More

    ಇದೊಂದು ಅಚ್ಚರಿಯ ಸಂಗತಿ; ಗೂಗಲ್​​ನಲ್ಲಿ ಇಲ್ಲಿಯವರೆಗೆ ದಾಖಲೆ ಪ್ರಮಾಣದಲ್ಲಿ ಸರ್ಚ್​ ಆದ ಶಬ್ದ ಯಾವುದು ಗೊತ್ತಾ? ಕರೊನಾ ಅಂದುಕೊಂಡಿದ್ದರೆ ಅದು ತಪ್ಪು…

    ಜಗತ್ತಿಗೆ ಎದುರಾಗಿರುವ ಅಗೋಚರ ಶತ್ರು ಕರೊನಾ ವೈರಸ್​ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತವರು ವೈದ್ಯರು, ನರ್ಸ್​ಗಳು ಸೇರಿ ಮತ್ತಿತರ ಆರೋಗ್ಯ ಸಿಬ್ಬಂದಿ.

    ತಮ್ಮನ್ನು ತಾವು ಕರೊನಾ ಸೋಂಕಿನ ಅಪಾಯಕ್ಕೆ ಒಡ್ಡಿಕೊಂಡು ವೈರಸ್​ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪರರ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿದ್ದಾರೆ.

    ಜಗತ್ತಿನಾದ್ಯಂತ ಕರೊನಾ ವೈರಸ್​ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ದೃಷ್ಟಿಯಿಂದ, ಅವರಿಗೊಂದು ಥ್ಯಾಂಕ್ಸ್​ ಹೇಳುವ ಸಲುವಾಗಿ ಚಪ್ಪಾಳೆ ಅಭಿಯಾನ ಪ್ರಾರಂಭವಾಗಿದೆ.

    ಭಾರತ ಸೇರಿ ಹಲವು ರಾಷ್ಟ್ರಗಳ ಜನರು ತಮ್ಮ ಮನೆಯಲ್ಲೇ ನಿಂತು ಚಪ್ಪಾಳೆ ಹೊಡೆಯುವ ಮೂಲಕ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರಂತಹ ಕರೊನಾ ವಾರಿಯರ್ಸ್​​ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    ಭಾರತದಲ್ಲೂ ಕೂಡ ಮಾ.22ರಂದು ಜನತಾ ಕರ್ಫ್ಯೂ ಘೋಷಣೆ ಮಾಡಿದ್ದ ಪ್ರಧಾನಿ ಮೋದಿಯವರು, ಅಂದು ಸಂಜೆ 5ಗಂಟೆಗೆ ಎಲ್ಲರೂ ತಮ್ಮ ಮನೆಯ ಬಾಲ್ಕನಿ, ಟೆರೇಸ್​ಗೆ ಬಂದು 5 ನಿಮಿಷ ಚಪ್ಪಾಳೆ ತಟ್ಟುವ ಮೂಲಕ ಕರೊನಾ ವಾರಿಯರ್ಸ್​ಗೆ ಕೃತಜ್ಞತೆ ಸಲ್ಲಿಸಿ ಎಂದು ಮನವಿ ಮಾಡಿದ್ದರು. ಅದಕ್ಕೆ ಅಭೂತಪೂರ್ವ ಸ್ಪಂದನೆಯೂ ಸಿಕ್ಕಿತ್ತು.
    ಈಗ ಈ ಚಪ್ಪಾಳೆ ವಿಚಾರವಾಗಿ ಗೂಗಲ್​ ಒಂದು ಆಸಕ್ತಿದಾಯಕ ವಿಚಾರವನ್ನು ತಿಳಿಸಿದೆ.

    Clapping (ಚಪ್ಪಾಳೆ) ಎಂಬ ಶಬ್ದ ಈ ಬಾರಿ ಗೂಗಲ್​​ನಲ್ಲಿ ಅತಿ ಹೆಚ್ಚು ಸರ್ಚ್​ ಆಗಿದೆಯಂತೆ. ಈ ವರ್ಷ ಇಲ್ಲಿಯವರೆಗೆ ಜಗತ್ತಿನಾದ್ಯಂತ ಚಪ್ಪಾಳೆ ಎಂಬ ಶಬ್ದದ ಹುಡುಕಾಟ ಗರಿಷ್ಠ ಮಟ್ಟದ ದಾಖಲೆ ಬರೆದಿದೆ ಎಂಬ ವಿಚಾರವನ್ನು ಗೂಗಲ್​ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿಕೊಂಡಿದೆ. ಅಷ್ಟೇ ಅಲ್ಲ, ಈ ಶಬ್ದ ಅತಿ ಹೆಚ್ಚು ಹುಡುಕಲ್ಪಟ್ಟಿದ್ದು ಯುಕೆಯಲ್ಲಿ. ಭಾರತ ಮೂರನೇ ಸ್ಥಾನದಲ್ಲಿದ್ದು, ಸಿಂಗಪುರ ಎರಡನೇ ಸ್ಥಾನದಲ್ಲಿದೆ. ಐರ್ಲೆಂಡ್​ ಮೂರನೇ ಹಾಗೂ ಯುಎಇಗಳು ನಾಲ್ಕನೇ ಸ್ಥಾನದಲ್ಲಿವೆ.

    Clapping ಎಂಬ ಶಬ್ದವನ್ನಿಟ್ಟುಕೊಂಡು ವಿವಿಧ ದೇಶಗಳು ಗೂಗಲ್​ ಬಳಿ ಹಲವು ಪ್ರಶ್ನೆಗಳನ್ನು ಕೇಳಿವೆ. 5 PM Clapping ಎಂದು ಭಾರತದಲ್ಲಿ ಅತಿ ಹೆಚ್ಚು ಬಾರಿ ಸರ್ಚ್​ ಆದರೆ, ಕೆನಡಾದಲ್ಲಿ 7pm Clapping ಎಂದು ಹುಡುಕಿದ್ದಾರೆ. ಹೀಗೆ ಯಾವಾಗ ಚಪ್ಪಾಳೆ ತಟ್ಟಬೇಕು ( When To Clap) ಎಂದು ಕೂಡ ಅನೇಕ ಜನರು ಗೂಗಲ್​ ಬಳಿ ಪ್ರಶ್ನೆ ಮಾಡಿದ್ದಾರೆ. ಇವೆಲ್ಲವುಗಳಲ್ಲಿ Why are People Clapping( ಜನರು ಯಾಕೆ ಚಪ್ಪಾಳೆ ತಟ್ಟಬೇಕು?) ಎಂಬ ಪ್ರಶ್ನೆ ಟಾಪ್​ ಟ್ರೆಂಡಿಂಗ್​​ನಲ್ಲಿದೆ.

    ಗೂಗಲ್​ ಕೂಡ ಆರೋಗ್ಯ ಸಿಬ್ಬಂದಿಗೆ ಡೂಡಲ್​ ಮೂಲಕ ವಿವಿಧ ರೀತಿಯಲ್ಲಿ ಧನ್ಯವಾದ ತಿಳಿಸುತ್ತಿದೆ. ಹಾಗೇ ಇನ್ಸ್ಟಾಗ್ರಾಂ ಸ್ಟೋರಿಗಳಲ್ಲೂ ಕೆಲವು ಭಾವನಾತ್ಮಕ ಫೋಟೋಗಳನ್ನು ಹಾಕಿ ಜನರಲ್ಲೂ ಅರಿವು ಮೂಡಿಸುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts