧನೆ

    ಇಂಡಿ: ಇಂಡಿ, ನಾಗಠಾಣ ಮತ್ತು ಬಬಲೇಶ್ವರ ಮತಕ್ಷೇತ್ರದ 49 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಗೊಳಪಡಿಸುವ ರೇವಣಸಿದ್ಧೇಶ್ವರ ಯೋಜನೆಗೆ ಅನುಷ್ಠಾನ ನೀಡಿರುವುದು ಸರ್ಕಾರದ ಸಾಧನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

    ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಬಿಜೆಪಿ ನೂತನ ಕಾರ್ಯಾಲಯವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

    ರೇವಣಸಿದ್ಧೇಶ್ವರ ಏತ ನೀರಾವರಿಗೆ ಸಂಪುಟ ಅನುಮೋದನೆ ನೀಡಲು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರ ಜತೆ ಮುಖ್ಯಮಂತ್ರಿಗಳಿಗೆ ಸಾಕಷ್ಟು ಒತ್ತಡ ತಂದು ಅನುಷ್ಠಾನ ನೀಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

    ಅಲ್ಲದೆ, ಚಿಕ್ಕಮಣೂರದಿಂದ ವಿಜಯಪುರವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 250 ಕೋಟಿ ರೂ. ಹಾಗೂ ಶಿರಾಡೋಣದಿಂದ ಝಳಕಿವರೆಗಿನ ರಸ್ತೆಗೆ 50 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದರು.

    ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮತನಾಡಿದರು. ಹಿರಿಯ ಕಾರ್ಯಕರ್ತರಾದ ಮಲ್ಲಯ್ಯ ಪತ್ರಿಮಠ, ಅರವಿಂದ ಗಾಳಿಮಠ, ಅರ್ಜುನ ಬಜಂತ್ರಿ, ಶರಣು ಕೊಪ್ಪ, ಚಂದು ಮಲಗೊಂಡ ಅವರನ್ನು ಸನ್ಮಾನಿಸಲಾಯಿತು.

    ಇಂಡಿ ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕಿವಡೆ, ರವಿ ವಗ್ಗೆ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಮಾತನಾಡಿದರು.

    ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಯಾಸಾಗರ ಪಾಟೀಲ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ರಾಜಕುಮಾರ ಸಗಾಯಿ, ರಾಜ್ಯ ಒಬಿಸಿ ಮೋರ್ಚಾದ ಶೀಲವಂತ ಉಮರಾಣಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ದೇವೇಂದ್ರ ಕುಂಬಾರ, ಶಂಕರಗೌಡ ಪಾಟೀಲ, ಸಿದ್ಧಲಿಂಗ ಹಂಜಗಿ, ಅನೀಲ ಜಮಾದಾರ, ರವಿಕಾಂತ ಬಗಲಿ, ಹಣಮಂತಗೌಡ ಪಾಟೀಲ, ಸಿದ್ರಾಮಪ್ಪ ದೇಸಾಯಿ, ಭೀಮಸಿಂಗ್ ರಾಠೋಡ, ಬಸವರಾಜ ಹೂಗಾರ, ಯಲ್ಲಪ್ಪ ಹದರಿ, ರಮೇಶ ಧರೆಣ್ಣನವರ, ಬಿ.ಎಸ್. ಪಾಟೀಲ ಹಿರೇಬೇವನೂರ, ವೇಕಂಟೇಶ ಕುಲಕರ್ಣಿ, ಬಸವರಾಜ ಪತ್ರಿಮಠ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts