More

    ಗೌರಮ್ಮ, ಗಣಪತಿ ಮೂರ್ತಿ ವಿಸರ್ಜನೆ

    ಅರಸೀಕೆರೆ: ತಾಲೂಕಿನ ಚಿಕ್ಕೂರು ಗ್ರಾಮದಲ್ಲಿ ಗೌರಮ್ಮ ಹಾಗೂ ಗಣಪತಿ ವಿಸರ್ಜನಾ ಮಹೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ನೆರವೇರಿತು.ದೇವಿಯನ್ನು ಬಗೆ ಬಗೆಯ ಹೂಗಳಿಂದ ಅಲಂಕರಿಸಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಮುತ್ತೈದೆಯರಿಂದ ಮಡಿಲು ತುಂಬಿಸಿಕೊಳ್ಳುವ ಕಾರ್ಯಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.

    ಗೌರಮ್ಮನವರ ಉತ್ಸವ ಕಣ್ತುಂಬಿಕೊಳ್ಳಲು ಮಹಿಳೆಯರು ಗ್ರಾಮದ ಬೀದಿ ಬೀದಿಗಳಲ್ಲಿ ಚಿತ್ತಾರದ ರಂಗೋಲಿ ಬಿಡಿಸಿದ್ದರು. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಭಕ್ತ ಸಮುದಾಯ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ನೆರೆದಿದ್ದ ಭಕ್ತ ಸಮೂಹ ಜಯಘೋಷ ಕೂಗುತ್ತಾ ಕಾಣಿಕೆ ಸಮರ್ಪಿಸಿ ಹರಕೆ ತೀರಿಸಿದರು. ಚಲುವರಾಯ ಹಾಗೂ ಧೂತರಾಯ ಕುಣಿತ ಭಕ್ತರನ್ನು ರಂಜಿಸಿತು. ಹಿರಿಯೂರು, ಬಿಸಲೇಹಳ್ಳಿ, ಬೆಟ್ಟದಪುರ, ಭೈರಾಂಬುಧಿ, ಲಾಯಲಾಪುರ, ಹೊಸ ಕಲ್ಲನಾಯ್ಕನಹಳ್ಳಿ, ಕಾಟೀಕೆರೆ, ಸಂಕೋಡನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

    ಗ್ರಾಮದ ಹೊರವಲಯದಲ್ಲಿರುವ ಕಲ್ಯಾಣಿಯಲ್ಲಿ ಗೌರಮ್ಮ ಹಾಗೂ ಗಣಪತಿಯನ್ನು ನೂರಾರು ಭಕ್ತರ ಸಮ್ಮುಖದಲ್ಲಿ ವಿಸರ್ಜನೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts