More

    ಗಣಪತಿಗೆ ಸಡಗರದ ವಿದಾಯ : ಡಿಜೆಗೆ ಹೆಜ್ಜೆ ಹಾಕಿದ ಯುವಕರು

    ವಿಜಯಪುರ: ಪ್ರತಿಧ್ವನಿಸಿದ ಪಟಾಕಿ ಸದ್ದು, ಡಿಜೆಗಳ ಅಬ್ಬರ, ಮುಗಿಲು ಮುಟ್ಟಿದ ಗಣಪತಿ ಬಪ್ಪಾ ಮೋರಯ್ಯ ಉದ್ಘೋಷ.

    ನಗರದಲ್ಲಿ ಮಂಗಳವಾರ ಸಂಜೆ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಗೂ ಮುನ್ನ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳಿವು. ಏಳನೇ ದಿನದ ಗಣೇಶನ ವಿಸರ್ಜನೆ ಮೆರವಣಿಗೆಯಲ್ಲಿ ಯುವಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಳೆಯ ನಡುವೆಯೂ ಶಿಸ್ತುಬದ್ಧ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಈ ಬಾರಿ ಕೆಲವು ಸಂಘಟನೆಗಳು ಮಧ್ಯಾಹ್ನವೇ ಗಣೇಶನ ವಿಸರ್ಜನೆ ಮೆರವಣಿಗೆ ಚಾಲನೆ ನೀಡಿದವು. ಗಣಪತಿ ಭಕ್ತಿಗೀತೆಗಳು, ಅಂತಾರಾಜ್ಯ ಕಲಾ ತಂಡಗಳ ವೈಭವ ಕಣ್ಮನ ಸೆಳೆದವು.

    ಏಳು ದಿನಗಳ ಕಾಲ ವಿಶೇಷ ಮಂಟಪದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗಿತ್ತು. ಕೆಲವು ಗಜಾನನ ಮಂಡಳಿಗಳು ವಿವಿಧ ಕಲಾತಂಡಗಳಿಗೆ ಆಹ್ವಾನ ನೀಡಿದ್ದವು. ಅಂತಾರಾಜ್ಯ ಕಲಾವಿದರಿಂದ ಮೊಳಗಿದ ಡೋಲಿನ ನಿನಾದ ಗಮನ ಸೆಳೆಯಿತು. ನಗರದ ನಾನಾ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ ದೊಡ್ಡ ಗಣಪತಿ ಮೂರ್ತಿಗಳ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಾಂಧಿಚೌಕ್, ಸಿದ್ಧೇಶ್ವರ ದೇವಸ್ಥಾನದ ಮಾರ್ಗವಾಗಿ ಸಾಗಿದವು.

    ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಶ್ರೀನಾಥ ಕುಲಕರ್ಣಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಹಾಗೂ ವಿಜಯಪುರದ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

    300ಕ್ಕೂ ಅಧಿಕ ಮಂಡಳಿಗಳು ಭಾಗಿ: ಸ್ವಾಮಿ ವಿವೇಕಾನಂದ ಸೇನೆ ಹಾಗೂ ಗಜಾನನ ಮಹಾಮಂಡಳದ ವತಿಯಿಂದ ಏಳನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದಲ್ಲಿ 300ಕ್ಕೂ ಅಧಿಕ ಗಜಾನನ ಮಂಡಳಿಗಳು ಭಾಗವಹಿಸಿದ್ದವು. ಸಿದ್ದೇಶ್ವರ ದೇವಸ್ಥಾನದ ಮುಂಭಾಗದಿಂದ ವಿಸರ್ಜನೆ ಮೆರವಣಿಗೆ ನಡೆಯಿತು. ಗಾಂಧಿವೃತ್ತದ ಮಾರ್ಗವಾಗಿ ತಾಜ್‌ಬಾವಡಿ ಆವರಣದ ಕೃತಕ ಹೊಂಡದಲ್ಲಿ ವಿಸರ್ಜನೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts