More

    ಭಾರತದಲ್ಲಿ ಗೂಗಲ್​ ಪೇ ತಾಂತ್ರಿಕ ದೋಷ: ಇದ್ದಕ್ಕಿದ್ದಂಗೆ ಡಿಲೀಟ್​ ಆಗುತ್ತಿವೆ ಅಕೌಂಟ್​ಗಳು

    ನವದೆಹಲಿ: ಪ್ರಸಿದ್ಧ ಪೇಮೆಂಟ್​ ಆ್ಯಪ್​ ಆಗಿರುವ ಗೂಗಲ್​ ಪೇ ಭಾರತದಲ್ಲಿ ತಾಂತ್ರಿಕ ದೋಷವನ್ನು ಎದುರಿಸುತ್ತಿದೆ. ಇಂದು ಬೆಳಗ್ಗೆಯಿಂದ ಈ ಕುರಿತಾಗಿ ದೂರುಗಳು ಕೇಳಿ ಬರುತ್ತಿದ್ದು, ಗೂಗಲ್​ ಪೇಗೆ ಅಟ್ಯಾಚ್​ ಆಗಿರುವ ಅಕೌಂಟ್​ಗಳನ್ನು ಆ್ಯಪ್​ ಏಕಾಏಕಿ ಡಿಲೀಟ್​ ಮಾಡಿದೆ ಎನ್ನಲಾಗಿದೆ.

    ಭಾರತದಲ್ಲಿ ಕೊಟ್ಯಂತರ ಜನರು ಗೂಗಲ್​ ಪೇ ಬಳಕೆ ಮಾಡುತ್ತಿದ್ದು ಅದರಲ್ಲಿ ಅನೇಕರಿಗೆ ಈ ಸಮಸ್ಯೆ ಉಂಟಾಗಿರುವುದು ಕಂಡುಬಂದಿದೆ. ಗೂಗಲ್​ ಪೇಗೆ ಅಟ್ಯಾಚ್​​ ಆಗಿರುವ ಅಕೌಂಟ್​ಗಳು ಆ್ಯಪ್​ನಲ್ಲಿ ಕಾಣಸಿಗುತ್ತಿಲ್ಲ. ಅಕೌಂಟನ್ನು ಆ್ಯಡ್​ ಮಾಡಲು ಹೋದರೆ ಎಸ್​ಬಿಐ ಬಿಟ್ಟು ಬೇರಾವ ಬ್ಯಾಂಕನ್ನು ಆ್ಯಪ್​ ತೋರಿಸುತ್ತಿಲ್ಲ. ಅಕೌಂಟ್​ ಆ್ಯಡ್​ ಮಾಡುವುದಕ್ಕೆ ವೇರಿಫಿಕೇಶನ್​ ಆಗುತ್ತಿಲ್ಲ ಎನ್ನುವಂತಹ ಹಲವು ದೂರುಗಳನ್ನು ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ.

    ಪೇಮೆಂಟ್​ ಆ್ಯಪ್​ಗಳಲ್ಲಿ ಮೊದಲನೇ ಸ್ಥಾನದಲ್ಲಿರುವ ಗೂಗಲ್​ ಪೇ ಅನ್ನು ತಿಂಗಳೊಂದಕ್ಕೆ ಪ್ರಪಂಚದಾದ್ಯಂತ 67 ಮಿಲಿಯನ್​ಗೂ ಹೆಚ್ಚು​ ಜನರು ಬಳಸುತ್ತಾರೆ. ಮೊದಲು ಗೂಗಲ್​ ತೆಜ್​ ಹೆಸರಿನಲ್ಲಿದ್ದ ಆ್ಯಪ್​ನ್ನು 2018ರಲ್ಲಿ ಗೂಗಲ್​ ಪೇ ಎಂದು ಮರುನಾಮಕರಣ ಮಾಡಲಾಯಿತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts