More

    ಕರೊನಾ ಲಸಿಕೆ ಎಲ್ಲಿ ಸಿಗುತ್ತೆ ಅಂತ ಗೂಗಲ್ ತೋರಿಸುತ್ತೆ..!

    ಸ್ಯಾನ್​ ಫ್ರಾನ್ಸಿಸ್ಕೊ: ಕೆಲವು ದಿನಗಳಿಂದ ಬಹಳೆಡೆ ಕರೊನಾ ಲಸಿಕೆಯದ್ದೇ ಮಾತು. ನಾನಾ ಕಂಪನಿಗಳು ಸಂಶೋಧಿಸಿ ಪ್ರಯೋಗ ನಡೆಸುತ್ತಿರುವ ಲಸಿಕೆಗಳ ಬಗ್ಗೆಯೇ ಹಲವೆಡೆ ಸುದ್ದಿ. ಈಗಾಗಲೇ ಕೆಲ ಕಂಪನಿಗಳು ಪ್ರಾಯೋಗಿಕವಾಗಿ ಲಸಿಕೆ ನೀಡಲಾರಂಭಿಸಿದ್ದು, ಅದರ ಪರಿಣಾಮ-ಫಲಿತಾಂಶಗಳ ಬಗ್ಗೆ ಕುತೂಹಲ ಮೂಡಿದೆ. ಈ ನಡುವೆ ಲಸಿಕೆ ಎಲ್ಲೆಲ್ಲಿ ಸಿಗಲಿದೆ ಎಂಬ ಕುರಿತೂ ಕೌತುಕ ಉಂಟಾಗಿದೆ.

    ಲಸಿಕೆ ಎಲ್ಲಿ ಸಿಗುತ್ತೆ ಎಂಬುದಕ್ಕೆ ಉತ್ತರ ಅಂಗೈಯಲ್ಲೇ ಸಿಗಲಿದೆ. ಅರ್ಥಾತ್ ಮೊಬೈಲ್​ ಫೋನ್​ ಮೂಲಕ ಗೂಗಲ್​ನಲ್ಲಿ ಸರ್ಚ್ ಮಾಡಿದರೆ ಅದು ಲಸಿಕೆ ಸಿಗುವ ಸ್ಥಳವನ್ನು ತೋರಿಸುವ ಜತೆಗೆ ಅಲ್ಲಿಗೆ ತೆರಳುವ ದಾರಿಯನ್ನೂ ತೋರಿಸಲಿದೆ. ಇಂಥದ್ದೊಂದು ವ್ಯವಸ್ಥೆಯನ್ನು ಗೂಗಲ್ ಸಂಸ್ಥೆ ಅಳವಡಿಸಿದೆ.

    ಗೂಗಲ್ ಸಂಸ್ಥೆ ಲಂಡನ್​ನಲ್ಲಿ ಈಗಾಗಲೇ ಈ ವ್ಯವಸ್ಥೆಯನ್ನು ಕಲ್ಪಿಸಿದೆ. ಇತರ ಆರೋಗ್ಯ ಪ್ರಾಧಿಕಾರಗಳು ಲಸಿಕೆಗಳನ್ನು ಅನುಮೋದಿಸುತ್ತಿದ್ದಂತೆ ಬೇರೆ ದೇಶದಗಳಲ್ಲೂ ಈ ವ್ಯಾಕ್ಸಿನ್ ಸರ್ಚ್ ಆಪ್ಷನ್​ಗಳನ್ನು ಕಲ್ಪಿಸಲಾಗುವುದು ಎಂದು ಗೂಗಲ್ ಸಂಸ್ಥೆ ಹೇಳಿದೆ.

    ಮಾರ್ಚ್​ನಲ್ಲಿ ಕೋವಿಡ್​-19 ಕುರಿತ ಮಾಹಿತಿಗಾಗಿ ಯೂಟ್ಯೂಬ್​ನಲ್ಲಿ ಇನ್​ಫಾರ್ಮೇಷನ್​ ಪ್ಯಾನೆಲ್​ಗಳನ್ನು ಒದಗಿಸಲಾಗಿತ್ತು. ಅದು 400 ಶತಲಕ್ಷ ವೀಕ್ಷಣೆ ಕಂಡಿತ್ತು. ಅದನ್ನೇ ಅಪ್​ಡೇಟ್​ ಮಾಡಿ ಇದೀಗ ಕರೊನಾ ಲಸಿಕೆ ಲಭ್ಯತೆಯ ಮಾಹಿತಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಗೂಗಲ್ ಕಂಪನಿ ತಿಳಿಸಿದೆ. (ಏಜೆನ್ಸೀಸ್​)

    ರವಿ ಬಸ್ರೂರ್@ವರ್ಕ್ ಫ್ರಮ್​ ವಿಲೇಜ್​: ಊರಲ್ಲಿ ಸದ್ದಿಲ್ಲದೆ ಏನ್​ ಮಾಡಿದ್ದಾರೆ ನೋಡಿ!!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts